ಕಸಾಪದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರೊ.ಮಲ್ಲೇಪುರ ಜಿ. ವೆಂಕಟೇಶ ರಚನೆಯ "ಸಂಗ್ರಹ ಭಾಗವತ', "ಮಹಾಪುರುಷರು' ಕೃತಿಗಳನ್ನು ವಿಶ್ರಾಂತ ನ್ಯಾಯಮೂರ್ತಿ ಎನ್​. ಕುಮಾರ್​ ಬಿಡುಗಡೆಗೊಳಿಡಿದರು. 
ಬೆಂಗಳೂರು

ಸಮಾಜವನ್ನು ಎಚ್ಚರಿಸುವ ಪುಸ್ತಗಳ ರಚನೆ ಅಗತ್ಯ

ಬೆಂಗಳೂರು: ಇಂದಿನ ಯುವಪೀಳಿಗೆಯನ್ನು ಎಚ್ಚರಿಸುವಂತಹ ಪುಸ್ತಕಗಳ ರಚನೆ ಅಗತ್ಯವಾಗಿದೆ ಎಂದು ಜಮಖಂಡಿ ಶಾಸಕ ಜಗದೀಶ ಶಿವಯ್ಯ ಗುಡಗುಂಟಿ ಹೇಳಿದ್ದಾರೆ.
ಅನ್ನಪೂರ್ಣ ಅಬ್ಲಿಷಿಂಗ್​ ಹೌಸ್​, ನಿರಂತರ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್​ನಲ್ಲಿ ಹಮ್ಮಿಕೊಂಡಿದ್ದ, ಪ್ರೊ.ಮಲ್ಲೇಪುರ ಜಿ. ವೆಂಕಟೇಶ ರಚನೆಯ "ಸಂಗ್ರಹ ಭಾಗವತ', "ಮಹಾಪುರುಷರು' ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಹಿಂದಿನಿಂದಲೂ ಸಮಾಜ ಹೇಗೆ ಮುಂದುವರಿದುಕೊಂಡು ಬಂದಿದೆ ಎಂಬುದಕ್ಕೆ ರಾಮಾಯಣ, ಮಹಾಭಾರತ ಪುಸ್ತಕಗಳು ಸಾಯಾಗಿವೆ. ಪಾತ್ರಗಳ ಬಗ್ಗೆ ವಿವರಣೆ ಗಮನಿಸಿದಾಗ ನಮ್ಮಲ್ಲಿ ಕೊಂಚ ಬದಲಾವಣೆ ಕಾಣಬಹುದು, ಅದಕ್ಕೂ ಮೊದಲು ಕೃತಿಗಳನ್ನು ಓದಬೇಕು ಎಂದು ಸಲಹೆ ನೀಡಿದರು. ಚಿಂತನೆಗಳು, ವೇದ& ಉಪನಿಷತ್​ಗಳ ಸಂಶೋಧನೆ ಮೂಲಕ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಲ್ಲೇಪುರ ಅವರ ಶ್ರಮ ಶ್ಲಾನೀಯ ಎಂದರು.
ವಿಶ್ರಾಂತ ನ್ಯಾಯಮೂರ್ತಿ ಎನ್​. ಕುಮಾರ್​ ಮಾತನಾಡಿ, ಯಾವುದೇ ಲೇಖಕ, ಕವಿ ಕೃತಿ ಬರೆದಾಗ ಪುಟಗಳಿಗೆ ಸಿಮೀತಗೊಳಿಸಬೇಕು, ಅದು ಬಿಟ್ಟು ಕಂತುಗಳನ್ನು ಬರೆದುಕೊಂಡಿದ್ದರೆ ಓದುಗರು ಅಸಕ್ತಿ ತೋರುವುದಿಲ್ಲ. ಅವು ಗ್ರಂಥಾಲಯದಲ್ಲಿ ಇರಿಸಲು ಸೀಮಿತ ಎಂದರು.
ಪ್ರಸ್ತುತ ಕಲುಷಿತ ವಾತಾವರಣದಲ್ಲಿ ಯಾರು ಏನು ಮಾಡಬೇಕು ಎಂಬ ಗೊಂದಲವಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಣ ಸಂಸ್ಥೆಗಳು ಮುಂದಾಗುತ್ತಿಲ್ಲ. ಇಂತಹ ಪರಿಸರಕ್ಕೆ ಎರಡೂ ಕೃತಿಗಳು ಸೂಕ್ತವಾಗಿವೆ ಎಂದು ಹೇಳಿದರು.
ರಾಮಾಯಣ, ಮಹಾಭಾರತ ಕೃತಿಗಳು ದೇಶದ ಅಚಾರ ವಿಚಾರ, ಸಂಸತಿಯ ಪ್ರತಿಕವಾಗಿವೆ. ಈ ಕಥೆಗಳನ್ನು ಕೇಳಿಕೊಂಡೇ ಹಿಂದಿನ ಕಾಲದ ಜನರು ವಿದ್ಯಾವಂತರಾಗಿದ್ದಾರೆ. ಆದರೆ ಈಗಿನ ಕಾಲ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬೇಸರ ಕಾಡುತ್ತಿದೆ ಎಂದು ಶೇಷಾದ್ರಿಪುರಂ ಶಿಕ್ಷಣ ದತ್ತಿ ಪ್ರಧಾನ ಕಾರ್ಯದರ್ಶಿ ಡಾ.ವೂಡೇ ಪಿ. ಕೃಷ್ಣ ಬೇಸರ ವ್ಯಕ್ತಪಡಿಸಿದರು.
ಪ್ರೊ.ಮಲ್ಲೇಪುರ ಜಿ.ವೆಂಕಟೇಶ, ಡಾ.ಕೆ.ಜಿ. ಲಕ್ಷ್ಮೀನಾರಾಯಣಪ್ಪ ಇತರರಿದ್ದರು.