ಕೆ ರೈಡ್ 
ಬೆಂಗಳೂರು

ಉಪನಗರ ರೈಲು ಯೋಜನೆಗೆ ಚುರುಕು| k ride

ಪ್ರಮುಖ ಮುಖ್ಯಾಂಶಗಳು

  • 1,513.75 ಕೋಟಿ ರೂ.ಮೊತ್ತದ ಕಾರ್ಯಾದೇಶ
ಬೆಂಗಳೂರು: ರಾಜಧಾನಿ ಹೊರವಲಯ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡುವ ಬೆಂಗಳೂರು ಉಪನಗರ ರೈಲು ಯೋಜನೆಗೆ ಮಹತ್ವದ ಉತ್ತೇಜನ ಸಿಕ್ಕಿದೆ. ಯೋಜನೆಯ 2ನೇ ಹಾಗೂ 4ನೇ ಕಾರಿಡಾರ್​ಗಳಿಗೆ ಅಗತ್ಯವಿರುವ 153 ಹವಾನಿಯಂತ್ರಿತ ಮೆಟ್ರೋ ಮಾದರಿಯ ರೈಲು ಬೋಗಿಗಳ ಖರೀದಿಗೆ ಚೆನ್ನೆನ ಇಂಟೆಗ್ರಲ್​ ಕೋಚ್​ ಕಾರ್ಖಾನೆಗೆ (ಐಸಿಎ್​) 1,513.75 ಕೋಟಿ ರೂ. ಮೊತ್ತದ ಕಾರ್ಯಾದೇಶ ನೀಡಲಾಗಿದೆ.
ಬೆಂಗಳೂರು ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ (ಬಿ&ರೈಡ್​) ಈ ಕಾರ್ಯಾದೇಶವನ್ನು ಅಧಿಕೃತವಾಗಿ ಜಾರಿಗೊಳಿಸಿದ್ದು, ಮೇ 6ರಿಂದ ಒಪ್ಪಂದ ಜಾರಿಗೆ ಬಂದಿದೆ. ಈ ಒಪ್ಪಂದದ ಅನ್ವಯ, ಮುಂದಿನ 18 ತಿಂಗಳೊಳಗೆ ರೈಲು ಬೋಗಿಗಳ ನಿಮಾರ್ಣ ಮತ್ತು ಪೂರೈಕೆ ಪ್ರಕ್ರಿಯೆಯನ್ನು ಆರಂಭಿಸುವ ಜವಾಬ್ದಾರಿ ಐಸಿಎ್​ ಮೇಲಿದೆ. ಇದರ ಮೂಲಕ ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿಗಳು ಮತ್ತಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ.
ಯೋಜನೆಯ 2ನೇ ಕಾರಿಡಾರ್​ ವ್ಯಾಪ್ತಿಯ ಚಿಕ್ಕಬಾಣಾವರ&ಯಶವಂತಪುರ ಮಾರ್ಗ ಹಾಗೂ 4ನೇ ಕಾರಿಡಾರ್​ನ ಪ್ರಮುಖ ಸಂಪರ್ಕ ಮಾರ್ಗಗಳನ್ನು ನಿಗದಿತ ಅವಧಿಯೊಳಗೆ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 
ಕಾರ್ಯಾದೇಶದ ವ್ಯಾಪ್ತಿಯಲ್ಲಿ ಕೇವಲ ರೈಲು ಬೋಗಿಗಳ ನಿಮಾರ್ಣ ಮಾತ್ರವಲ್ಲದೆ, ಅವುಗಳ ಸಂಪೂರ್ಣ ವಿನ್ಯಾಸ, ತಾಂತ್ರಿಕ ಜೋಡಣೆ, ಗುಣಮಟ್ಟ ಪರಿಶೀಲನೆ, ಸುರಕ್ಷತಾ ಪರೀಕ್ಷೆ ಮತ್ತು ಕಾರ್ಯಾರಂಭದವರೆಗೆ ಎಲ್ಲ ಜವಾಬ್ದಾರಿಗಳು ಸೇರಿವೆ. ಜತೆಗೆ ಸಿಗ್ನಲಿಂಗ್​ ವ್ಯವಸ್ಥೆ, ವಿದ್ಯುತ್​ ಪೂರೈಕೆ ವ್ಯವಸ್ಥೆ, ನಿಲ್ದಾಣಗಳ ಸುರಕ್ಷತಾ ಸೌಲಭ್ಯಗಳು ಹಾಗೂ ಇತರೆ ತಾಂತ್ರಿಕ ವ್ಯವಸ್ಥೆಗಳೊಂದಿಗೆ ಸಮನ್ವಯ ಸಾಧಿಸುವ ಹೊಣೆಗಾರಿಕೆಯೂ ಕಾರ್ಖಾನೆಗೆ ನೀಡಲಾಗಿದೆ.

ಬೆಂಗಳೂರು ಉಪನಗರ ರೈಲು ಯೋಜನೆಗೆ ಇದು ಐತಿಹಾಸಿಕ ಹಂತ. ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳ್ಳುವ ವೇಳೆಗೆ ಅಗತ್ಯ ರೈಲು ಬೋಗಿಗಳು ಸಿದ್ಧವಾಗುವಂತೆ ಯೋಜನೆ ರೂಪಿಸಲಾಗಿದೆ. ಇದರಿಂದ ಬೆಂಗಳೂರಿನ ಜನತೆಗೆ ವಿಶ್ವದರ್ಜೆಯ ಸಾರ್ವಜನಿಕ ಸಾರಿಗೆ ವ್ಯವಸ್ಥೆ ನೀಡಲು ಸಾಧ್ಯವಾಗಲಿದೆ.

— ಲಕ್ಷ್ಮಣ್​ ಸಿಂಗ್​, ಬೆಂಗಳೂರು ರೈಲು ಮೂಲಸೌಕರ್ಯ ಅಭಿವೃದ್ಧಿ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ