ಕುದೂರು ಹೋಬಳಿಯ ಬೆಟ್ಟಹಳ್ಳಿಪಾಳ್ಯದ ರೈತರ ಜಮೀನಿನಲ್ಲಿ ಬೋರ್ವೆಲ್ ಕೇಬಲ್ ವೈರ್ ಕಳ್ಳತನ ಮಾಡಿರುವುದು.
ಕುದೂರು: ಹೋಬಳಿಯ ಬೆಟ್ಟಹಳ್ಳಿಪಾಳ್ಯದಲ್ಲಿ ಒಂದೇ ರಾತ್ರಿಯಲ್ಲಿ 11 ರೈತರ ಬೋರ್ವೆಲ್ನ ಕೇಬಲ್ ವೈರ್ಗಳು ಕಳ್ಳತನವಾಗಿದ್ದು, ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಟ್ಟಹಳ್ಳಿ ಪಾಳ್ಯದ ಮರಿಸ್ವಾಮಿ, ಮಂಜುನಾಥ್, ರಾಮಾಂಜನೇಯ, ಶ್ರೀನಿವಾಸ್, ರವಿಕುಮಾರ್, ರಾಮಣ್ಣ, ಸುನಂದಮ್ಮ, ರಾಜಣ್ಣ, ರಂಗಪ್ಪ, ಧನಂಜಯ, ಮಂಜುನಾಥ, ಚನ್ನಗಿರಿಯಪ್ಪರ ಅವರ ಜಮೀನಿನಲ್ಲಿ ಕೇಬಲ್ ಕಳ್ಳತನವಾಗಿದ್ದು, ಈ ಪೈಕಿ ರೈತ ಮಂಜುನಾಥ ದೂರು ದಾಖಲಿಸಿದ್ದಾರೆ. ರಾತ್ರಿ ಸಮಯದಲ್ಲಿ ಜಮೀನುಗಳಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿಯೇ ಕಳ್ಳರು ಕೇಬಲ್ ವೈರನ್ನು ಕದ್ದಿದ್ದಾರೆ ಎನ್ನಲಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ಕಳ್ಳರ ಕಾಟ ಹೆಚ್ಚಾಗಿರುವುದು ರೈತರ ನಿದ್ದೆಗೆಡಿಸಿದೆ. ಇತ್ತೀಚೆಗಷ್ಟೇ ಈ ಗ್ರಾಮದಲ್ಲಿ ಬಾಳೆಗೊನೆ ಕದಿಯುತ್ತಿದ್ದ ಮೂವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಊಗ ಕೇಬಲ್ ಕಳವು ಪ್ರಕರಣಗಳು ವರದಿಯಾಗಿವೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.