ಯಕ್ಷಗಾನ 
ಬೆಂಗಳೂರು

20ರಂದು "ತಿತ್ತಿತೈ ಯಕ್ಷ ಪರ್ವ' | yakshagana

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜನೆ
ಬೆಂಗಳೂರು: "ತಿತ್ತಿತೈ' ತಂಡವು ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯೊಂದಿಗೆ "ತಿತ್ತಿತೈ ಯಕ್ಷ ಪರ್ವ&2026' ಕಾರ್ಯಕ್ರಮವನ್ನು ಶನಿವಾರ (ಜೂ.20) ರಾತ್ರಿ 9.30ಕ್ಕೆ ಹಮ್ಮಿಕೊಂಡಿದೆ. ಈ ಬಾರಿ ಚೂಡಾಮಣಿ, ವಾಲಿ ವಧೆ ಮತ್ತು ಜಾಂಬವತಿ ಕಲ್ಯಾಣ ಎಂಬ ಮೂರು ಪ್ರಸಂಗಗಳ ಪ್ರದರ್ಶನ ಇರಲಿದೆ. ಹಿಮ್ಮೇಳದಲ್ಲಿ ಜನ್ಸಾಲೆ ರಾಘವೇಂದ್ರ ಆಚಾರ್​, ಹೆಬ್ರಿ ಗಣೇಶ್​, ರಾಮಕೃಷ್ಣ ಹಿಲ್ಲೂರು, ಚಿನ್ಮಯ್​ ಭಟ್​ ಕಲ್ಲಡ್ಕ, ಸುಜನ್​ ಹಾಲಾಡಿ, ಅಕ್ಷಯ್​ ಭಟ್​ ಬಿದ್ಕಲ್ಕಟ್ಟೆ, ಪ್ರಜ್ವಲ್​ ಮುಂಡಾಡಿ, ಅಕ್ಷಯ್​ ವಿಟ್ಲ ಮತ್ತಿತರ ಕಲಾವಿದರು ಸಾಥ್​ ನೀಡಲಿದ್ದಾರೆ. ಮುಮ್ಮೇಳದಲ್ಲಿ ನೀಲ್ಕೋಡು ಶಂಕರ ಹೆಗಡೆ, ವಿದ್ಯಾಧರ ಜಲವಳ್ಳಿ, ಶಶಿಕಾಂತ್​ ಶೆಟ್ಟಿ ಕಾರ್ಕಳ, ರಮೇಶ್​ ಭಂಡಾರಿ ಮುರೂರು, ಅಶೋಕ್​ ಭಟ್​ ಸಿದ್ದಾಪುರ, ಶೈಲೇಶ್​ ತೀರ್ಥಹಳ್ಳಿ, ಸುಣ್ಣಂಬಳ ವಿಶ್ವೇಶ್ವರ ಭಟ್​, ಪೆಮುರ್ದೆ ಜಯಪ್ರಕಾಶ್​ ಶೆಟ್ಟಿ, ಹೆನ್ನಾಬೈಲ್​ ವಿಶ್ವನಾಥ್​ ಪೂಜಾರಿ, ಪಂಜು ಬಗ್ವಾಡಿ, ಕಾರ್ತಿಕ್​ ಚಿಟ್ಟಾಣಿ, ಚಂದ್ರಶೇಖರ ಧರ್ಮಸ್ಥಳ, ಭರತ್​ ರಾಜ್​ ಪರ್ಕಳ, ಕಿಶನ್​ ಅಗ್ಗಿತ್ತಾಯ ಸೇರಿ ವಿವಿಧ ಕಲಾವಿದರು ಕಾಣಿಸಿಕೊಳ್ಳಲಿದ್ದಾರೆ.