ರಾಮನಗರದ ವಕೀಲರ ಸಂದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ ಜಮೀನನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಚ್​.ಅಣ್ಣಯ್ಯನವರ್​ ಅವರಿಗೆ ಶಾಸಕ ಎಚ್​.ಎ. ಇಕ್ಬಾಲ್​ ಹುಸೇನ್​ ಹಸ್ತಾಂತರಿಸಿದರು. 
ಬೆಂಗಳೂರು ದಕ್ಷಿಣ

ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 1.6 ಎಕರೆ

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಹೆಸರಿಗೆ ಖಾತೆ
  • ಜಿಲ್ಲಾ ನ್ಯಾಯಾಧೀಶರಿಗೆ ದಾಖಲೆ ಹಸ್ತಾಂತರ
ರಾಮನಗರ
ತಾಲೂಕು ಪಂಚಾಯಿತಿ ಕಚೇರಿ ಸುಪರ್ದಿಯಲ್ಲಿದ್ದ 1 ಎಕರೆ 6 ಗುಂಟೆ ಜಮೀನನ್ನು ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರ ಹೆಸರಿಗೆ ಖಾತೆ ಮಾಡಿ ಹಸ್ತಾಂತರಿಸಲಾಯಿತು.
ರಾಮನಗರದ ವಕೀಲರ ಸಂದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಚ್​.ಎ.ಇಕ್ಬಾಲ್​ ಹುಸೇನ್​ ಅವರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಂ.ಎಚ್​.ಅಣ್ಣಯ್ಯನವರ್​ ಅವರಿಗೆ ಖಾತೆ ದಾಖಲೆಗಳನ್ನು ನೀಡಿದರು.
ಶಾಸಕ ಇಕ್ಬಾಲ್​ ಹುಸೇನ್​ ಮಾತನಾಡಿ, ರಾಮನಗರದಲ್ಲಿ ಸುಸಜ್ಜಿತ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮಾಡಬೇಕು ಎಂಬುದು ಹಲವು ವರ್ಷಗಳ ಕನಸು. ಪ್ರಸ್ತುತ ನ್ಯಾಯಾಲಯ ಸಂಕೀರ್ಣದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಇದರ ಬಗ್ಗೆ ಹಲವು ಬಾರಿ ವಕೀಲರ ಸಂದ ಪ್ರಮುಖರು ನಮ್ಮಲ್ಲಿ ಮನವಿ ಸಲ್ಲಿಸಿದ್ದರು ಎಂದರು.
ತಾಲೂಕು ಪಂಚಾಯಿತಿ ಹೆಸರಿನಲ್ಲಿದ್ದ ಜಮೀನನ್ನು ಇದೀಗ ಜಿಲ್ಲಾ ಪ್ರಧಾನ ನ್ಯಾಯಾಧೀಶರ ಹೆಸರಿಗೆ ಹಸ್ತಾಂತರಿಸಲಾಗಿದೆ. ಇದನ್ನು ಮಾಡಲು ಅನೇಕ ಅಡೆ ತಡೆಗಳು ಎದುರಾಗುತ್ತಿತ್ತು. ಒತ್ತಡಗಳು ಹೆಚ್ಚಾಗಿದ್ದವು. ಏನೇ ಆಗಲಿ ಆ ಜಾಗವನ್ನು ನ್ಯಾಯಾಂಗಕ್ಕೆ ನೀಡಬೇಕು ಎಂದು ಕೆಲಸ ಮಾಡಿದ್ದೇವೆ. ಅಲ್ಲಿಯವರೆಗೆ ನಾನು ವಕೀಲರ ಸಂಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದೆ, ಇಂದು ನಿಮ್ಮ ಬೇಡಿಕೆಯಂತೆ ಕೆಲಸ ಮಾಡಿಕೊಟ್ಟು ಖಾತೆ ದಾಖಲೆಗಳನ್ನು ತಂದು ಹಸ್ತಾಂತರಿಸಿದ್ದೇನೆ ಎಂದರು.
ಸುಸಜ್ಜಿತ ನ್ಯಾಯಾಲಯ ನಿರ್ಮಾಣವನ್ನು ಈ ಬಾರಿಯ ಬಜೆಟ್​ನಲ್ಲಿ ಘೋಷಣೆ ಮಾಡಿದ್ದೇವೆ. ಬಜೆಟ್​ ತಯಾರಿ ಬಹುತೇಕ ಮುಕ್ತಾಯವಾಗಿತ್ತು. ಆ ಹಂತದಲ್ಲಿ ಒಂದು ವಾರದ ಕಾಲಮಿತಿಯಲ್ಲಿ ನಿಮ್ಮ ಬೇಡಿಕೆಯನ್ನು ಬಜೆಟ್​ನಲ್ಲಿ ಸೇರಿಸಿದ್ದೇವೆ. ಮುಂದಿನ ತಿಂಗಳಲ್ಲೇ ಶಂಕುಸ್ಥಾಪನೆ ನೆರವೇರಿಸೋಣ, ಇನ್ನು ಒಂದುವರೆ ವರ್ಷದಲ್ಲಿ ಭವ್ಯವಾದ ನ್ಯಾಯಾಲಯವನ್ನು ಲೋಕಾರ್ಪಣೆ ಮಾಡುವ ಪ್ರಯತ್ನ ಮಾಡೋಣ. ವಕೀಲರ ಸಂದವರು, ಸಂಬಂಧಿಸಿದ ಎಲ್ಲರು ಹೈಕೋರ್ಟ್​ನಿಂದ ಶ್ರೀವಾಗಿ ಆಗಬೇಕಾದ ಅನುಮತಿ, ಇತರೆ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬೇಕು ಎಂದರು.
ನಗರಸಭೆ ಆಯುಕ್ತ ಡಾ.ಜಯಣ್ಣ, ವಕೀಲರ ಸಂಘದ ಶಿವಣ್ಣ, ಶ್ರೀವತ್ಸ, ತಿಮ್ಮೇಗೌಡ ಹಾಗೂ ಇತರರು ಮಾತನಾಡಿದರು. ವಕೀಲರ ಸಂದ ಕಾರ್ಯದರ್ಶಿ ಜಯರಾಮು, ಖಜಾಂಚಿ ಜ್ಯೋತಿ, ನಗರಸಭೆ ಸದಸ್ಯ ಬೈರೇಗೌಡ ಮುಂತಾದವರಿದ್ದರು.
ಶಾಸಕರು ಮುತುವರ್ಜಿ ವಹಿಸಿ ಜಾಗವನ್ನು ಒದಗಿಸಿಕೊಟ್ಟಿರುವುದು ಶ್ಲಾನೀಯ. ಪ್ರಸ್ತುತ ಸನ್ನಿವೇಶದಲ್ಲಿ ಸ್ಥಳಾವಕಾಶ ದೊರೆಯುವುದು ಕಷ್ಟ. ಸಿಕ್ಕಿರುವ ಜಾಗವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇದರಿಂದ ನ್ಯಾಯದಾನ ವ್ಯವಸ್ಥೆಗೆ ಮತ್ತಷ್ಟು ವೇಗ ಸಿಗಲಿದೆ.
> ಎಂ.ಎಚ್​.ಅಣ್ಣಯ್ಯನವರ್​
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ


ರಾಮನಗರ ನ್ಯಾಯಾಲಯಕ್ಕೆ 99 ವರ್ಷಗಳ ಇತಿಹಾಸವಿದೆ. ಮುಂದಿನ ವರ್ಷ ನ್ಯಾಯಪೀಠ ಸ್ಥಾಪನೆಯಾಗಿ 100 ವರ್ಷ ಪೂರೈಸಲಿದೆ. ಶಾಸಕ ಎಚ್​.ಎ. ಇಕ್ಬಾಲ್​ ಹುಸೇನ್​, ಡಿಸಿಎಂ ಡಿ.ಕೆ. ಶಿವಕುಮಾರ್​ ಅವರ ಪ್ರಯತ್ನದಿಂದಾಗಿ ಒಂದು ಎಕರೆ ಭೂಮಿ ಹಸ್ತಾಂತರವಾಗಿದೆ. ಶ್ರೀದಲ್ಲೇ ಪ್ರಧಾನ ನ್ಯಾಯಾಧೀಶರಿಂದ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಬೇಕು.
> ಕೆ.ಕೆಂಪಯ್ಯ
ಜಿಲ್ಲಾಧ್ಯಕ್ಷರು, ವಕೀಲರ ಸಂ, ಬೆಂಗಳೂರು ದಕ್ಷಿಣ ಜಿಲ್ಲೆ, ರಾಮನಗರ.