ಸಾಂದರ್ಭಿಕ ಚಿತ್ರ 
ಬೆಂಗಳೂರು ದಕ್ಷಿಣ

3.2 ಲಕ್ಷ ರೂ. ಧೋಖಾ

ಕುದೂರು: ಸೋಲೂರು ಹೋಬಳಿಯ ಬಿಟ್ಟಸಂದ್ರಪಾಳ್ಯ ಗ್ರಾಮದ ವಾಹನ ಚಾಲಕ ಸಯದ್​ ಮುಬಾರಕ್​ ಪಾಷಾ ಎಂಬುವವರು ಗುರುವಾರ ಎಪಿಕೆ ಫೈಲ್​ ಕ್ಲಿಕ್​ ಮಾಡಿ ಹಣ ಕಳೆದುಕೊಂಡಿದ್ದಾರೆ.
ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಬಂದ ಆರ್​ಟಿಒ ಚಲನ್​ ಮಾದರಿಯ ೈಲ್​ ಕ್ಲಿಕ್​ ಮಾಡಿದ ನಂತರ ನೆಲಮಂಗಲ ಶಾಖೆಯ ಕೆನರಾ ಬ್ಯಾಂಕ್​ ಉಳಿತಾಯ ಖಾತೆಯಲ್ಲಿ ಹಂತಹಂತವಾಗಿ ಒಟ್ಟು 3.2 ಲಕ್ಷ ರೂ. ಕಳೆದುಕೊಂಡಿದ್ದಾರೆ. ರಾಮನಗರ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.