Renukaswamy murder case witness tampering
- ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತೊಂದು ತಿರುವು
- ಸಾಕ್ಷ್ಯ ನಾಶಕ್ಕೆ ದರ್ಶನ್ ಅಭಿಮಾನಿ ಪುನೀತ್ ಯತ್ನ, ಮತ್ತೊಬ್ಬ ಸಾಕ್ಷಿದಾರನಿಂದ ದೂರು ದಾಖಲು
- ಪುನೀತ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿಕೊಂಡ ಪೊಲೀಸರು
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ, ನಟ ದರ್ಶನ್ ಸದ್ಯ ಜೈಲಿನಲ್ಲಿದ್ದಾರೆ. ಆದರೆ, ಅವರ ಫ್ಯಾನ್ಸ್ ಎಂದು ಕರೆಸಿಕೊಂಡ ಮೂವರು ಸಾಕ್ಷಿದಾರ ಸಂದೀಪ್ ಎಂಬುವವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ.
ಪುನೀತ್, ವೇಣು ಹಾಗೂ ಸುಹಾಸ್ ಬಂಧಿತರು ಎಂದು ಗುರುತಿಸಲಾಗಿದ್ದು, ಅವರು ದರ್ಶನ್ ಅಭಿಮಾನಿಗಳು ಎನ್ನಲಾಗಿದೆ. ಸದ್ಯ ಮೂವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆನಂತರ ಅವರನ್ನು ಕೋರ್ಟ್ ಮಂದೆ ಹಾಜರು ಪಡಿಸಲಾಗುತ್ತದೆ ಎಂದು ಹೇಳಲಾಗಿದೆ.
ಸಾಕ್ಷಿದಾರರಿಗೆ ಬೆದರಿಕೆ
ರೇಣುಕಾಸ್ವಾಮಿ ಕೊಲೆ ಕೇಸ್ನ ಸಾಕ್ಷಿದಾರನಾದ ಸಂದೀಪ್ ಅವರಿಗೆ ಮೂವರು ವಾಟ್ಸಾಪ್ ಕರೆಗಳ ಮೂಲಕ ಬೆದರಿಕೆ ಹಾಕಿದ್ದರು ಎಂದು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇನ್ನು ಬಂಧಿತ ಪುನೀತ್ ದರ್ಶನ್ ಅವರ ಫ್ಯಾನ್ ಪೇಜ್ ಡಿ ಕಂಪನಿಯ ಅಡ್ಮಿನ್ ಆಗಿದ್ದ ಎನ್ನಲಾಗಿದೆ
ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಲು ಬಳಸಿದ ಸ್ಕಾರ್ಪಿಯೋ ಕಾರು ಮಾಲೀಕನೇ ಈ ಎಂ ಆರ್ ಪುನೀತ್. ಆ ಬಳಿಕ ಕಾರನ್ನು ತೊಳಿದದ್ದ ಎನ್ನಲಾಗಿತ್ತು. ಪುನೀತ್ ಸದ್ಯ ಪ್ರಮುಖ ಸಾಕ್ಷಿಯಾಗಿದ್ದ. ಆದರೆ, ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನ ಬೆಂಗಳೂರಿಗೆ ಕರೆತಂದಿಲ್ಲ ಎಂದು ಹೇಳುವಂತೆ ಮತ್ತೊಬ್ಬ ಸಾಕ್ಷಿದಾರ ಸಂದೀಪ್ಗೆ ಒತ್ತಡ ಹೇರಿದ್ದ ಕಾರಣ ಪುನೀತ್ನನ್ನು ಬಂಧಿಸಲಾಗಿದೆ. ಸದ್ಯ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಏನಿದು ಘಟನೆ?
2024 ಜೂನ್8 ರಂದು ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ (33)ನನ್ನು ಬೆಂಗಳೂರಿನ ಆರ್ಆರ್ನಗರಕ್ಕೆ ಕರೆತಂದಿದ್ದರು. ನಟಿ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನೆಲೆ, ಈತನ ಅಪಹರಣ ನಡೆಸಿ, ಬರ್ಬರವಾಗಿ ಕೊಲೆ ಮಾಡಲಾಗಿತ್ತು. ನಂತರ ನಟ ದರ್ಶನನ್ನು ಮೈಸೂರಿನಲ್ಲಿ ಸೆರೆ ಹಿಡಿಯಲಾಗಿತ್ತು.. ಸದ್ಯ ಪ್ರಕರಣದ ವಿಚಾರಣೆ ಮುಂದುವರೆದಿದೆ, (ಏಜೆನ್ಸೀಸ್).