ಕಿರಣ್​ 
ಬೆಂಗಳೂರು ದಕ್ಷಿಣ

ನಗ್ನವಾಗಿ ಪೂಜೆಗೆ ಕುಳಿತರೆ ₹30 ಲಕ್ಷ!

ರಾಮನಗರ: ವಿವಸ್ತ್ರವಾಗಿ ಪೂಜೆಗೆ ಕುಳಿತರೆ 30 ಲ ರೂ. ಕೊಡಿಸುವೆ. ಅದಕ್ಕಾಗಿ ನಗ್ನ ೋಟೋ ಮತ್ತು ವಿಡಿಯೋ ಕಳಿಸು ಎಂದು ಯುವತಿಗೆ ಕಿರುಕುಳ ನೀಡಿದವನ ವಿರುದ್ಧ ರಾಮನಗರ ಮಹಿಳಾ ಠಾಣೆಯಲ್ಲಿ ಎ್​ಐಆರ್​ ದಾಖಲಾಗಿದೆ. ಇಲ್ಲಿನ ದೊಡ್ಡಮಣ್ಣುಗುಡ್ಡೆ ನಿವಾಸಿ ಕಿರಣ್​ ಆರೋಪಿ. ಅದೇ ಗ್ರಾಮದ ಯುವತಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿರಣ್​ ಬಂಧನಕ್ಕೆ ಬಲೆ ಬೀಸಿದ್ದಾರೆ.
ಏನಿದು ಪ್ರಕರಣ?
ಕಾರುಚಾಲಕನಾಗಿರುವ ಕಿರಣ್​ ತನ್ನದೇ ಗ್ರಾಮದ ಯುವತಿಗೆ ಏ.12ರಂದು ದೂರವಾಣಿ ಕರೆ ಮಾಡಿ, ಪೂಜೆಯೊಂದಕ್ಕೆ ನಗ್ನವಾಗಿ ಕುಳಿತರೆ ಒಂದೇ ದಿನದಲ್ಲಿ 30 ಲ ರೂ. ಪಡೆಯುವ ಅವಕಾಶ ಕೊಡಿಸುವೆ ಎಂದು ಪುಸಲಾಯಿಸಿದ್ದ. ಅಲ್ಲದೇ ಕೆಲ ಯುವತಿಯರು ಈಗಾಗಲೇ ಪೂಜೆಗೆ ಕೂರಲು ಒಪ್ಪಿಕೊಂಡಿದ್ದರು. ಆದರೆ, ಅವರ ದೇಹದಲ್ಲಿ ಹುಟ್ಟುಮಚ್ಚೆ ಇದ್ದ ಕಾರಣ ಅವರನ್ನು ತಿರಸ್ಕರಿಸಲಾಗಿದೆ. ಹಾಗಾಗಿ ನಿನ್ನ ನಗ್ನ ಪೋಟೋ, ವಿಡಿಯೋ ಕಳುಹಿಸು. ನಿನ್ನ ದೇಹದ ಮೇಲೆ ಮಚ್ಚೆ ಇಲ್ಲದಿದ್ದರೆ, ಪೂಜೆಗೆ ಒಪ್ಪಿ ನಿನಗೆ ಹಣ ಕೊಡುತ್ತಾರೆ ಎಂದು ವಾಟ್ಸ್​ಆ್ಯಪ್​ಗೆ ಪದೇಪದೆ ಸಂದೇಶ ಕಳುಹಿಸಿ, ೋಟೋ, ವಿಡಿಯೋಗಾಗಿ ಪೀಡಿಸುತ್ತಿದ್ದ. ಈ ಬಗ್ಗೆ ಮನೆಯವರ ಬಳಿ ಯುವತಿ ಹೇಳಿಕೊಂಡಿದ್ದಾಳೆ. ಬಳಿಕ ಯುವತಿ ಕುಟುಂಬದವರು ಗ್ರಾಮದ ಮುಖಂಡರಿಗೆ ಹೇಳಿ ನ್ಯಾಯಪಂಚಾಯಿತಿ ಮಾಡಿಸಿದ್ದಾರೆ. ಆದರೂ ಸುಮ್ಮನಾಗದ ಕಿರಣ್​ ಯುವತಿ ಮತ್ತು ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಇದರಿಂದ ಬೇಸತ್ತ ಯುವತಿ ಮಹಿಳಾ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾಳೆ.
ಗ್ರಾಮಸ್ಥರ ಆತಂಕ
ಕಿರಣ್​ ವಾಮಾಚಾರ ಮಾಡುವ ಜಾಲದಲ್ಲಿ ಸಿಲುಕಿದ್ದು, ಈಗಾಗಲೇ ಹಲವು ಯುವತಿಯರನ್ನು ಈ ರೀತಿ ಬಳಸಿಕೊಂಡಿರುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿದರೆ ಹೆಚ್ಚಿನ ವಿಷಯ ಬೆಳಕಿಗೆ ಬರಲಿದೆ. ಹಾಗಾಗಿ ಉನ್ನತಮಟ್ಟದ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.