ಫಾರ್ಮ್ ಲ್ಯಾಂಡ್ ಕ್ವಾಡ್ ಬೈಕ್
- ಕೃಷಿ ಕೆಲಸಗಳಿಗೆ ಬಳಕೆಯಾಗಬಲ್ಲ ವಾಹನ
- ಫಾರ್ಮ್ ಲ್ಯಾಂಡ್ ಇಂಡಸ್ಟ್ರೀಸ್ನ ಆವಿಷ್ಕಾರ
- ಫಾರ್ಮ ಲ್ಯಾಂಡ್ ಇಂಡಸ್ಟ್ರೀಸ್ ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ್ ಮಾಹಿತಿ
ಪವನ್ ಆಚಾರ್ಯ ನೀರ್ಚಾಲು ಬೆಂಗಳೂರು
ಮೂರರಿಂದ ನಾಲ್ಕು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ಸಣ್ಣ ರೈತರಿಗೆ ಸರಕು ಸಾಗಣೆಗಾಗಿ 6-7 ಲಕ್ಷ ರೂ. ಬಂಡವಾಳ ಹಾಕಿ ಟ್ರಾ$್ಯಕ್ಟರ್ ಖರೀದಿಸುವುದು ತುಂಬ ಕಷ್ಟ. ಅದಕ್ಕೆ ಪರ್ಯಾಯವಾಗಿ ಬಳಸಬಲ್ಲ, ಸಾಗಣೆಯ ಜತೆಗೆ ಔಷಧ ಸಿಂಪಡಣೆ, ಕಳೆ ಕೀಳುವ ಕೆಲಸ ಇತ್ಯಾದಿ ಬಹೋಪಯೋಗಿ ವಿನೂತನ ಆವಿಷ್ಕಾರದ ವಾಹನ (ಬೈಕ್ ಮಾದರಿ ಮತ್ತು ಟ್ರಾಲಿ) "ಫಾಮ್ರ್ ಲ್ಯಾಂಡ್ ಕ್ವಾಡ್ ಬೈಕ್' ಕೃಷಿಮೇಳದಲ್ಲಿ ರೈತರ ಗಮನ ಸೆಳೆಯಿತು.
ಈ ವಿಶೇಷ ವಾಹನವನ್ನು 5&6 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಿದ್ದು, ಇದೀಗ ಜನಪ್ರಿಯತೆ ಪಡೆಯುತ್ತಿದೆ. ಅಡಿಕೆ, ತೆಂಗು, ಮಾವು, ಬಾಳೆ ಸೇರಿ ತೋಟಗಾರಿಕೆ ಬೆಳೆಗಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ ಎಂದು ಫಾರ್ಮ್ ಲ್ಯಾಂಡ್ ಇಂಡಸ್ಟ್ರೀಸ್ ಸಂಸ್ಥೆಯ ಸಂಸ್ಥಾಪಕ ವಿಶ್ವನಾಥ್ (ಶಿವಮೊಗ್ಗ) ತಿಳಿಸಿದ್ದಾರೆ.
ನಾಲ್ಕು ಚಕ್ರದ ಬೈಕ್!: ಸುಮಾರು 600ರಿಂದ 800 ಕೆ.ಜಿ. ಭಾರ ಹೊರಬಲ್ಲ ಟ್ರಾಲಿಯನ್ನು ನಾಲ್ಕು ಚಕ್ರಗಳ ಬೈಕ್ ಎಳೆಯುತ್ತದೆ. ಟಿವಿಎಸ್ ಇಂಜಿನ್ ಒಂದು ಬಿಟ್ಟರೆ, ಮಿಕ್ಕುಳಿದ ಎಲ್ಲ ಬಿಡಿಭಾಗಗಳನ್ನು ಸಂಸ್ಥೆಯೇ ನಿರ್ಮಿಸುತ್ತಿದೆ. ಮಣ್ಣು, ಸರಕು ಸಾಗಣೆಗೆ ಟ್ರಾಲಿ, ಕಳೆ ಕೀಳುವ ವ್ಯವಸ್ಥೆ, ಕೀಟನಾಶಕ ಸಿಂಪಡಣೆಗೂ ಈ ವಾಹನ ಉಪಯೋಗಿಸಬಹುದು.
ಕೈಗೆಟುಕುವ ಬೆಲೆ: ಸಾಮಾನ್ಯ ಬೈಕ್ ಖರೀದಿಸಲೇ 1-2 ಲಕ್ಷ ರೂ. ಬೇಕು. ಅಂತಹದ್ದರಲ್ಲಿ ಕೃಷಿ ಚಟುವಟಿಕೆಗಳಿಗೆ ಆಧಾರವಾಗುವ, ಸಣ್ಣ ಕೃಷಿಕನಿಗೂ ಲಾಭದಾಯಕವಾಗುವ ಉದ್ದೇಶದಿಂದ ಆವಿಷ್ಕರಿಸಲಾದ ಈ ವಾಹನಕ್ಕೆ 2.3 ಲಕ್ಷ ರೂ. ಬೆಲೆ ಇದೆ. ಈ ಕಾರಣದಿಂದ ಮೇಳದಲ್ಲಿ ಭಾಗವಹಿಸಿದ ಅನೇಕ ರೈತರು ವಾಹನ ಖರೀದಿಗೆ ಆಸಕ್ತಿ ತೋರಿದ್ದಾರೆ. ಅಲ್ಲದೆ ವಾಹನದ ಬಗೆಗಿನ ಚರ್ಚೆಗಳು ಜೋರಾಗಿತ್ತು.
ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಬಳಸಲು ತರಬೇತಿ ಇರುವವರೇ ಬೇಕು. ಆದರೆ, ಈ ವಾಹನವನ್ನು ಯಾರು ಬೇಕಾದರೂ ಧೈರ್ಯದಿಂದ ಚಲಾಯಿಸಬಹುದು. ಅಲ್ಲದೆ, ವಾಹನದಲ್ಲಿ ಏನಾದರೂ ಸಮಸ್ಯೆಯಾದರೆ, ಹತ್ತಿರದ ಮೆಕಾನಿಕ್ನಿಂದಲೇ ಸರಿಪಡಿಸಿಕೊಳ್ಳಬಹುದು.
ಇಂಜಿನಿಯರಿಂಗ್ ಹಿನ್ನೆಲೆಯುಳ್ಳ ನಾನು ಸೇನೆಯ ಉನ್ನತ ಹುದ್ದೆಗೂ ಆಯ್ಕೆಯಾಗಿದ್ದೆ. ಆದರೆ, ಕೃಷಿಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬ ತವಕದಿಂದ ಈ ಆವಿಷ್ಕಾರ ಮಾಡಿದೆ. ಸಾಮಾಜಿಕ ಜಾಲತಾಣದ ಮೂಲಕ ವಾಹನ ಸದ್ದು ಮಾಡುತ್ತಿದೆ. ಸದ್ಯ ರಾಜ್ಯಾದ್ಯಂತ ಸುಮಾರು 150 ವಾಹನಗಳು ಮಾರಾಟವಾಗಿವೆ. ಆಂಧ್ರಪ್ರದೇಶ ಭಾಗದಲ್ಲೂ ಬೇಡಿಕೆ ಹೆಚ್ಚುತ್ತಿದೆ. 3&4 ವರ್ಷದಿಂದ ವಾಹನದ ಬಗ್ಗೆ ಯಾವುದೇ ಸಮಸ್ಯೆಗಳು ಕೇಳಿಬಂದಿಲ್ಲ.