ಬಿಜೆಪಿ ನಾಯಕ ಎಂ.ರುದ್ರೇಶ್ ಅವರು ಆಟೋಚಾಲಕರಿಗಾಗಿ ಆಯೋಜಿಸಿದ್ದ ವಿವಿಧ ಸವಲತ್ತುಗಳ ವಿತರಣಾ ಸಮಾರಂಭದಲ್ಲಿ ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗಾ ಮಹಾಸ್ವಾಮೀಜಿ ಆಟೋ ಚಾಲಕರಿಗೆ ವಿತರಿಸಿದರು.
ಸೋಂಪುರ ರುದ್ರೇಶ್ ಸಮಾಜಮುಖಿ ಕಾರ್ಯಕ್ಕೆ ಶ್ರೀ ಸಿದ್ದಲಿಂಗ ಸ್ವಾಮೀಜಿ ಶ್ಲಾಘನೆ
ಬೆಂಗಳೂರು:ಸಾಮಾಜಿಕ,ಶೈಕ್ಷಣಿಕವಾಗಿ,ಸಮಾಜಮುಖಿ ಸೇವೆ ಮಾಡುವ ಮೂಲಕ ಸಮಾಜದ ಪ್ರಗತಿಗಾಗಿ ಶ್ರಮಿಸುತ್ತಿರುವ ಸೋಂಪುರ ಎಂ.ರುದ್ರೇಶ್ ಅವರ ಕಾರ್ಯ ಶ್ಲಾಘನೀಯ ಎಂದು ಸಿದ್ದಗಂಗಾ ಮಠದ ಶ್ರೀಸಿದ್ದಲಿಂಗ ಸ್ವಾಮೀಜಿ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಸೋಂಪುರದಲ್ಲಿ ಎಂ.ರುದ್ರೇಶ್ ಅವರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ,1500 ಕ್ಕೂ ಹೆಚ್ಚು ಆಟೋಚಾಲಕನಿಗೆ ಸಮವಸ್ತ್ರ ಪ್ರೋತ್ಸಾಹಧನ ವಿತರಣೆ ಸನ್ಮಾನ,500ಕ್ಕೂ ಹೆಚ್ಚು ವಿಶೇಷ ಚೇತನರಿಗೆ ವಿವಿಧ ಸವಲತ್ತು ವಿತರಣೆ, ಪೌರಕಾರ್ಮಿಕರಿಗೆ ನೀಡಿದ ಸವಲತ್ತು ವಿತರಣಾ ಸಮಾರಂಭದಲ್ಲಿ ಮಾತನಾಡಿ ತನ್ನ ಸುತ್ತಮುತ್ತಲಿನ ಜನರಿಗಾಗಿ ಸೇವೆ ಮಾಡುವಂತಹ ಗುಣ, ಮಾನವೀಯತೆ ಬೆಳೆಸಿಕೊಂಡಿರುವ ಜನರಿಂದ ಮಾತ್ರ ಆರೋಗ್ಯವಂತ ರಾಷ್ಟ್ರ ಕಾಣಬಹುದು ಎಂದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಂ.ರುದ್ರೇಶ್ ಪ್ರತಿ ವರ್ಷ ಧಾರ್ಮಿಕ,ಶೈಕ್ಷಣಿಕ,ಸಾಮಾಜಿಕ,ಜನರ ಸೇವೆ ಮಾಡಿಕೊಂಡು ಬರಲಾಗುತ್ತಿದ್ದು,ಎಲ್ಲರ ಸಹಕಾರ ಅತ್ಯಮೂಲ್ಯವಾಗಿದೆ. ಜನ ಸೇವೆಯೇ ಜನಾರ್ಧನ, ಭಗವಂತನ ಸೇವೆ ಎಂದು ನಂಬಿರುವ ಅವರು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಸೇವೆಗಳಲ್ಲಿ ತೊಡಗಿಕೊಂಡು ಯಶಸ್ವಿಯಾಗಲಿ ಎಂದು ಹೇಳಿದರು.
ಶಿವಗಂಗೆಯ ಹೊನ್ನಗವಿ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮಿ, ದೇಗುಳ ಮಠದ ಚನ್ನಬಸವ ಸ್ವಾಮಿ,ವಿಜಯಸೇನೆ ರಾಜ್ಯಘಟಕದ ಅಧ್ಯಕ್ಷ ಎಚ್.ಎನ್.ದೀಪಕ್,ಜಿ.ಪಂ.ಮಾಜಿ ಅಧ್ಯಕ್ಷ ಮರಿಸ್ವಾಮಿ ,ಒಕ್ಕಲಿಗರ ಸಂಘದ ನಿರ್ದೇಶಕ ಸಿ.ಎಂ.ಮಾರೇಗೌಡ,ಬಿಬಿಎಂಪಿ ಮಾಜಿ ಸದಸ್ಯರಾದ ಶಾರದಮುನಿರಾಜು, ವಿ.ವಿ.ಸತ್ಯನಾರಾಯಣ, ರ.ಆಂಜಿನಪ್ಪ, ಆರ್.ಮುನಿರಾಜು, ವೀಣಾನಾಗರಾಜ್, ಮುಖಂಡರಾದ ಸೂಲಿಕೆರೆ ಮೋಹನ್‌ಕುಮಾರ್ ಅನಿಲ್ ಚಳಗೇರಿ, ಜಯರಾಮೇಗೌಡ, ಎನ್.ಸಿ.ಕುಮಾರ್, ವಿ.ರಘು,ರಘುನಂದನ್, ಜಿ.ಪಂ.ಮಾಜಿ ಸದಸ್ಯ ಎ.ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಇದ್ದರು.