development 
ಬೆಂಗಳೂರು

ಬೆಂಗಳೂರಿನ ಅಭಿವೃದ್ಧಿ ಹೆಸರಿನಲ್ಲಿ ಸಮಾಧಿ ತೋಡುತ್ತಿರುವುದು ಏಕೆ ?

ಪ್ರಮುಖ ಮುಖ್ಯಾಂಶಗಳು

  • ಸಿಎಂ ಡಿಕೆಶಿ ಹೇಳಿಕೆಗೆ ಸಂಸದ ತೇಜಸ್ವೀ ಸೂರ್ಯ ವಿರೋಧ
  • ಟನಲ್ ರಸ್ತೆ ಬದಲು ಸಮಗ್ರ ಸಂಚಾರ ವ್ಯವಸ್ಥೆಗೆ ಪರಿಹಾರ ಅಗತ್ಯ
ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರಿನ ಅಭಿವೃದ್ಧಿಯ ಹೆಸರಿನಲ್ಲಿ ಸಮಾಧಿ ಕಟ್ಟುತ್ತಿದೆ. ಬೃಹತ್ ಮೊತ್ತದ ಯೋಜನೆಗಳನ್ನು ಜಾರಿ ಮಾಡುವ ಮುನ್ನ ಸಮರ್ಪಕವಾಗಿ ಚಿಂಥನ-ಮಂಥನ ನಡೆಸದೆ ತರಾತುರಿಯಲ್ಲಿ ಅನುಷ್ಠಾನಕ್ಕೆ ತರುವತ್ತ ಮಾತ್ರ ಸಿಎಮ ಗಮನ ಹರಿಸಿದಂತಿದೆ ಎಂದು ಬಿಜೆಪಿ ಸಂಸದ ತೇಜಸ್ವೀ ಸೂರ್ಯ ದೂರಿದ್ದಾರೆ.
ಹೆಬ್ಬಾಳದಲ್ಲಿ ಟನಲ್ ರಸ್ತೆಗೆ ಶಂಕುಸ್ಥಾಪನೆ ನೆರವೇರಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಇಂತಹ ಯೋಜನೆಗಳು ಸಂಚಾರ ಸಿಕ್ಕನ್ನು ನಿವಾರಿಸಲಿದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ವಿರೋಧಿಸಿರುವ ತೇಜಸ್ವಿ ಸೂರ್ಯ, 1139 ಕೋಟಿ ವೆಚ್ಚದಲ್ಲಿ 2 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಅವೈಜ್ಞಾನಿಕವಾಗಿದೆ. ನೀವು ಇಂದು ಶಂಕುಸ್ಥಾಪನೆ ಮಾಡಿಲ್ಲ. ಬದಲಿಗೆ ಬೆಂಗಳೂರಿನ ವೈಜ್ಞಾನಿಕ ನಗರಾಭಿವೃದ್ಧಿಯ ಸಮಾಧಿ ಕಲ್ಲನ್ನು ನೆಟ್ಟಿದ್ದೀರಿ ಎಂದು ಸೂರ್ಯ ಟೀಕಿಸಿದ್ದಾರೆ.

ಪ್ರಭಾವಿಗಳಿಗೆ ಮಾತ್ರ ಪ್ರಯೋಜನ:

ಐದು ವರ್ಷಗಳ ನಂತರವಲ್ಲ, 10 ವರ್ಷದ ನಂತರವೂ ಅಲ್ಲ. ಮೊದಲ ದಿನವೇ ಯೋಜನೆಯ ವರದಿಯೇ ಇದು ಟ್ರಾಫಿಕ್ ಜಾಮ್‌ನೊಂದಿಗೆ ತನ್ನ ಯಾನ ಆರಂಭಿಸುತ್ತದೆ ಎಂದು ಹೇಳುವುದಾದರೆ, ಈ ಯೋಜನೆಯಿಂದ ಯಾರಿಗೆ ಉಪಯೋಗವಾಗಲಿದೆ. ಪ್ರಯಾಣಿಕರ ಬದಲು ಕೆಲವು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಪ್ರಯೋಜನವಾಗುತ್ತದೆ. ಆದರೆ, ಇದರ ವೆಚ್ಚವನ್ನು ಇಡೀ ನಗರದ ಜನರು ಭರಿಸಬೇಕಾಗುತ್ತದೆ ಎಂದು ಸಂಸದರು ತಿಳಿಸಿದ್ದಾರೆ.
ಟನಲ್ ಯೋಜನೆಯ ಪ್ರಮುಖ ಫಲಾನುಭವಿಗಳು ಗುತ್ತಿಗೆದಾರರಾಗಿದ್ದು, ಅವರು ಕಾಂಗ್ರೆಸ್‌ನ ನಿಧಿಗೆ ಭಾರಿ ಪ್ರಮಾಣದ ಕಿಕ್‌ಬ್ಯಾಕ್ ನೀಡಬಹುದು. ಸರ್ಕಾರವು ಇದರ ಬದಲು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಬೇಕು, ಪ್ರಸ್ತಾವಿತ ರೆಡ್ ಲೈನ್ ಮೆಟ್ರೋ ಕಾರಿಡಾರ್ ಅನ್ನು ವೇಗಗೊಳಿಸಬೇಕು. ಜತೆಗೆ ಸಮೂಹ ಸಾರ್ವಜನಿಕ ಸಾರಿಗೆಯನ್ನು ಬಲಪಡಿಸಬೇಕು ಎಂದು ತೇಜಸ್ವಿ ಸೂರ್ಯ ಸಿಎಂ ಅವರನ್ನು ಆಗ್ರಹಿಸಿದ್ದಾರೆ.