ಬೆಂಗಳೂರು: ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವು (ಯುವಿಸಿಇ) ದೈಹಿಕ ನಿರ್ದೇಶಕ ಮತ್ತು ಯೋಗ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.
ಹುದ್ದೆಯು 11 ತಿಂಗಳ ತಾತ್ಕಾಲಿಕ ಅವಧಿಯದ್ದಾಗಿರುತ್ತದೆ. ಎಐಸಿಟಿಇ/ಯುಜಿಸಿ ನಿಯಮಗಳ ಅನುಸಾರ ಬಿ.ಪಿ.ಇಡಿ/ಎಂ.ಪಿಇಡಿ ಮತ್ತು ಯೋಗ ಶಿಕ್ಷಣದಲ್ಲಿ ಕನಿಷ್ಠ ಒಂದು ಸರ್ಟಿಫಿಕೇಟ್ ಕೋರ್ಸ್ ಪ್ರಮಾಣಪತ್ರ ಹೊಂದಿರುವ ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಯುವಿಸಿಇ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಅ.21ರೊಳಗೆ ಸಲ್ಲಿಸಬಹುದು ಎಂದು ಯುವಿಸಿಇ ಪ್ರಭಾರ ಕುಲಸಚಿವರು ಪ್ರಕಟಣೆ ಹೊರಡಿಸಿದ್ದಾರೆ.