ಸಿಟಿ ಇಂಜಿನಿಯರಿಂಗ್ ಕಾಲೇಜಿನ ಘಟಿಕೋತ್ಸವದಲ್ಲಿ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ  File photo
ಬೆಂಗಳೂರು

ತಂತ್ರಜ್ಞಾನ ಬಳಸಿ ರೈತರು, ಗ್ರಾಮೀಣ ಪ್ರದೇಶ ಸಮಸ್ಯೆ ಬಗೆಹರಿಸಿ: ಪ್ರೊ. ಬಿರಾದರ್: City Engineering college

ಸಂವಹನ, ಕ್ರಿಟಿಕಲ್ ಥಿಂಕಿಂಗ್, ನಾಯಕತ್ವ ಕೌಶಲವಿಲ್ಲದೆ, ಉದ್ಯೋಗ ಪಡೆಯಲು ಸಾಧ್ಯವಿಲ್ಲ. ನಿಮ್ಮ ಪದವಿ ಪ್ರಮಾಣಪತ್ರ ಕೇವಲ ಉದ್ಯೋಗ ಕ್ಷೇತ್ರ ಪ್ರವೇಶಿಸಲು ಪಾಸ್‌ಪೋರ್ಟ್ ಇದ್ದ ಹಾಗೆ. ಅತ್ಯಾಧುನಿಕ ತಂತ್ರಜ್ಞಾನ, ನಾವೀನ್ಯತೆಯನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಹುಡುಕಿದಾಗ ಉದ್ಯೋಗ ಪಡೆದುಕೊಳ್ಳಲು ಸಹಕಾರಿ

ಬೆಂಗಳೂರು: ಅತ್ಯಾಧುನಿಕ ತಂತ್ರಜ್ಣಾನಗಳ ಮೂಲಕ ಇಂಜಿನಿಯರಿಂಗ್ ಪದವೀಧರರು ಗ್ರಾಮೀಣ ಪ್ರದೇಶ, ರೈತಾಪಿ ವರ್ಗ ಮತ್ತು ಆರೋಗ್ಯ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕಿದೆ ಎಂದು ಗುಲ್ಬರ್ಗ ಸೆಂಟ್ರಲ್ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಆರ್.ಆರ್. ಬಿರಾದರ್ ತಿಳಿಸಿದರು.

ಶನಿವಾರ ನಡೆದ ಸಿಟಿ ಇಂಜಿನಿಯರಿಂಗ್ ಕಾಲೇಜಿನ ಘಟಿಕೋತ್ಸವದಲ್ಲಿ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದ ವರು, ಸಂವಹನ, ಕ್ರಿಟಿಕಲ್ ಥಿಂಕಿಂಗ್, ನಾಯಕತ್ವ ಕೌಶಲವಿಲ್ಲದೆ, ಉದ್ಯೋಗ ಪಡೆಯಲು ಸಾಧ್ಯವಿಲ್ಲ. ನಿಮ್ಮ ಪದವಿ ಪ್ರಮಾಣಪತ್ರ ಕೇವಲ ಉದ್ಯೋಗ ಕ್ಷೇತ್ರ ಪ್ರವೇಶಿಸಲು ಪಾಸ್‌ಪೋರ್ಟ್ ಇದ್ದ ಹಾಗೆ. ಅತ್ಯಾಧುನಿಕ ತಂತ್ರಜ್ಞಾನ, ನಾವೀನ್ಯತೆಯನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಹುಡುಕಿದಾಗ ಉದ್ಯೋಗ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದು ಕಿವಿಮಾತು ಹೇಳಿದರು.

ಕಂಪ್ಯೂಟರ್ ಇಂಜಿನಿಯರಿಂಗ್ ಬಳಸಿಕೊಂಡು ನಗರ ಪ್ರದೇಶದ ಗಾಳಿ, ನೀರಿನ ಮಾಲೀನ್ಯತೆ ಪರಿಹಾರ ಕಂಡುಕೊಳ್ಳುವ ಮೂಲಕ 2047ರ ವಿಕಸಿತ ಭಾರತಕ್ಕೆ ಕೊಡುಗೆ ನೀಡುವತ್ತ ಗಮನ ಹರಿಸುವಂತೆ ತಿಳಿಸಿದರು.

ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ ಒಟ್ಟು 450 ಪದವೀಧರರಿಗೆ ಪದವಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಎಚ್.ಎನ್. ತಿಪ್ಪೇಸ್ವಾಮಿ ಮತ್ತು ಸಿಎಸ್‌ಇ ವಿಭಾಗದ ಮುಖ್ಯಸ್ಥೆ ಪ್ರೊ. ಡಾ. ಸೌಮ್ಯ ಉಪಸ್ಥಿತರಿದ್ದರು.

ಇಂದಿನ ಯುವಕರಲ್ಲಿ ತಾಳ್ಮೆ ಇಲ್ಲವಾಗಿದೆ. ಕೆಲಸದಲ್ಲಿ ಬದ್ದತೆ, ತಾಳ್ಮೆ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಳ್ಳುವ ಜತೆಗೆ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡರೆ ಸುಲಭವಾಗಿ ಉದ್ಯೋಗ ಪಡೆಯಬಹುದು. - ಡಾ. ಕೆ.ಆರ್. ಪರಮಹಂಸ, ಸಿಟಿ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ