- ವಾಣಿಜ್ಯ ಸಂಚಾರಕ್ಕೂ ಮುನ್ನ ಕಮಿಷನಿಂಗ್, ಸುರಕ್ಷತಾ ಪರೀಕ್ಷೆ
- ಬೆಂಗಳೂರು&ಮುಂಬೈ ಮಾರ್ಗದಲ್ಲಿ ಸೇವೆ ಸಾಕಾರ?
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬಿಇಎಂಎಲ್ ಸಂಸ್ಥೆ ಈ ರೈಲುಗಳನ್ನು ತಯಾರಿಸಿರುವ ವಂದೇ ಭಾರತ್ ಸ್ಲೀಪರ್ ಸೌಕರ್ಯವುಳ್ಳ ಎರಡು ರೈಲುಗಳು ಬೆಂಗಳೂರಿಗೆ ಆಗಮಿಸಿದ್ದು, ಶ್ರೀ ಸೇವೆ ಆರಂಭವಾಗುವ ಸಾಧ್ಯತೆ ಇದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಕೋಚಿಂಗ್ ಲೈನ್ನಲ್ಲಿರುವ ರೈಲುಗಳನ್ನು ಶೀಘ್ರದಲ್ಲೇ ಕಮಿಷನಿಂಗ್ ಹಾಗೂ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. ರೈಲುಗಳ ಯಾಂತ್ರಿಕ ಮತ್ತು ವಿದ್ಯುತ್ ವ್ಯವಸ್ಥೆ, ಬ್ರೇಕಿಂಗ್ ಕಾರ್ಯಕ್ಷಮತೆ, ಸಂವಹನ ವ್ಯವಸ್ಥೆ, ಸುರಕ್ಷತಾ ಉಪಕರಣಗಳು, ಆನ್ಬೋರ್ಡ್ ಸೌಲಭ್ಯಗಳು ಹಾಗೂ ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಅಧಿಕಾರಿಗಳು ಸಮಗ್ರವಾಗಿ ಪರೀಕ್ಷಿಸಲಿದ್ದಾರೆ. ಆ ಬಳಿಕ ಜನಸೇವೆಗೆ ಲಭ್ಯವಾಗಲಿವೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೂಲಕ ಬೆಂಗಳೂರು& ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ರೈಲು ಆರಂಭವಾಗುವ ಸಾಧ್ಯತೆ ಮತ್ತೆ ಚರ್ಚೆಗೆ ಬಂದಿದೆ. ಈ ಹಿಂದೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು&ಮುಂಬೈ ಸ್ಲೀಪರ್ ಸೇವೆ ಶೀಘ್ರ ಆರಂಭವಾಗಲಿದೆ ಎಂದು ಹೇಳಿದ್ದರು. ಅದು ಸಾಕಾರವಾದರೆ, ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಪ್ರಯಾಣಿಕರ ಬಹುಕಾಲದ ಬೇಡಿಕೆಯೂ ಈಡೇರಿದಂತಾಗುತ್ತದೆ.
ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ 2019ರಲ್ಲಿ ಆರಂಭವಾಗಿತ್ತು. ದೇಶದ ಮೊದಲ ವಾಣಿಜ್ಯ ವಂದೇ ಭಾರತ್ ಸ್ಲೀಪರ್ ರೈಲು 2026ರ ಜ.22ರಂದು ಕಾಮಾಕ್ಯ& ಹೌರಾ ಮಾರ್ಗದಲ್ಲಿ ಸೇವೆ ಶುರು ಮಾಡಿತ್ತು. 16 ಬೋಗಿಗಳ ಈ ರೈಲು 823 ಪ್ರಯಾಣಿಕರಿಗೆ ಆಸನ ವ್ಯವಸ್ಥೆ ಹೊಂದಿದ್ದು, ಅತ್ಯಾಧುನಿಕ ಸೌಲಭ್ಯಗಳಾದ ಸ್ವಯಂಚಾಲಿತ ಬಾಗಿಲು, ಸಿಸಿ ಕ್ಯಾಮರಾ, ಬಯೋ-ವ್ಯಾಕ್ಯೂಮ್ ಶೌಚಗೃಹ, ಸೆನ್ಸರ್ ಆಧಾರಿತ ನೀರಿನ ಕೊಳವೆ, ಚಾರ್ಜಿಂಗ್ ಪಾಯಿಂಟ್, ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಹಾರ ವ್ಯವಸ್ಥೆಗಳನ್ನು ಒಳಗೊಂಡಿದೆ. "ಕವಚ್' ಸುರಕ್ಷತಾ ವ್ಯವಸ್ಥೆಯೂ ರೈಲಿನ ಪ್ರಮುಖ ವೈಶಿಷ್ಟ$್ಯವಾಗಿದೆ.
ಬೆಂಗಳೂರಿಗೆ ಬಂದಿರುವ ಎರಡು ರೈಲು ಸೆಟ್ಗಳಲ್ಲಿ ಯಾವ ರೈಲು ಬೆಂಗಳೂರು&ಮುಂಬೈ ಮಾರ್ಗದಲ್ಲಿ ಅಥವಾ ಬೇರೆ ಕಾರಿಡಾರ್ನಲ್ಲಿ ಸಂಚರಿಸಲಿದೆ ಎಂಬುದರ ಬಗ್ಗೆ ಇನ್ನೂ ತೀಮಾರ್ನ ಕೈಗೊಳ್ಳಲಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.