ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ(ಎಸ್ಸಿ- ಎಸ್ಟಿ)ಸೇರಿದ ಪೊಲೀಸರಿಗೆಬಾಡಿಗೆ ಮನೆ ಕೊಡಲು ನಿರಾಕರಿಸುತ್ತಿರುವವಿಚಾರ ಬೆಳಕಿಗೆ ಬಂದಿದೆ. ಈವಿಚಾರವನ್ನು ವಿಧಾನಸೌಧದಲ್ಲಿನಡೆದ ಸಭೆಯಲ್ಲಿ ಖುದ್ದು ವಿಧಾನಸಭೆಭರವಸೆಗಳ ಸಮಿತಿಯೇ ಬಹಿರಂಗಪಡಿಸಿದೆ.ಇದನ್ನು ಗಂಭೀರವಾಗಿಪರಿಗಣಿಸಿರುವ ಪೊಲೀಸ್ ಇಲಾಖೆ,ಪೊಲೀಸ್ ಕ್ವಾರ್ಟರ್ಸ್‌ಗಳಲ್ಲೇಆದ್ಯತೆಯ ಮೇಲೆ ಮನೆಗಳನ್ನು ಹಂಚಿಕೆಮಾಡುವಂತೆ ಆದೇಶ ಹೊರಡಿಸಿದೆ.
ಜಾತಿ ಆಧಾರದಮೇಲೆ ಮನೆ ಬಾಡಿಗೆಗೆ ಕೊಡದೆನಿರಾಕರಿಸಲಾಗುತ್ತಿದೆ.ಇದರಿಂದಾಗಿ ಠಾಣೆಯಿಂದದೂರದ ಪ್ರದೇಶಗಳಲ್ಲಿ ವಾಸ ಮಾಡುವಪರಿಸ್ಥಿತಿ ಏರ್ಪಟ್ಟಿದ್ದು,ಕರ್ತವ್ಯಕ್ಕೆ ಸರಿಯಾದಸಮಯಕ್ಕೆ ಹಾಜರಾಗಲು ಸಾಧ್ಯವಾಗದಿರುವುದುಗಮನಕ್ಕೆ ಬಂದಿದೆ ಎಂದು 2026 ಏ.28ರಂದು ವಿಧಾನಸೌಧದಲ್ಲಿನಡೆದ ವಿಧಾನಸಭೆ ಭರವಸೆಗಳ ಸಮಿತಿಯಸಭೆಯಲ್ಲಿ ಸಮಿತಿಯ ಅಧ್ಯಕ್ಷರೇಪ್ರಸ್ತಾಪಿಸಿದ್ದಾರೆ. ಈಬಗ್ಗೆ ಹಲವು ಪೊಲೀಸ್ ಅಧಿಕಾರಿಮತ್ತು ಸಿಬ್ಬಂದಿ ಮನವಿ ಸಲ್ಲಿಸಿದ್ದಾರೆ.ಈ ಸಮಸ್ಯೆಗೆ ಪರಿಹಾರಕೊಡಬೇಕು ಎಂದು ಸಭೆಯಲ್ಲಿಹೇಳಿದ್ದಾರೆ.
ಇನ್ನುಮುಂದೆಆಯಾ ಘಟಕಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಎಸ್ಸಿ-ಎಸ್ಟಿಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಜಾತಿ ಆಧಾರದ ಮೇಲೆ ಮನೆ ಬಾಡಿಗೆಕೊಡುತ್ತಿಲ್ಲ ಎಂದು ದೂರುಗಳನ್ನುಸಲ್ಲಿಸಿದಲ್ಲಿ ಅದನ್ನು ಆದ್ಯತೆಯಮೇಲೆ ಪರಿಶೀಲನೆ ನಡೆಸಿ ಪೊಲೀಸ್ವಸತಿಗೃಹಗಳಲ್ಲೇ ಮನೆಗಳನ್ನುಹಂಚಿಕೆ ಮಾಡಬೇಕು ಎಂದು ರಾಜ್ಯಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಎಲ್ಲ ಘಟಕದಮುಖ್ಯಸ್ಥರಿಗೆ ಲಿಖಿತ ಸೂಚನೆರವಾನಿಸಿದ್ದಾರೆ.
ಸ್ವಂತ ಊರುಬಿಟ್ಟು ನೌಕರಿ ಮಾಡುವ ಸ್ಥಳದಲ್ಲೇವಾಸವಾಗಿ ಕರ್ತವ್ಯ ನಿಭಾಯಿಸಬೇಕೆಂಬಸಿಬ್ಬಂದಿಯು ಠಾಣಾ ವ್ಯಾಪ್ತಿಯಲ್ಲಿಬಾಡಿಗೆ ಮನೆ ಹುಡುಕಲು ಹೋದಾಗಮಾಲೀಕರು ಅವರ ಜಾತಿ ಕೇಳಿ,ಮಾಂಸಾಹಾರಿಗಳಿಗೆ ಮನೆಕೊಡುವುದಿಲ್ಲವೆಂದು ನಿರಾಕರಿಸುತ್ತಿರುವಬಗ್ಗೆ ದೂರುಗಳು ಸಲ್ಲಿಕೆಯಾಗಿವೆ.ಅನೇಕ ಸಿಬ್ಬಂದಿ ಮನೆಬಾಡಿಗೆ ಹುಡುಕಿಕೊಂಡು ಠಾಣೆವ್ಯಾಪ್ತಿಯಿಂದ ದೂರ ಮನೆಮಾಡಿಕೊಂಡಿದ್ದಾರೆ. ಇದರಿಂದಾಗಿನಿತ್ಯವೂ ಹತ್ತಾರು ಕಿಲೋಮೀಟರ್ಕ್ರಮಿಸಿ ಠಾಣೆಗೆ ಬರುವಂತಾಗಿದೆ.ಕೆಲವು ಸಲ ತಡವಾಗಿ ಕಚೇರಿಗೆಆಗಮಿಸುತ್ತಿದ್ದರಿಂದ ಮೇಲಧಿಕಾರಿಗಳುಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.ಕೆಲವು ಬಾರಿ ನೋಟಿಸ್ಜಾರಿಯಾಗಿರುವ ಬಗ್ಗೆಯೂ ಸಿಬ್ಬಂದಿಅಳಲು ತೋಡಿಕೊಂಡಿದ್ದಾರೆ.
ಇಲಾಖೆಯಈ ನಿರ್ಧಾರದಿಂದ ಎಸ್ಸಿ-ಎಸ್ಟಿಸಿಬ್ಬಂದಿಯ ಮನೋಸ್ಥೈರ್ಯ ಹೆಚ್ಚಿದೆ.ಜತೆಗೆ ಜಾತಿ ತಾರತಮ್ಯದಕಾರಣದಿಂದ ಬಾಡಿಗೆ ಮನೆ ಸಿಗುತ್ತಿಲ್ಲಎಂಬ ದೂರು ನೀಡುವ ಸಿಬ್ಬಂದಿಗೆಪೊಲೀಸ್ ಕ್ವಾರ್ಟರ್ಸ್‌ಗಳಲ್ಲಿಮೊದಲ ಆದ್ಯತೆಯಲ್ಲಿ ಮನೆ ಸಿಗಲಿದೆ.ಸದ್ಯ ಕ್ವಾರ್ಟರ್ಸ್‌ಗಳಲ್ಲಿಲಭ್ಯವಿರುವ ಖಾಲಿ ಮನೆಗಳನ್ನುಹಂಚಿಕೆ ಮಾಡಲು ಜ್ಯೇಷ್ಠತೆಯವ್ಯವಸ್ಥೆ ಪಾಲಿಸಲಾಗುತ್ತಿದೆ.ಇಂತಹ ವಿಶೇಷ ಸಂದರ್ಭಗಳಲ್ಲಿಮಾನವೀಯತೆ ಮತ್ತು ಅನಿವಾರ್ಯತೆಯನ್ನುಪರಿಗಣಿಸಿ ಆದ್ಯತೆ ನೀಡಲುನಿರ್ಧರಿಸಲಾಗಿದೆ.
ಸಮಾಜದರಕ್ಷಣೆಗೆ ನಿಲ್ಲುವ ಪೊಲೀಸರೇಇಂತಹ ಸಾಮಾಜಿಕ ಅನಿಷ್ಟಕ್ಕೆಬಲಿಯಾಗುತ್ತಿರುವುದು ನಾಗರಿಕಸಮಾಜ ತಲೆತಗ್ಗಿಸುವ ವಿಷಯ.ಸರ್ಕಾರದ ಈ ಹೊಸ ನಿರ್ಧಾರದಿಂದಸಂಕಷ್ಟದಲ್ಲಿರುವ ನೂರಾರುಸಿಬ್ಬಂದಿಗಳಿಗೆ ನೆಮ್ಮದಿಯನಿಟ್ಟುಸಿರು ಬಿಡುವಂತೆ ಮಾಡಿದೆ.ಇಲಾಖೆಯ ವಸತಿ ಗೃಹಗಳಲಭ್ಯತೆಯನ್ನು ಹೆಚ್ಚಿಸುವ ಮೂಲಕಇಂತಹ ತಾರತಮ್ಯಕ್ಕೆ ಒಳಗಾಗುವಎಲ್ಲ ಸಿಬ್ಬಂದಿಗೂ ಗೌರವಯುತಜೀವನ ಕಲ್ಪಿಸುವುದು ಇಂದಿನ ತುರ್ತುಅಗತ್ಯವಾಗಿದೆ ಎಂದು ಪೊಲೀಸ್ಸಿಬ್ಬಂದಿ ಹೇಳಿದ್ದಾರೆ.