ಎಳನೀರು ವ್ಯಾಪಾರ 
ಬೆಂಗಳೂರು

ಬೇಸಿಗೆಯಲ್ಲಿ ಬೆವರಿಳಿಸ್ತಿದೆ ಎಳನೀರು ಬೆಲೆ | tender coconut

ಪ್ರಮುಖ ಮುಖ್ಯಾಂಶಗಳು

  • ಈಗಿನ ದರ 60-70, ಮುಂದೆ 70- 80 ರೂ.ಗೆ ಏರಿಕೆ?
  • ರೋಗಿಗಳು, ವೃದ್ಧರಿಗೆ ಕೈಗೆಟುಕುತ್ತಿಲ್ಲ
  • ಇಳುವರಿ ಕಡಿತ, ರ್ತು ಹೆಚ್ಚಳ
ಪವನ್​ ಆಚಾರ್ಯ ನೀರ್ಚಾಲು ಬೆಂಗಳೂರು
ಮಹಾನಗರದಲ್ಲೀಗ ಎಲ್ಲಿ ನೋಡಿದರೂ ಸಮಸ್ಯೆಗಳದ್ದೇ ಆಟಾಟೋಪ! ಕಂಡಕಂಡಲ್ಲಿ ಅಗೆದು& ಬಗೆದ ರಸ್ತೆಗಳು, ಆಮೆಗತಿಯ ಕಾಮಗಾರಿ.. ಹೋದಲ್ಲಿ ಬಂದಲ್ಲಿ ಧೂಳಿನ ಮಜ್ಜನ.. ಜೀವ ಹಿಂಡುವ ಟ್ರಾಫಿಕ್​ ಜಾಮ್​... ಇದೆಲ್ಲದರಿಂದ ಮನಸ್ಸಂತೂ ಅಸ್ವಸ್ಥವಾಗಿದ್ದಾಗಿದೆ; ದೈಹಿಕ ಸ್ವಾಸ್ಥ$್ಯವನ್ನಾದರೂ ಉಳಿಸಿಕೊಳ್ಳೋಣ ಅಂದರೆ ಅದಕ್ಕೂ ನೂರಾರು ಅಡ್ಡಿಆತಂಕಗಳು. ರಾಸಾಯನಿಕ ಅಂಶಗಳಿರುವ ಹಣ್ಣುಗಳು ಆ ಹೊತ್ತಿಗಷ್ಟೇ ತೃಪ್ತಿ ನೀಡುತ್ತದೆ. ಎಳನೀರಿಗೆ ಮೊರೆಹೋಗೋಣ ಎಂದುಕೊಂಡರೆ, ಬೇಸಿಗೆಯಲ್ಲಿ ಅದರ ಬೆಲೆ ಕಿವಿಗೆ ಬಿದ್ದರೆ ಬೆವರಿಳಿಯುತ್ತದೆ!
ಕಳೆದ ವಾರದ ಹಿಂದೆ 40-50 ರೂ.ಗೆ ಲಭಿಸುತ್ತಿದ್ದ ಎಳನೀರು ದಿಢೀರನೆ 60 ರೂ.ಗೆ ಏರಿದೆ. ಮುಂದಿನ ವಾರ 70 ರೂ.ಗೆ ಮುಟ್ಟುವ ನಿರೀೆ ಇದೆ ಎಂದು ವ್ಯಾಪಾರಿಗಳು ಇಂಗಿತ ವ್ಯಕ್ತಪಡಿಸಿದ್ದಾರೆ. ಎಳನೀರಿನ ಬೆಲೆ ಹೆಚ್ಚಳ ನಗರದಲ್ಲಿ ಮಾಮೂಲಿ ಎನಿಸಿಬಿಟ್ಟಿದೆ. "ಇಷ್ಟವಿದ್ದವರು ಕುಡಿಯುತ್ತಾರೆ, ಕಷ್ಟವಿದ್ದವರು ಬಿಡುತ್ತಾರೆ. ಬೇರೆಲ್ಲ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವಾಗ ಎಳನೀರು ಬೆಲೆ ಮಾತ್ರ ಕೈಗೆಟುಕುಂತಾಗಬೇಕು ಅಂದುಕೊಂಡರೆ ಹೇಗೆ' ಎಂಬುದು ವ್ಯಾಪಾರಿಗಳ ಡೈಲಾಗ್​. ಅಲ್ಲಿಗೆ ಕಳೆದ ವರ್ಷದಂತೆ ಈ ಬಾರಿಯೂ ಎಳನೀರಿನ ಗರಿಷ್ಠ ಬೆಲೆ 70-80 ರೂ. ಆಸುಪಾಸು ತಲುಪುವ ಸೂಚನೆಗಳಂತೂ ಸಿಕ್ಕಿವೆ.
ಹವಾಮಾನ ವೈಪರೀತ್ಯ, ರೋಗಬಾಧೆ ಹೀಗೆ ಹಲವು ಕಾರಣಗಳಿಂದ ಎಳನೀರು ಇಳುವರಿ ಕಡಿಮೆಯಾಗುತ್ತದೆ. ಬೆಂಗಳೂರಿನಲ್ಲಿ ಸಿಗುವ ಹೆಚ್ಚಿನ ಎಳನೀರು ಮಂಡ್ಯ, ಚಾಮರಾಜನಗರ, ಮದ್ದೂರು, ಮಳವಳ್ಳಿ, ರಾಮನಗರ, ಹಾಸನ ಮತ್ತು ತುಮಕೂರಿನಿಂದ ಬರುತ್ತವೆ. ಬೈರಮಂಗಲದಂತಹ ಪ್ರದೇಶಲ್ಲಿ ಕಡಿಮೆ ಗುಣಮಟ್ಟದ ಎಳನೀರುಸಿಗುತ್ತದೆ. ಗಾತ್ರದಲ್ಲೂ ಚಿಕ್ಕದಾಗಿರುವುದರಿಂದ 30 ರೂ.ಗೆ ಮಾರಾಟ ಮಾಡಲಾಗುತ್ತದೆ. ಕಡಿಮೆ ಗುಣಮಟ್ಟದ ಉತ್ಪನ್ನ ತರಿಸಿ, ಲಕದಲ್ಲಿ ಕೇವಲ 30 ರೂ. ಎಂದು ಹಾಕಿ ಮಾರಾಟ ಮಾಡುತ್ತಾರೆ. ಇದು ಬರೀ ಗ್ರಾಹಕರನ್ನು ಸೆಳೆಯಲು ಮಾತ್ರ. "ಇದು ಒಳ್ಳೆಯದಿಲ್ಲ ಸ್ವಾಮಿ.. ನಿಮಗೆ ಒಳ್ಳೆಯ ಸಿಹಿ ಎಳನೀರು ಬೇಕೆಂದರೆ ಮತ್ತೆ ಇದೇ ಸೂಕ್ತ' ಎಂದು 60 ರೂ. ಬೆಲೆ ತೋರಿಸುತ್ತಾರೆ.
ವ್ಯಾಪಾರಿಗಳಿಗೆ ಸುಮಾರು 40-45 ರೂ.ಗೆ ಎಳನೀರು ಸಿಕ್ಕರೆ, ಬೆಲೆ 60 ರೂ. ದಾಟುವುದಿಲ್ಲ. ಆದರೆ, ಸೀಸನ್​ ಆಗಿರುವುದರಿಂದ 50-55 ರೂ.ಗೆ ಸಿಕ್ಕರೆ ಸ್ವಾಭಾವಿಕವಾಗಿ ದರ ಏರಿಕೆಯಾಗುತ್ತದೆ. ವ್ಯಾಪಾರಿಗಳು ಕನಿಷ್ಠ 5 ಅಥವಾ 10 ರೂ. ಹೆಚ್ಚುವರಿ ದರ ನಿಗದಿಮಾಡಿದರೂ ಈ ಪದಾರ್ಥ ಅಕ್ಷರಶ@ ಗಗನಮುಖಿಯಾಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವರು, ಮಕ್ಕಳು, ಪೌಷ್ಟಿಕಾಂಶ ಕೊರತೆಯಿಂದ ಬಳಲುವವರು ಅತ್ಯಗತ್ಯ ಎಳನೀರು ಬದಲು ಪರ್ಯಾಯ ಆಲೋಚನೆ ಮಾಡುವಂತಾಗಿದೆ.
ಬೇರೆ ನಗರಗಳಿಗೆ ರಫ್ತು
ಬೆೆಂಗಳೂರಿಗೆ ಪೂರೈಕೆ ಕಡಿಮೆಯಾಗಲು ಮುಂಬೈ ಇತ್ಯಾದಿ ನಗರಗಳಿಗೆ ಎಳನೀರಿನ ಒಳ್ಳೆಯ ತಳಿಗಳು ರ್ತಾಗುತ್ತಿರುವುದು ಕಾರಣವಾಗಿದೆ. ಇದರಿಂದ ಇಲ್ಲಿ ಉತ್ಪನ್ನ ಕೂಡ ಹೆಚ್ಚಾಗಿ ಮಾರಾಟವಾಗುವುದಿಲ್ಲ. ಗುಣಮಟ್ಟದ ಎಳನೀರು ಲಭಿಸದಿರುವಿಕೆ, ಪೂರೈಕೆಯಲ್ಲಿ ಇಳಿಕೆ ಪರಿಣಾಮ ಎಳನೀರು ವ್ಯಾಪಾರಿಗಳಿಗೆ ಸಮಸ್ಯೆಯಾಗುತ್ತದೆ. ವ್ಯಾಪಾರಕ್ಕೆ ಅಗತ್ಯವಾದಷ್ಟು ಮಾರುಕಟ್ಟೆಗೆ ಬಾರದೆ ಇರುವುದರಿಂದ ಎಳನೀರಿನ ಬೆಲೆ ಸಹಜವಾಗಿಯೇ ಮಧ್ಯಮವರ್ಗದವರು ಜೇಬಿಗೆ ಭಾರವಾಗಿದೆ.
ಪರ್ಯಾಯಗಳೂ ಸಿದ್ಧ
ಎಳನೀರು ದರ ಏರಿಕೆಯಾಗುತ್ತಿದ್ದಂತೆ ತಾಟಿನಿಂಗು, ಕಲ್ಲಂಗಡಿ ವ್ಯಾಪಾರ ಭರದಿಂದ ಸಾಗುತ್ತಿದೆ. ಎಳನೀರು ಬೆಲೆ ಏರಿಕೆಯಿಂದ ಬೇಸತ್ತ ಗ್ರಾಹಕರು ಪರ್ಯಾಯ ಮಾರ್ಗಗಳನ್ನು ನೋಡುವುದು ಸಾಮಾನ್ಯ. ತಾಟಿನಿಂಗುವಿನ ಬೆಲೆ ಅಲ್ಪ ಕಡಿಮೆ ಇರುವುದರಿಂದ ಜನ ಆ ಕಡೆಗೆ ಆಕರ್ಷಣೆಗೆ ಒಳಗಾಗುವ ಸಾಧ್ಯತೆ ಇದೆ.

ನಗರದ ವಿವಿಧ ಭಾಗದಲ್ಲಿ ಒಂದೊಂದು ರೀತಿ ಬೆಲೆ ಇದೆ. ಸುಮಾರು 30 ರೂ.ನಿಂದ 70 ರೂ.ವರೆಗೂ ದರ ಏರಿಕೆ ಕಂಡಿದೆ. ಗುಣಮಟ್ಟದ ಎಳನೀರು ಬೇಕಿದ್ದರೆ 60&70 ರೂ. ಇದೆ. ಏಳನೀರಿಗೆ ಬೆಲೆ ಅಧಿಕವಾದರೆ ಜನ ಪರ್ಯಾಯವಾಗಿ ತಾಟಿನಿಂಗು, ಕಲ್ಲಂಗಡಿ ತೆಗೆದುಕೊಳ್ಳುತ್ತಾರೆ.

ನಗರಕ್ಕೆ ಹೆಚ್ಚಾಗಿ ಮಂಡ್ಯ ಹಾಗೂ ಚಾಮರಾಜನಗರ ಕಡೆಯಿಂದ ಎಳನೀರು ಬರುತ್ತದೆ. ಸದ್ಯ ಸಗಟು 45 ರೂ.ಗೆ ಸಿಗುತ್ತಿದೆ. ಅದನ್ನು ನಾವು 60 ರೂ.ಗೆ ಮಾರಾಟ ಮಾಡುತ್ತಿದ್ದೇವೆ. ದಿನಕ್ಕೆ ಕನಿಷ್ಠ 100 ಎಳನೀರು ಮಾರಾಟವಾದರೆ ಮಾತ್ರ ಸ್ವಲ್ಪ ಲಾಭ ಉಂಟು.