ಟಾಟಾ ಮೋಟರ್ಸ್ ನ 17 ಟ್ರಕ್ ಬಿಡುಗಡೆ​  
ಬೆಂಗಳೂರು

ಟಾಟಾ ಮೋಟಾರ್ಸ್​ನಿಂದ 17 ಟ್ರಕ್​ಗಳು ಮಾರುಕಟ್ಟೆಗೆ | TATA

ಪ್ರಮುಖ ಮುಖ್ಯಾಂಶಗಳು

  • ನವದೆಹಲಿಯಲ್ಲಿ ಅನಾವರಣ
  • ಅತ್ಯುತ್ತಮ ಕಾರ್ಯಕ್ಷಮತೆ, ಹೆಚ್ಚಿನ ಸೌಕರ್ಯ, ದೀರ್ಘಾ ಬಾಳಿಕೆ ಸಾಮರ್ಥ್ಯ
ಪವನ್​ ಆಚಾರ್ಯ ನೀರ್ಚಾಲು ನವದೆಹಲಿ
ಸುರಕ್ಷತೆ, ಲಾಭದಾಯಕತೆ ಮತ್ತು ಪ್ರಗತಿಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿರುವ ಟಾಟಾ ಮೋಟಾರ್ಸ್​, ಹೊಸ ಮಾದರಿಯ 17 ಟ್ರಕ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ನವದೆಹಲಿಯ ಭಾರತ್​ ಮಂಡಪಂನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್​ ವಾಘ್​ ಹಾಗೂ ಬಿಜಿನೆಸ್​ ಹೆಡ್​ ರಾಜೇಶ್​ ಕೌಲ್​ ಅವರು ಹೊಸ ಮಾದರಿಯ ಟ್ರಕ್​ಗಳನ್ನು ಅನಾವರಣ ಮಾಡಿದರು.
ಹೊಚ್ಚ ಹೊಸ "ಅಜುರಾ'ಸರಣಿ, ಅತ್ಯಾಧುನಿಕ 'ಟಾಟಾ ಟ್ರಕ್ಸ್​.ಇವಿ' ಶ್ರೇಣಿ ಮತ್ತು ಈಗಾಗಲೆ ಜನಪ್ರಿಯವಾಗಿರುವ ಪೆಮಾ, ಸಿಗ್ಮಾ ಹಾಗೂ ಅಲ್ಟ್ರಾ ವಾಹನಗಳ ಸುಧಾರಿತ ಆವೃತ್ತಿಗಳನ್ನು ಪರಿಚಯಿಸಲಾಗಿದೆ. 
ಅತ್ಯುತ್ತಮ ಕಾರ್ಯಕ್ಷಮತೆ, ಹೆಚ್ಚಿನ ಸೌಕರ್ಯ ಮತ್ತು ಹೆಚ್ಚಿನ ಅವಧಿ ಕೆಲಸ ಮಾಡುವ ಸಾಮರ್ಥ್ಯವಿರುವ "ಅಜುರಾ' ಶ್ರೇಣಿಯು ಮಧ್ಯಮ ಮತ್ತು ಹಗುರವಾದ ವಾಣಿಜ್ಯ ವಾಹನ (ಐಎಲ್​ಎಂಸಿವಿ) ವಿಭಾಗದಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸೌಂದರ್ಯ ಮತ್ತು ಉಪಯುಕ್ತತೆ ಎರಡೂ ಸಂಯೋಜನೆಗೊಂಡಿರುವ ಆಕರ್ಷಕ ಸರಣಿ ಇದಾಗಿದೆ. 
ಟಾಟಾ ಮೋಟಾರ್ಸ್​ನ ಲಿ. ಎಂಡಿ ಮತ್ತು ಸಿಇಒ ಗಿರೀಶ್​ ವಾಘ್​ ಅವರು, ಆತ್ಮನಿರ್ಭರ ಭಾರತ, ಆಧುನಿಕ ಮೂಲಸೌಕರ್ಯ ಮತ್ತು ಸುರಕ್ಷಿತ, ಸ್ವಚ್ಛ ಹಾಗೂ ಹೆಚ್ಚು ಪರಿಣಾಮಕಾರಿ ಲಾಜಿಸ್ಟಿಕ್ಸ್​ ಮೇಲಿನ ಬೇಡಿಕೆ ಹೆಚ್ಚಳದಿಂದಾಗಿ ದೇಶದ ಟ್ರಕ್​ ಕ್ಷೇತ್ರವು ಕ್ಷಿಪ್ರ ಬದಲಾವಣೆಯನ್ನು ಕಾಣುತ್ತಿದ್ದು, ಉದ್ಯಮದ ಭವಿಷ್ಯ ಮತ್ತಷ್ಟು ಎತ್ತರಕ್ಕೇರಿಸಲು ಟಾಟಾ ಮೋಟಾರ್ಸ್​ ಯಾವಾಗಲೂ ಮುಂಚೂಣಿಯಲ್ಲಿದೆ ಎಂದರು.

ಅಜುರಾ ಸರಣಿ, ಎರಡು ಸುಧಾರಿತ ಉನ್ನತ- ದಕ್ಷತೆಯ ಪವರ್​ಟ್ರೇನ್​ಗಳು, ನಮ್ಮ ಹೊಸ ಐ-ಎಂಒ ಇವಿ ಆರ್ಕಿಟೆಕ್ಚರ್​ ಅಡಿಯಲ್ಲಿ ಶೂನ್ಯ ಹೊಗೆಸೂಸುವ ಎಲೆಕ್ಟ್ರಿಕ್​ ಟ್ರಕ್​ಗಳು ಮತ್ತು ಟಿಪ್ಪರ್​ಗಳು ಸೇರಿವೆ. ಜತೆಗೆ ಯುರೋಪಿಯನ್​ ಗುಣಮಟ್ಟದ ಕ್ಯಾಬಿನ್​ಗಳು, ಅತ್ಯುತ್ತಮ ಸುರಕ್ಷತಾ ವೈಶಿಷ್ಟ್ಯಗಳು, ಹೆಚ್ಚಿನ ಪೇಲೋಡ್​ ಸಾಮರ್ಥ್ಯ ಮತ್ತು ಇಂಧನ ದಕ್ಷತೆಯನ್ನು ಹೊಂದಿದ್ದು, ಇವೆಲ್ಲವನ್ನೂ ಫ್ಲೀಟ್​ ಎಡ್ಜ್​ಡಿಜಿಟಲ್​ ಸೇವೆಗಳೊಂದಿಗೆ ಸಂಯೋಜಿಸಲಾಗಿದೆ.