ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 26 ಸಾಧಕರಿಗೆ ಮಹದೇವಪುರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕಿ ಮಂಜುಳಾ ಲಿಂಬಾವಳಿ, ಕ್ಷೇತ್ರ ಅಧ್ಯಕ್ಷರಾದ ಎನ್.ಆರ್.ಶ್ರೀಧರ್ ರೆಡ್ಡಿ, ಹೆಚ್.ಎಸ್.ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯರಾದ ಎಲ್.ರಾಜೇಶ್, ಬಿ.ಎನ್.ನಟರಾಜ್, ಮುಖಂಡರಾದ ಪಾಪಣ್ಣ, ಜ್ಯೋತಿಪುರ ವೇಣು, ಕೆ.ಎಂ.ಎಂ.ಮಂಜುನಾಥ್,ಕೆ.ವಿ.ನಾಗರಾಜ್ ಮತ್ತಿತರರಿದ್ದರು.
ಮಹದೇವಪುರ: ಪ್ರತಿಯೊಬ್ಬ ಹಿಂದುಗಳು ತಮ್ಮ ಮನೆಯಲ್ಲಿ ಭಾರತ ಮಾತೆ ಪೂಜೆ ಮಾಡಿ ಗೌರವಿಸಬೇಕೆಂದು ಆರ್ ಎಸ್ ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕರುಣಕರ್ ರೈ ತಿಳಿಸಿದರು.
ಕಾಟಂನಲ್ಲೂರಿನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ
ಭಾರತ ಮಾತೆಯ ಪೂಜೆ ಮತ್ತು ಮಹದೇವಪುರ ಉತ್ಸವ ಉದ್ಘಾಟಿಸಿ ಮಾತನಾಡಿದರು.
ಸನಾತನ ಹಿಂದು ಧರ್ಮ 25 ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿದೆ. ಇತರೆ ಧರ್ಮಕ್ಕೆ ಹೋಲಿಸಿದರೆ ಹಿಂದು ಧರ್ಮ ಹೆಚ್ಚು ಪ್ರಾಮುಖ್ಯತೆ ಪಡೆದಿದೆ.ಇದನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಆರ್ ಎಸ್ ಎಸ್ ಸಂಘಟನೆ ಸಾಕಷ್ಟು ಶ್ರಮ ಪಡುತ್ತಿದೆ. ಇದೇ ಆರ್ ಎಸ್ ಎಸ್ ಇಲ್ಲದಿದ್ದರೆ ಹಿಂದುಗಳ ಸಂರಕ್ಷಣೆ ಕಷ್ಟ ಸಾಧ್ಯವಾಗಿತ್ತು ಎಂದರು.
ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿರವರು 16 ವರ್ಷಗಳಿಂದ ಸತತವಾಗಿ ಭಾರತ ಮಾತ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಹಿಂದು ಧರ್ಮದ ಸಂಸ್ಕೃತಿಯನ್ನು ಉಜ್ವಲಗೊಳಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘ ಯಾವುದೇ ಧರ್ಮದ ದ್ವೇಶಿಗಳಲ್ಲ, ಎ್ಲ ಧರ್ಮದವರನ್ನು ಸಮಾನವಾಗಿ ನೋಡವಂತ ರಾಷ್ಟ್ರೀಯ ಸ್ವಯಂ ಸೇವಾ ಸಂಘ ತಿಳಿಸಿದೆ. ಅನ್ಯ ಧರ್ಮದವರು ಸಂಘದ ವಿಚಾರವನ್ನು ತಿಳಿದು ಬದಲಾವಣೆ ಆಗಿರುವ ಸಾವಿರಾರು ಉದಾಹರಣೆಗಳಿವೆ. ಇದು ಕೇವಲ ನಮ್ಮ ದೇಶದಲ್ಲಲ್ಲ ವಿದೇಶದಲ್ಲಿ ನಮ್ಮ ದೇಶದ ಪ್ರಜೆಗಳನ್ನು ಒಟ್ಟುಗೂಡಿಸುವಲ್ಲಿ ಮೇಲುಗೈ ಸಾದಿಸಿದೆ ಎಂದರು.
ಆರ್‌ಎಸ್‌ಎಸ್ ಪ್ರಾರಂಭವಾಗಿ 100 ವರ್ಷ ಕಳೆದರು, ಸಂಭ್ರಮಿಸದೆ ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತಾ, ಆಕರ್ಷಿಸುತ್ತಾ ಬೆಳೆಯುತ್ತಲೇ ಇದೆ. ಹಿಂದೂ ಧರ್ಮದ ತತ್ವಗಳ ಪ್ರಕಾರ ಬದುಕುವುದು ಮತ್ತು ಉತ್ತಮ ಹಿಂದೂವಾಗಿ ಜೀವನ ನಡೆಸುವುದು ಆರ್‌ಎಸ್‌ಎಸ್ ಸಿದ್ದಾಂತವೇ ಹೊರತು ಹೊಸದಾಗಿ ಏನನ್ನೂ ಪ್ರತಿಪಾದಿಸುತ್ತಿಲ್ಲ ಆದ್ದರಿಂದ ಪ್ರತಿಯೊಬ್ಬರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸೇವಕರಾಗಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮಹದೇವಪುರ ಕ್ಷೇತ್ರದವರು
ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪಡೆದಿರುವವರಿಗೆ
ಮಹಿಳಾ ಸಬಲೀಕರಣಕ್ಕೆ ತಮ್ಮ ಜೀವನವನ್ನು ಸಮರ್ಪಿಸಿದಂತಹ ಹಾಗೂ
ಅಂತರಾಷ್ಟ್ರೀಯ ಯೋಗ ಪದ್ಮ ಪ್ರಶಸ್ತಿ, ಅಂಡರ್ 19 ಕ್ರಿಕೇಟ್ ನಲ್ಲಿ 404 ರನ್ ಸಿಡಿಸಿ ದಾಖಲೆ ಬರೆದ ಕ್ರೀಡಾಪಟು ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 26 ಸಾಧಕರಿಗೆ ಮಹದೇವಪುರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕಿ ಮಂಜುಳಾ ಲಿಂಬಾವಳಿ, ಕ್ಷೇತ್ರ ಅಧ್ಯಕ್ಷರಾದ ಎನ್.ಆರ್.ಶ್ರೀಧರ್ ರೆಡ್ಡಿ, ಹೆಚ್.ಎಸ್.ಪಿಳ್ಳಪ್ಪ, ರಾಜ್ಯ ಪರಿಷತ್ ಸದಸ್ಯರಾದ ಎಲ್.ರಾಜೇಶ್, ಬಿ.ಎನ್.ನಟರಾಜ್, ಮುಖಂಡರಾದ ಪಾಪಣ್ಣ, ಜ್ಯೋತಿಪುರ ವೇಣು, ಕೆ.ಎಂ.ಎಂ.ಮಂಜುನಾಥ್,ಕೆ.ವಿ.ನಾಗರಾಜ್ ಮತ್ತಿತರರಿದ್ದರು.