ಮಳೆಗಾಳಿಗೆ ಮಕಾಡೆ ಮಲಗಿದ 3000 ಗಿಡ 
ಬೆಂಗಳೂರು ದಕ್ಷಿಣ

3 ಎಕರೆ ಬಾಳೆ ನೆಲಸಮ

ಮಾಗಡಿ: ತಾಲೂಕಿನಾದ್ಯಂತ ಕಳೆದ 2 ದಿನಗಳಿಂದ ಸುರಿದ ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ವಿವಿಧೆಡೆ ಅಪಾರ ಬೆಳೆಹಾನಿಯಾಗಿದ್ದು, ಹಕ್ಕಿನಾಳು ಗ್ರಾಮದಲ್ಲಿ 3 ಎಕರೆ ಬಾಳೆ ತೋಟವೇ ನೆಲಸಮವಾಗಿದೆ.
ಹಕ್ಕಿನಾಳು ಗ್ರಾಮದ ಕೃಷ್ಣಪ್ಪ ಅವರು 3 ಎಕರೆಯಲ್ಲಿ 3000 ಬಾಳೆ ಗಿಡ ನಾಟಿಮಾಡಿದ್ದರು. ಆದರೆ ಬಿರುಗಾಳಿ ಮಳೆಗೆ ಇಡೀ ಬಾಳೆ ಹಾನಿಯಾಗಿದೆ. ಟನೆ ಬೆನ್ನಲ್ಲೇ ನೆಲಮಂಗಲ ತಹಸೀಲ್ದಾರ್​ ಬೀರಪ್ಪ ಪೂಜಾರ್​ ಹಾಗೂ ಕಂದಾಯ ಇಲಾಖೆ, ಕೃಷಿ ಇಲಾಖೆ ಅಧಿಕಾರಿಗಳು ಗುರುವಾರ ತೋಟಕ್ಕೆ ಭೇಟಿ ನೀಡಿ ಮಳೆ, ಗಾಳಿಯಿಂದ ಹಾನಿಯಾದ ಬಾಳೆಯನ್ನು ವೀಸಿ, ಪ್ರತಿ ಹೆಕ್ಟೆರ್​ಗೆ 17 ಸಾವಿರ ರೂ. ಪರಿಹಾರ ಕೊಡುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಪತ್ನಿಗೆ ಹೇಗೆ ಮುಖ ತೋರಿಸಲಿ?
ಹೆಂಡತಿಯ ಮಾಂಗಲ್ಯ, ಚಿನ್ನಾಭರಣ ಅಡವಿಟ್ಟು 8 ಲಕ್ಷ ಸಾಲ ಪಡೆದು ಬಾಳೆ ಗಿಡ ನಾಟಿಮಾಡಿದ್ದೆ. 40ರಿಂದ 45 ಲಕ್ಷ ರೂ. ಲಾಭದ ನಿರೀೆಯಲ್ಲಿದ್ದೆ. ಇನ್ನೇನು ಸಲು ಕೈಸೇರುತ್ತದೆ ಎನ್ನುವಷ್ಟರಲ್ಲಿ ಬಿರುಗಾಳಿ ಮಳೆಗೆ ಬಾಳೆ ಮಕಾಡೆ ಮಲಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಯಿತು. ಪತ್ನಿಯ ಮಾಂಗಲ್ಯ, ಚಿನ್ನಾಭರಣ ಬಿಡಿಸಿಕೊಡುವುದಾದರೂ ಹೇಗೆ? ಪತ್ನಿಗೆ ಮುಖ ತೋರಿಸಲೂ ಸಾಧ್ಯವಾಗುತ್ತಿಲ್ಲ. ಅವಡಗಳಿಂದ ವ್ಯವಸಾಯ ಮಾಡುವುದಾದರೂ ಹೇಗೆ? ಎಂದು ಕೃಷ್ಣಪ್ಪ ಕಣ್ಣೀರಿಟ್ಟರು.