"ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ'ದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.  
ಬೆಂಗಳೂರು

ನ್ಯಾಯದ ಪರ ಹೋರಾಟ ನಿರಂತರ

ಕಿರುವಾರ ಎಸ್.ಸುದರ್ಶನ್

ಪ್ರಮುಖ ಮುಖ್ಯಾಂಶಗಳು

  • ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ
  • ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಮತ
ಬೆಂಗಳೂರು: ನನ್ನ ಬಳಿ ಅಧಿಕಾರ ಇಲ್ಲ, ಸರ್ಕಾರದ ಮುಖ್ಯಸ್ಥನೂ ಅಲ್ಲ. ಆದರೆ ಒಳ ಮೀಸಲಾತಿ, ಸಾಮಾಜಿಕ ನ್ಯಾಯ ಪರ ಹೋರಾಟ ಎಂದಿಗೂ ನಿಲ್ಲುವುದಿಲ್ಲ ಎಂದು ನಿಕಟಪೂರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದ ಗಾಂಧಿ ಭವನದಲ್ಲಿ ಮಂಗಳವಾರ ಒಳ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಸಕ್ರಿಯವಾಗಿ ರಾಜಕಾರಣದಲ್ಲಿ ಇರುತ್ತೇನೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಎಲ್ಲಿಯವರೆಗೆ ಸಮಾನ ಅವಕಾಶಗಳು ಸಿಗುವುದಿಲ್ಲವೋ ಅಲ್ಲಿಯತನಕ ಅಸಮಾನತೆ ಹೋಗುವುದಿಲ್ಲ. ಇದು ಹೋಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿ ದೊರೆಯಬೇಕು ಎಂದರು.
ಸಮಾಜದಲ್ಲಿ ಎಷ್ಟೇ ಸುಧಾರಣೆಗಳಾದರೂ ಜಾತಿ ವ್ಯವಸ್ಥೆ ಗಟ್ಟಿಯಾಗಿ ಉಳಿದುಕೊಂಡಿದೆ. ಪಟ್ಟಭದ್ರ ಹಿತಾಸಕ್ತಿಗಳು ಮುಂದಾಲೋಚನೆ ಮಾಡಿ ಆಚರಣೆಯಲ್ಲಿ ಇಟ್ಟಿರುವ ವ್ಯವಸ್ಥೆ ಇದು. ವರ್ಣ ವ್ಯವಸ್ಥೆ ನಾಶವಾಗಬೇಕು. ಇದಕ್ಕೆ ಎಲ್ಲ ಶೋಷಿತ ಜಾತಿಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿ ಪಡೆದುಕೊಂಡಾಗ ಸಾಧ್ಯ ಎಂದು ಹೇಳಿದರು.
ಮಂಡಲ್​ ಕಮಿಷನ್​ ವರದಿ ಜಾರಿಗೆ ಬಂದಾಗ ಮೀಸಲಾತಿ ವಿರೋಧಿಗಳು ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಕೆಲವರು ಬೆಂಕಿ ಹಚ್ಚಿಕೊಂಡು ಪ್ರಾಣ ಕಳೆದುಕೊಳ್ಳುವಂತೆ ಮಾಡಿದರು. ಹಿಂದೆ ವಿ.ಪಿ. ಸಿಂಗ್​ ಪ್ರಧಾನಿಯಾಗಿರದೆ ಹೋಗಿದ್ದರೆ ಈ ವರದಿ ಜಾರಿ ಆಗುವುದು ಅನುಮಾನವಿತ್ತು ಎಂದು ಸಿದ್ದರಾಮಯ್ಯ ಮೆಲಕು ಹಾಕಿದರು. 
ಮೀಸಲಾತಿಗಾಗಿ ಹೋರಾಟ ನಿಲ್ಲಬಾರದು ನಿರಂತರವಾಗಿ ನಡೆಯುತ್ತಲೇ ಇರಬೇಕು. ಸುಪ್ರೀಂ ಕೋರ್ಟ್​ ಸಹ ಒಳ ಮೀಸಲಾತಿ ಬಗ್ಗೆ ಒಪ್ಪಿಕೊಂಡಿದೆ. ಕಾಂಗ್ರೆಸ್​ ಹಾಗೂ ಸರ್ಕಾರ ಎಂದಿಗೂ ಒಳ ಮೀಸಲಾತಿ ಪರ ಇದೆ. ಮೀಸಲಾತಿಗೆ ಯಾವತ್ತೂ ಭಿನ್ನಾಭಿಪ್ರಾಯ ಸಹಜ, ಮೀಸಲಾತಿ ವಿರುದ್ಧವಾಗಿರುವ ಜನರ ಜತೆಗೆ ಸೇರಿಕೊಳ್ಳುವ ಕೆಲಸ ಆಗಬಾರದು ಎಂದು ಎಚ್ಚರಿಸಿದರು.
ಮುಖ್ಯಮಂತ್ರಿಯೊಂದಿಗೆ ಚರ್ಚಿಸುವ ಭರವಸೆ:
ನ್ಯಾಯಲಯ ಆದೇಶ ಮಾಡುತ್ತಿದ್ದಂತೆ ರಾಜ್ಯದಲ್ಲಿ ನ್ಯಾಯಮೂರ್ತಿ ನಾಗಮೋಹನ್​ ದಾಸ್​ ಸಮಿತಿ ರಚನೆ ಮಾಡಿ ಸಮೀೆ ಮಾಡಿಸಲಾಯಿತು. ವರದಿ ಆಧಾರದ ಮೀಸಲಾತಿಯನ್ನು 6:6:5 ಸೂತ್ರದಡಿ ವಿಭಜಿಸಿ ಅಲೆಮಾರಿ, ಭೋವಿ, ಬಂಜಾರ ಸಮುದಾಯಗಳನ್ನು ಸೇರಿಸಿದೆವು. ಈ ಕಾರಣಕ್ಕೆ ತೀರ್ಮಾನದ ವಿರುದ್ಧ ಕೆಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದು ಇತ್ಯರ್ಥಗೊಂಡ ಕೂಡಲೇ ಸರ್ಕಾರ ಅನುಷ್ಠಾನಕ್ಕೆ ತರಲಿದೆ. ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ ಅವರೊಟ್ಟಿಗೆ ಚರ್ಚಿಸಲಾಗುವುದು ಎಂದು ಸಿದ್ದರಾಯ್ಯ ಭರವಸೆ ನೀಡಿದರು.
ಎಸ್​ಸಿಪಿ, ಟಿಎಸ್​ಪಿಗೆ ಹೆಚ್ಚು ಹಣ:
ಕಳೆದ 2013ಕ್ಕಿಂತ ಮೊದಲು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗುವ ಅನುದಾನ ಸುಮಾರು 8,000 ಕೋಟಿ ರೂ. ಇತ್ತು, ಬೆಳಗಾವಿ ಅಧಿವೇಶನದಲ್ಲಿ ಮೀಸಲಿರುವ ಅನುದಾನವನ್ನು ಉದ್ದೇಶ ಬಿಟ್ಟು ಬಳಕೆ ಮಾಡಬಾರದು ಎಂದು ಕಾನೂನು ರೂಪಿಸಲಾಯಿತು. ಆನಂತರ ಇದರ ಅನುದಾನದ ಗಾತ್ರ 15,000 ಕೋಟಿ ರೂ.ಗೆ ದಾಟಿತು. ಎಸಿಪಿ, ಟಿಎಸ್​ಪಿ ಯೋಜನೆಗೆ ನಾವು ಕೊಟ್ಟಷ್ಟು ಹಣ ಬೇರೆಯಾವುದೇ ಸರ್ಕಾರ ನೀಡಲಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.