ರಾಮನಗರ ಎಸ್‌ಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಆಪರೇಷನ್ ರೈಸ್ ಮತ್ತು ಬೇಡ ಬ್ರೋ ಅಭಿಯಾನಕ್ಕೆ ಎಎಸ್‌ಪಿ ರಾಜೇಂದ್ರ ಚಾಲನೆ ನೀಡಿದರು. ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿ ರಜನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮರಿಸ್ವಾಮಿ ಇದ್ದರು. 
ಬೆಂಗಳೂರು ದಕ್ಷಿಣ

ಜಿಲ್ಲೆಯಲ್ಲಿ 180 ಕೆಜಿ ಗಾಂಜಾ ವಶ

ಪ್ರಮುಖ ಮುಖ್ಯಾಂಶಗಳು

  • ಎಸ್‌ಪಿ ಆರ್. ಶ್ರೀನಿವಾಸ್‌ಗೌಡ ಮಾಹಿತಿ
  • ಆಪರೇಷನ್ ರೈಸ್, ಬೇಡ ಬ್ರೋ ಅಭಿಯಾನ
  • 1.71 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶ
ರಾಮನಗರ
ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅವಿರತವಾಗಿ ಶ್ರಮಿಸುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಾದಕ ವಸ್ತು ಮುಕ್ತ ಕರ್ನಾಟಕದ ನಿರ್ಮಾಣದ ಅಂಗವಾಗಿ ಪೊಲೀಸ್ ಇಲಾಖೆ ಮಂಗಳವಾರ ಹಮ್ಮಿಕೊಂಡಿದ್ದ ಆಪರೇಷನ್ ರೈಸ್ ಹಾಗೂ ಬೇಡ ಬ್ರೋ ಅಭಿಯಾನದ ಅಧ್ಯಕ್ಷತೆವಹಿಸಿ ವಾತನಾಡಿದರು.
ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಾಧ್ಯಂತ ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆಯ ವಿರುದ್ಧದ 229 ಪ್ರಕರಣಗಳನ್ನು ದಾಖಲಿಸಿ, 1.71 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಾದಕ ವಸ್ತು ಮುಕ್ತ ಜಿಲ್ಲೆ ನಿರ್ವಾಣಕ್ಕೆ ನಮ್ಮ ಇಲಾಖೆ ಪಣತೊಟ್ಟು ಕೆಲಸ ವಾಡುತ್ತಿದೆ. 2023ರ ಜನವರಿಯಿಂದ 2026ರ ಜೂನ್ ಅಂತ್ಯದವರೆಗೆ ಜಿಲ್ಲೆಯಲ್ಲಿ 180 ಕೆಜಿ 597 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ನಾಶವಾಡಲಾಗಿದೆ ಎಂದು ತಿಳಿಸಿದರು.
ಅದೇ ರೀತಿ 848 ಗ್ರಾಂ 35 ಮಿಲಿಸಿಂಥೆಟಿಕ್ಸ್ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 323 ಮಂದಿಯನ್ನು ಮಾದಕ ವಸ್ತು ಸೇವನೆ ಮತ್ತು ಮಾರಾಟ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ವಿವರಿಸಿದರು.
ಮಾದಕ ವಸ್ತು ಮಾರಾಟ ಮತ್ತು ಸೇವನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸುವ ಜತೆಗೆ ಅವರ ವಿರುದ್ಧ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯದಲ್ಲಿ ಶಿಕ್ಷೆ ವಿಧಿಸಲು ಕ್ರಮವಹಿಸಲಾಗಿದೆ. ಇದುವರೆಗೆ ಜಿಲ್ಲೆಯಲ್ಲಿ 71 ಮಂದಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗಿದ್ದು, ಶಿಕ್ಷೆಗೊಳಗಾದವರಲ್ಲಿ 64 ಮಂದಿ ಬಳಕೆದಾರರು, 7 ಮಂದಿ ಪೆಡ್ಲರ್‌ಗಳು ಸೇರಿದ್ದಾರೆ ಎಂದು ತಿಳಿಸಿದರು.

ವಿವಿಧ ಇಲಾಖೆಗಳ ಸಹಯೋಗ:

ರಾಜ್ಯದಲ್ಲಿ ಮಾದಕ ವಸ್ತುಗಳ ವಿರುದ್ಧ ಜನಜಾಗೃತಿಗಾಗಿ ಪೊಲೀಸ್ ಇಲಾಖೆ ಉನ್ನತ ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಮಕ್ಕಳ ಹಕ್ಕುಗಳ ಇಲಾಖೆ ಸೇರಿ 19 ಇಲಾಖೆಗಳ ಸಹಯೋಗದಲ್ಲಿ ಆಪರೇಷನ್ ರೈಸ್ ಮತ್ತು ಬೇಡಬ್ರೋ ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಅಭಿಯಾನ ಯಶಸ್ವಿಎಲ್ಲರೂ ಕೈಜೋಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್‌ಗೌಡ ಮನವಿ ವಾಡಿದರು.
ಡ್ರಗ್ಸ್ ಆಮೀಷವನ್ನು ಮೊದಲ ಹಂತದಲ್ಲೇ ತಿರಸ್ಕರಿಸುವುದು, ಡ್ರಗ್ಸ್ ಕುರಿತ ಮಾಹಿತಿಯನ್ನು ಸಂಬಂಧಪಟ್ಟವರಿಗೆ ತಿಳಿಸುವುದು, ಡ್ರಗ್ಸ್ ವ್ಯಸನದಿಂದ ಹೊರಬರುವ ಪ್ರಯತ್ನದಲ್ಲಿರುವವರಿಗೆ ಬೆಂಬಲ ನೀಡುವುದು, ಡ್ರಗ್ಸ್ ವಿರುದ್ಧ ಯುವಕರನ್ನು ಸಶಕ್ತಗೊಳಿಸುವುದೇ ಆಪರೇಷನ್ ರೈಸ್ ಆಗಿದ್ದು, ಯುವಕರು ಮಾದಕ ವಸ್ತುಗಳ ಸೇವನಗೆ ಸ್ನೇಹಿತರು ಪ್ರಚೋದಿಸಿದಾಗ, ಒತ್ತಾಯ ಮಾಡಿದಾಗ ಬೇಡ ಬ್ರೋ ಎನ್ನುವ ಮೂಲಕ ಅದರಿಂದ ದೂರ ಉಳಿಯಿರಿ, ನಿಮ್ಮ ಸ್ನೇಹಿತರಿಗೂ ದೂರ ಉಳಿಯಲು ತಿಳಿಸಿ, ನೀವೂ ಮಾದಕ ವಸ್ತು ಸೇವಿಸಬೇಡಿ, ಬೇರೆಯವರಿಗೂ ಸೇವಿಸಲು ಬಿಡಬೇಡಿ ಎಂದು ಕರೆನೀಡಿದರು.

ಚಟವಾಗುತ್ತದೆ ಎಚ್ಚರ:

ಜಿಲ್ಲಾ ವಾನಸಿಕ ಆರೋಗ್ಯ ವಿಭಾಗದ ವೈದ್ಯಾಧಿಕಾರಿ ಡಾ.ಕುಮಾರ್ ಮಾತನಾಡಿ, ಚಿಯರ್ ಅಪ್ ಮಾಡುವ ಉದ್ದೇಶದಿಂದ ಆರಂಭಗೊಳ್ಳುವ ಮಾದಕ ವಸ್ತುಗಳ ಸೇವನೆ ಕ್ರಮೇಣ ಚಟವಾಗಿ ಪರಿಣಮಿಸಿ, ನಮ್ಮ ಇಡೀ ಭವಿಷ್ಯವನ್ನು ಹಾಳು ಮಾಡುತ್ತದೆ ಎಂದು ತಿಳಿದರು.
ಮಾದಕ ವಸ್ತುಗಳ ಸೇವನೆ ಹಲವು ಅಪಾಯಕಾರಿ ಕಾಯಿಲೆಗಳಿಗೆ ದಾರಿವಾಡಿಕೊಡುತ್ತದೆ. ದೇಶದ ಆಸ್ತಿಯಾಗಿರುವ ಯುವ ಸಮುದಾಯ ಮಾದಕ ವಸ್ತುಗಳಿಂದ ದೂರವಿದ್ದು, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ದೇಶಕ್ಕೆ, ನಿಮ್ಮ ಕುಟುಂಬಕ್ಕೆ ನೀವು ಆಸ್ತಿಯಾಗಿ ಹೊರಹೊಮ್ಮಬೇಕು ಎಂದು ಕರೆನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಚಂದ್ರಯ್ಯ, ರಾಜೇಂದ್ರ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿ ರಜನಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮರಿಸ್ವಾಮಿ ಇದ್ದರು. ಅಭಿಯಾನದಲ್ಲಿ ಶಾಂತಿನಿಕೇತನ ಪಿಯು ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡು ಪ್ರವಾಣ ವಚನ ಸ್ವೀಕರಿಸಿದರು.