ವಿಜಯ ದಶಮಿ ಅಂಗವಾಗಿ ನಗರದ ಪ್ರತಿಭಾ ಜುವೆಲ್ಲರಿ ಹೌಸ್‌ನಲ್ಲಿ ಬುಧವಾರ ರಾಮಾಯಣದ ‘ಸುಂದರ ಕಾಂಡ’ ಭಾಗದ ಪಾರಾಯಣ ಮತ್ತು ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. File photo
ಬೆಂಗಳೂರು

ಪ್ರತಿಭಾ ಜುವೆಲ್ಲರಿಯಲ್ಲಿ ಪ್ರತಿ ಗ್ರಾಹಕರಿಗೂ ರಿಯಾಯಿತಿ

ವಿಶೇಷ ಸಂದರ್ಭದಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುವುದು ಹಳೆಯ ಫ್ಯಾಷನ್ ಆಗಿದೆ. ಆದರೆ, ಖರೀದಿ ಮಾಡುವ ಪ್ರತಿ ಗ್ರಾಹಕರಿಗೂ ವಿಶೇಷ ರಿಯಾಯಿತಿ ನೀಡುವುದು ಟ್ರೆಂಡ್ ಆಗಿದೆ... ಇವು ರಿಚ್ಮಂಡ್ ಸರ್ಕಲ್‌ನಲ್ಲಿರುವ ಪ್ರತಿಭಾ ಜುವೆಲ್ಲರಿ ಹೌಸ್‌ನ ಮಾಲೀಕರಾದ ಸಕಲಾ ಶರತ್‌ಕುಮಾರ್ ನುಡಿಗಳು.

ಬೆಂಗಳೂರು: ವಿಶೇಷ ಸಂದರ್ಭದಲ್ಲಿ ಖರೀದಿ ಮಾಡುವ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುವುದು ಹಳೆಯ ಫ್ಯಾಷನ್ ಆಗಿದೆ. ಆದರೆ, ಖರೀದಿ ಮಾಡುವ ಪ್ರತಿ ಗ್ರಾಹಕರಿಗೂ ವಿಶೇಷ ರಿಯಾಯಿತಿ ನೀಡುವುದು ಟ್ರೆಂಡ್ ಆಗಿದೆ... ಇವು ರಿಚ್ಮಂಡ್ ಸರ್ಕಲ್‌ನಲ್ಲಿರುವ ಪ್ರತಿಭಾ ಜುವೆಲ್ಲರಿ ಹೌಸ್‌ನ ಮಾಲೀಕರಾದ ಸಕಲಾ ಶರತ್‌ಕುಮಾರ್ ನುಡಿಗಳು.

ವಿಜಯದಶಮಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದಸರಾ, ದೀಪಾವಳಿ ಮಾತ್ರವಲ್ಲ. ಲಾಭಾಂಶದಲ್ಲಿ ಒಂದಿಷ್ಟು ರಿಯಾಯಿತಿ ನೀಡುವುದರಿಂದಲೇ ತಲೆಮಾರುಗಳಿಂದ ತಲೆಮಾರಿಗೆ ಗ್ರಾಹಕರು ನಮ್ಮಲ್ಲಿಯೇ ಚಿನ್ನ ಖರೀದಿ ಮಾಡುತ್ತಿದ್ದಾರೆ. ಪ್ರಸ್ತುತ ಲಾಭ ಎನ್ನುವುದು ವ್ಯಾಲ್ಯೂ ಎಡಿಷನ್ ಒಂದರಲ್ಲಿಯೇ ಇದೆ. ಅದರಲ್ಲಿಯೇ ವೇಸ್ಟೇಜ್, ಕೂಲಿ ಮತ್ತು ಲಾಭ ಅಡಗಿದೆ. ಮೇಕಿಂಗ್‌ನಲ್ಲಿಯೇ ಗ್ರಾಹಕರಿಗೆ ರಿಯಾಯಿತಿ ನೀಡಲಾಗುತ್ತಿದೆ ಎಂದು ರಿಯಾಯಿತಿ ಕುರಿತು ಮಾತನಾಡಿದರು.

ನಿರಂತರವಾಗಿ ಪ್ರತಿಭೆ ಶೋಧ

ಜುವೆಲ್ಲರಿ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಹೊಸ ಮಳಿಗೆಗಳು ಆರಂಭವಾಗುತ್ತಿದ್ದರೂ ಜನ ಖರೀದಿ ಮಾಡುತ್ತಿದ್ದಾರೆ. ಆದರೆ ನಮ್ಮ ಗ್ರಾಹಕರು ಎಲ್ಲಿಯೇ ಹೋದರೂ ಮನಸ್ಸಿಗೆ ಒಪ್ಪುವ ಡಿಸೈನ್‌ಗಾಗಿ ಕಡೆಗೆ ನಮ್ಮಲ್ಲಿಯೇ ಬರುತ್ತಾರೆ. ಅದು ನಮ್ಮ ಜುವೆಲ್ಲರಿ ವಿಶೇಷ. ಹಬ್ಬ-ಹರಿದಿನ ಮಾತ್ರವಲ್ಲ, ಉಳಿದ ದಿನಗಳಲ್ಲೂ ವರ್ಷಪೂರ್ತಿ ಎಕ್ಸ್‌ಕ್ಲೂಷಿವ್ ಡಿಸೈನ್‌ನ ಆಭರಣಗಳು ನಮ್ಮಲ್ಲಿ ಇದ್ದೇ ಇರುತ್ತದೆ. ಇದಕ್ಕಾಗಿಯೇ ನಮ್ಮ ಮಳಿಗೆ ಹೆಸರು ‘ಪ್ರತಿಭಾ ಜುವೆಲ್ಲರಿ’. ಪ್ರತಿಭೆಯನ್ನು ಶೋಧಿಸುವ ಕೆಲಸ ನಿತ್ಯನೂತವಾಗಿ ನಿರಂತರವಾಗಿ ಸಾಗುತ್ತಲೇ ಇರುತ್ತದೆ ಎಂದು ಹೇಳಿದರು.

‘ವಿಜಯವಾಣಿ ’ವಿಜಯೋತ್ಸವ ಕೂಪನ್ ಲಭ್ಯ

‘ಅದೃಷ್ಟ ನಿಮ್ಮದು.. ಕೊಡುಗೆ ನಮ್ಮದು’ ಎಂಬ ಹೆಸರಿನಲ್ಲಿ ‘ವಿಜಯವಾಣಿ’ ಪ್ರತಿವರ್ಷ ನಡೆಸುವ ವಿಜಯೋತ್ಸವದ ಕೂಪನ್ ಸಹ ಪ್ರತಿಭಾ ಜುವೆಲ್ಲರಿಯಲ್ಲಿ ಖರೀದಿಸುವ ಗ್ರಾಹಕರಿಗೆ ದೊರೆಯಲಿದೆ. ಅದೃಷ್ಟವಂತರಿಗೆ ಕಾರು, ಸ್ಕೂಟರ್, ವಾಷಿಂಗ್ ಮಷಿನ್, ಫ್ರಿಜ್, ಟಿ.ವಿ., ಚಿನ್ನ ಸೇರಿ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಸಿಗಲಿದೆ.

ಶಾಪಿಂಗ್ ಹಬ್ಬದ ಸಂಭ್ರಮಕ್ಕಾಗಿ ರಾಜ್ಯಾದ್ಯಂತ 2,500ಕ್ಕೂ ಹೆಚ್ಚು ಬಹುಮಾನ ಗೆಲ್ಲುವ ಅವಕಾಶವು ನ. 22ರವರೆಗೆ ದೊರೆಯಲಿದೆ. ಕನಿಷ್ಠ 2 ಸಾವಿರಕ್ಕೂ ಹೆಚ್ಚಿನ ಮೊತ್ತದ ವಸ್ತುಗಳನ್ನು ಖರೀದಿಸಿದರೆ ಲಕ್ಕಿ ಡ್ರಾ ಕೂಪನ್ ದೊರೆಯಲಿದೆ.

48 ವರ್ಷಗಳಿಂದ ಸುಂದರ ಕಾಂಡ ವಿಶೇಷ ಪೂಜೆ

ವಿಜಯ ದಶಮಿ ಅಂಗವಾಗಿ ನಗರದ ಪ್ರತಿಭಾ ಜುವೆಲ್ಲರಿ ಹೌಸ್‌ನಲ್ಲಿ ಬುಧವಾರ ರಾಮಾಯಣದ ‘ಸುಂದರ ಕಾಂಡ’ ಭಾಗದ ಪಾರಾಯಣ ಮತ್ತು ವಿಶೇಷ ಪೂಜೆಯನ್ನು ಏರ್ಪಡಿಸಲಾಗಿತ್ತು. ಪ್ರತಿಭಾ ಜುವೆಲ್ಲರಿ ಹೌಸ್ ಮಾಲೀಕರಾದ ಸಕಲಾ ಶರತ್‌ಕುಮಾರ್ ಮತ್ತು ಸಕಲಾ ಮುರಳಿ ಮೋಹನ್ ದಂಪತಿ ಪಾಲ್ಗೊಂಡಿದ್ದರು. ರಾಮನ ಪರಮ ಭಕ್ತರೂ ಆಗಿದ್ದ ಮಳಿಗೆಯ ಸಂಸ್ಥಾಪಕ ಸಕಲಾ ನರಸಿಂಹುಲು ಈ ಪೂಜೆಯನ್ನು 48 ವರ್ಷಗಳಿಂದಲೂ ನಡೆಸಿಕೊಂಡು ಬಂದಿದ್ದರು. ಈ ಪರಂಪರೆಯನ್ನು ಈಗ ಮುಂದುವರಿಸಲಾಗುತ್ತಿದೆ.