ಬೆಂಗಳೂರು: ಸ್ನೇಹಿತನ ಪ್ರೇಯಸಿಯನ್ನೇ ಅತ್ಯಾಚಾರ ಮಾಡಿದ್ದ ಟೆಕ್ಕಿ ಹಾಗೂ ಆತನ ಸಹಚರನ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಅಪಹರಣ ಮಾಡಿದ್ದ 11 ಜನರನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಾಲೇಟಿ ರಾಜ ಕುಮಾರ್ (24), ಮರ‌್ರಿಪಾಟಿ ಮಂಜುನಾಥ್ (24), ಚಿನಿಗೆಪಲ್ಲಿ ಲೋಕನಾಥ್ (22), ಬಂಡ್ಲಪಲ್ಲಿ ಸುಹೇಲ್ (22), ಗಂಗಾರೆಡ್ಡಿಗಾರಿ ನರೇಂದ್ರ (22), ಶಿವ ಸುಬ್ರಮಣ್ಯ (24), ಸಲೀಂ ಪಾಷಾ (30), ನಯೀಂ ಪಾಷಾ (31), ಶಬಾಜ್ (26), ಗಾಲಿ ರಾಜೇಶ್ (20) ಹಾಗೂ 21 ವರ್ಷದ ಒಬ್ಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶ ಮೂಲದ ಬಿ. ಮಹೇಂದ್ರ (23) ಮತ್ತು ಆತನೊಂದಿಗೆ ವಾಸವಾಗಿದ್ದ ಕಡಪ ಮೂಲದ ತರುಣ್ (23) ಅಪಹರಣ ಆಗಿದ್ದರು. ಈ ಸಂಬಂಧ ಮಹೇಂದ್ರ ಪಾಲಕರು ಮಾರತ್ತಹಳ್ಳಿ ಠಾಣೆಗೆ ದೂರು ಸಲ್ಲಿಸಿದ್ದರು.
ಅಪಹರಣವಾಗಿದ್ದ ಸ್‌ಟಾವೇರ್ ಇಂಜಿನಿಯರ್ ಮಹೇಂದ್ರ, ತರುಣ್ ಹಾಗೂ ಆರೋಪಿ ಮರ‌್ರಿಪಾಟಿ ಮಂಜುನಾಥ್, ಮಾರತ್ತಹಳ್ಳಿಯಲ್ಲಿ 2 ಬಿಎಚ್‌ಕೆ ಮನೆ ಮಾಡಿಕೊಂಡಿದ್ದರು. ಈ ನಡುವೆ ಮಂಜುನಾಥ್ ತನ್ನ ತವರೂರಾದ ಆಂಧ್ರಪ್ರದೇಶಕ್ಕೆ ಹೋಗಿದ್ದ. ಆಗ ಆರೋಪಿ ರಾಜಕುಮಾರ್ ತನ್ನ ಸ್ನೇಹಿತ ಮಂಜುನಾಥ್‌ಗೆ ಕರೆ ಮಾಡಿ ‘ಪ್ರಿಯತಮೆಯೊಂದಿಗೆ ಬೆಂಗಳೂರಿಗೆ ಬಂದಿದ್ದೇನೆ. ಉಳಿದುಕೊಳ್ಳಲು ರೂಮ್ ವ್ಯವಸ್ಥೆ ಮಾಡಬೇಕು’ ಎಂದಿದ್ದ. ಆಗ ಮಂಜುನಾಥ್, ‘ನಾನು ಊರಿಗೆ ಬಂದಿದ್ದೇನೆ. ನನ್ನ ಮನೆಗೆ ಹೋಗು, ಅಲ್ಲಿ ನನ್ನ ಸ್ನೇಹಿತರಿದ್ದಾರೆ. ಅವರನ್ನು ಸಂಪರ್ಕಿಸಿದರೆ ಒಂದು ರೂಮ್’ ಕೊಡುತ್ತಾರೆ ಎಂದಿದ್ದ. ಅದರಂತೆ ಅಲ್ಲಿ ಹೋಗಿದ್ದರು. ಮನೆಯ ಒಂದು ಕೊಠಡಿಯಲ್ಲಿ ಇವರಿದ್ದರು. ಮತ್ತೊಂದು ಕೊಠಡಿಯಲ್ಲಿ ಮಹೇಂದ್ರ ಮತ್ತು ತರುಣ್ ಇದ್ದರು.
ಅಕ್ಟೋಬರ್ 23ರಂದು ಆರೋಪಿ ರಾಜ್‌ಕುಮಾರ್ ತನ್ನ ಪ್ರೇಯಸಿಯೊಂದಿಗೆ ಮಾರತ್ತಹಳ್ಳಿಯ ಸ್ನೇಹಿತನ ಮನೆಗೆ ಬಂದಿದ್ದ. ಮರುದಿನ (ಅ.24) ಬೆಳಗಿನ ಜಾವ 3.30ರ ವೇಳೆಗೆ ಮಹೇಂದ್ರ ಮತ್ತು ತರುಣ್, ಪ್ರೇಮಿಗಳಿದ್ದ ರೂಮ್ ಬಾಗಿಲು ತಟ್ಟಿ ಒಳಗೆ ನುಗ್ಗಿ ರಾಜ್‌ಕುಮಾರ್‌ನನ್ನು ರೂಮ್‌ನಲ್ಲಿ ಕೂಡಿ ಹಾಕಿದ್ದಲ್ಲದೆ, ಯುವತಿ ಮೇಲೆ ಅತ್ಯಚಾರ ಎಸಗಿದ್ದರು.
ಬೆಳಗ್ಗೆ ಇಬ್ಬರಿಗೂ ಬೆದರಿಸಿ ಮನೆಯಿಂದ ಕಳುಹಿಸಿದ್ದರು. ಆರಂಭದಲ್ಲಿ ಯುವತಿ ಅತ್ಯಾಚಾರದ ವಿಚಾರವನ್ನು ತನ್ನ ಪ್ರಿಯಕರನಿಗೆ ಹೇಳಿರಲಿಲ್ಲ. ಕೊನೆಗೆ ಆಕೆ ವಿಚಾರ ತಿಳಿಸಿದಾಗ ಸಂಚು ರೂಪಿಸಿ ಇಬ್ಬರನ್ನು ಬುಧವಾರ (ಅ.28ರಂದು) ಅಪಹರಿಸಿದ್ದರು. ದೂರು ದಾಖಲಾದ ಕೇವಲ 6 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಬ್ಬರನ್ನು ಅಪಹರಿಸಿದ್ದ ಗ್ಯಾಂಗ್ ಪ್ರತಿಕಾರ ತೀರಿಸಿಕೊಳ್ಳಲು ಇಬ್ಬರ ಮೇಲೂ ಹಲ್ಲೆ ನಡೆಸಿತ್ತು. ಇಬ್ಬರಿಗೂ 10 ಲಕ್ಷ ರೂ. ನೀಡುವಂತೆ ಬೇಡಿಕೆಯಿಟ್ಟಿದ್ದರು. ಈ ಸಂಬಂಧ ಮಹೇಶ್ ಪಾಲಕರಿಗೆ ೆನ್ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆಗ ಅವರು ಠಾಣೆಗೆ ದೂರು ಸಲ್ಲಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.