ಬೆಳಗಾವಿ ಜಿಲ್ಲೆಯ ಕಬ್ಬು ಕಟಾವು ಆರಂಭವಾಗಿರುವುದು. 
ಬೆಂಗಳೂರು

ಬೆಡಕಿಹಾಳ ಕಾರ್ಖಾನೆಯಿಂದ ಕಬ್ಬಿಗೆ 4200 ರೂ.ಬೆಲೆ ಘೋಷಣೆ

ಗರಿಷ್ಠ ಬೆಲೆ ನೀಡಲು ಮುಂದಾದ ವೆಂಕಟೇಶ್ವರ ಪವರ ಪ್ರಾಜೆಕ್ಟ್. ಲಿ.

ಬೆಡಕಿಹಾಳ ಕಾರ್ಖಾನೆಯಿಂದ ಕಬ್ಬಿಗೆ 4200 ದರ ಘೋಷಣೆ

ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಬೆಡಕಿಹಾಳ ಗ್ರಾಮದ ವೆಂಕಟೇಶ್ವರ ಪವರ ಪ್ರೋಜೆಕ್ಟ್ ಲಿ.ಸಕ್ಕರೆ ಕಾರ್ಖಾನೆಯು ಪ್ರಸ್ತುತ ಕಬ್ಬು ಅರಿಯುವ ಹಂಗಾಮಿನ 2026-27 ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ 4200 ರೂ.ದರ ನೀಡಲು ಆಡಳಿತ ಮಂಡಳಿ ನಿರ್ಧರಿಸಿದ್ದು,ಈ ಮೂಲಕ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ದರ ನೀಡಲಿರುವ ಕಾರ್ಖಾನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೊದಲ ಕಂತು 3800,ಎರಡನೇ ಕಂತು 100 ರೂ,ಮೂರನೇ ಕಂತು ಸಕ್ಕರೆ ದರ ಪ್ರತಿ ಕೆಜಿಗೆ 50 ರೂ.ಗಿಂತ ಹೆಚ್ಚಾದಲ್ಲಿ ಹೆಚ್ಚುವರಿಯಾಗಿ ಪ್ರತಿ ಟನ್ ಗೆ 300 ರೂ. ನೀಡಲು ಕಾರ್ಖಾನೆ ಆಡಳಿತ ಮಂಡಳಿ ಮುಂದಾಗಿದೆ‌.

ವೆಂಕಟೇಶ್ವರ ಸಕ್ಕರೆ ಕಾರ್ಖಾನೆಯ ಈ ನಿರ್ಧಾರದಿಂದ ಸುತ್ತಲಿನ ನಿಪ್ಪಾಣಿ,ಚಿಕ್ಕೋಡಿ, ಕಾಗವಾಡ,ರಾಯಬಾಗ ಸೇರಿದಂತೆ ಜಿಲ್ಲೆಯ ಕಬ್ಬು ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.