ಬೆಂಗಳೂರು

ಕೇಂದ್ರದ ಜತೆ ಸಂಘರ್ಷಕ್ಕೆ ರಾಜ್ಯ ಸಿದ್ಧ !

ಬೆಳಗಾವಿ ಅಧಿವೇಶನ ಪೂರ್ಣಗೊಳ್ಳುವ ಮೊದಲು ಅಂದರೆ ಡಿ.11 ರೊಳಗೆ ಬರಪರಿಹಾರದ ಮೊತ್ತ 22,400 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಗಡುವು ವಿಧಿಸಿರುವ ಸಿಎಂ, ಸ್ಪಂದಿಸದೆ ಹೋದರೆ ಹೋದರೆ ಸಂಘರ್ಷ ಅನಿವಾರ್ಯ ಎಂದು ಶನಿವಾರ ಸುದ್ದಿಗೋಷ್ಠಿ ಮೂಲಕ ಸಂದೇಶ ರವಾನಿಸಿದರು.

ಬೆಂಗಳೂರು:ಬರಪರಿಹಾರ ಸಂಬಂಧ ಕೇಂದ್ರ ಸರ್ಕಾರದ ಜತೆ ಸಂಘರ್ಷಕ್ಕಿಳಿಯುವ ಸ್ಪಷ್ಟ ಸೂಚನೆ ನೀಡಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆಡಳಿತಾರೂಢ ಕಾಂಗ್ರೆಸ್ ಸಚಿವರು, ಶಾಸಕರು ದಿಲ್ಲಿ ಚಲೋ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಅಧಿವೇಶನ ಪೂರ್ಣಗೊಳ್ಳುವ ಮೊದಲು ಅಂದರೆ ಡಿ.11 ರೊಳಗೆ ಬರಪರಿಹಾರದ ಮೊತ್ತ 22,400 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ಗಡುವು ವಿಧಿಸಿರುವ ಸಿಎಂ, ಸ್ಪಂದಿಸದೆ ಹೋದರೆ ಹೋದರೆ ಸಂಘರ್ಷ ಅನಿವಾರ್ಯ ಎಂದು ಶನಿವಾರ ಸುದ್ದಿಗೋಷ್ಠಿ ಮೂಲಕ ಸಂದೇಶ ರವಾನಿಸಿದರು.

ಇಡೀ ಕರ್ನಾಟಕ ಬರದ ಬೇಗೆಯಲ್ಲಿ ಬೇಯುತ್ತಿದೆ. ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಈ ಹೊತ್ತಲ್ಲೂ ಕೇಂದ್ರ ಸರ್ಕಾರ ನಯಾಪೈಸೆ ಬಿಡುಗಡೆ ಮಾಡದೆ ಸತಾಯಿಸುತ್ತಿದೆ ಎಂದು ಆಕ್ರೋಶ ಹೊರ ಹಾಕಿದರು.

ಯಾವುದಕ್ಕೂ ಬೆಳಗಾವಿ ಅಧಿವೇಶನದ ವರೆಗೆ ಕಾದುನೋಡುವ ನಿರ್ಧಾರಕ್ಕೆ ಬಂದಿದ್ದೇವೆ. ಆ ಬಳಿಕ ದಿಲ್ಲಿ ಚಲೋ ಮಾತ್ರವಲ್ಲ. ಸುಪ್ರೀಂ ಕೋರ್ಟ್ ಕದ ತಟ್ಟಲು ಕೂಡ ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.

ಕೇಂದ್ರಕ್ಕೆ ಅದಿನ್ನೆಷ್ಟು ಬಾರಿ ಪತ್ರ ಬರೆಯಬೇಕು-ಮನವಿ ಸಲ್ಲಿಸಬೇಕು ಎಂದು ಪ್ರಶ್ನಿಸಿದ ಸಿಎಂ, ಬರ ಪರಿಸ್ಥಿತಿ ಮನವರಿಕೆ ಮಾಡಿಕೊಡಲು ಸರ್ವಪಕ್ಷ ನಿಯೋಗ ತೆರಳಲು ಸಮಯ ಕೇಳಿದ್ದೇವೆ. ಅದಕ್ಕೂ ಉತ್ತರ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

226 ತಾಲೂಕುಗಳಲ್ಲಿ ಬರ, 22,440 ಕೋಟಿಗೆ ಮೊರೆ

ರಾಜ್ಯದ 226 ತಾಲೂಕುಗಳು ಬರಕ್ಕೆ ಭಾದಿತವಾಗಿವೆ. 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಆಗಿದ್ದು 62,481. 88 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ 22,400.58 ಕೋಟಿ ರೂ.ನೆರವು ಕೋರಿ ಕೇಂದ್ರಕ್ಕೆ ಮೂರು ಬಾರಿ ಪ್ರಸ್ತಾವನೆ ಸಲ್ಲಿಸಲಾಗಿದೆ.

ದಲ್ಲಿ 62,000 ಕೋಟಿ ರೂ.ನಷ್ಟ ಸಂಭವಿಸಿದ್ದು ಎನ್‌ಡಿಆರ್‌ಎ್ನಿಂದ ದೆ ಎಂದು ಅಂದಾಜು ಮಾಡಲಾಗಿದ್ದು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ 22,400 ಕೋಟಿ ರೂ. ಬಿಡುಗಡೆಗೆ ಕೇಂದ್ರಕ್ಕೆ ಮೂರು ಬಾರಿ ಪ್ರಸ್ತಾವನೆ ಸಲ್ಲಿಸಿದ್ದರೂ ಇದುವರೆಗೆ ನಯಾಪೈಸೆ ಬಿಡುಗಡೆ ಮಾಡಿಲ್ಲ.

ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೂ ಸರ್ಕಾರ ಪತ್ರ ಬರೆದಿದೆ. ಬರ ಪರಿಸ್ಥಿತಿ ಚಿತ್ರಣ ವಿವರಿಸಲು ಮೂವರ ಭೇಟಿಗೂ ಸಮಯ ಕೇಳಲಾಗಿದೆ.

ಸ್ವಂತ ಸಂಪನ್ಮೂಲದಿಂದ 5000 ರೂ. ಪರಿಹಾರ

ಕೇಂದ್ರದ ಅನುದಾನ ಕಾಯುತ್ತ ಕೂರುವ ಬದಲು ರಾಜ್ಯ ಸರ್ಕಾರದ ಸ್ವಂತ ಸಂಪನ್ಮೂಲ ಬಳಸಿ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ಕನಿಷ್ಠ 5,000 ಪರಿಹಾರ ನೀಡಲಾಗುತ್ತಿದ್ದರೂ ಕೃಷಿ ಕ್ಷೇತ್ರದಲ್ಲಿನ ನಷ್ಟ ಗಮನಿಸಿದರೆ ರಾಜ್ಯ ಸಂಪನ್ಮೂಲಗಳಿಂದಲೇ ಪರಿಸ್ಥಿತಿಯನ್ನು ನಿಭಾಯಿಸುವುದು ಕಷ್ಟ ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೇಳಿಕೆ ಬಿಡುಗಡೆ ಮಾಡಿತ್ತು.

ಸುಪ್ರೀಂ ಕದ ತಟ್ಟಿದ್ದ ಸಿದ್ದರಾಮಯ್ಯ

ರಾಜ್ಯದಲ್ಲಿ ಈ ಹಿಂದೆಯೂ ಬರಗಾಲ ತಲೆದೋರಿದಾಗ ಕೇಂದ್ರ ಸರ್ಕಾರ ಎನ್‌ಡಿಆರ್‌ಎ್ ಅಡಿ 19171 ಕೊಟಿ ರೂ.ಬಿಡುಗಡೆ ಮಾಡಲು ವಿಳಂಬ ಮಾಡುತ್ತಿದೆ ಎಂದು ಆಗಿನ ಸಿಎಂ ಸಿದ್ದರಾಮಯ್ಯ ಅವರು ಸಂವಿಧಾನದ ಪರಿಚ್ಛೇದ 32 ರ ಅಡಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕಾನೂನು ಹೋರಾಟದ ಲವಾಗಿ ಆಗ ಕೇಂದ್ರ ಸರ್ಕಾರ 3498.82 ಕೋಟಿ ರೂ. ಬಿಡುಗಡೆ ಮಾಡಿತ್ತು.

ಮುಖ್ಯಾಂಶಗಳು:

ಬರಪರಿಹಾರ ಬಿಡುಗಡೆ ವಿಳಂಬಕ್ಕೆ ಆಕ್ರೋಶ

ರಾಜ್ಯ ಸರ್ಕಾರದಿಂದ ದಿಲ್ಲಿ ಚಲೋ ಬೆದರಿಕೆ

ಸುಪ್ರೀಂಕೋರ್ಟ್ ಕದ ತಟ್ಟಲೂ ಸಿದ್ಧತೆ

ಬೆಳಗಾವಿ ಅಧಿವೇಶನ ಮುಕ್ತಾಯಕ್ಕೆ ಮುನ್ನ ಅನುದಾನ

ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ ಸಿಎಂ