ಖನಿಜ ಭವನದಲ್ಲಿ ಸಚಿವ ಎಂ.ಬಿ.ಪಾಟೀಲ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳ ಜತೆಗೆ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆಸಿದರು. 
ಬೆಂಗಳೂರು

ಹೊಸ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿಗಳಿಗೆ ವೇಗ

ಪ್ರಮುಖ ಮುಖ್ಯಾಂಶಗಳು

  • ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ ಸೂಚನೆ
  • ಬೆಂಗಳೂರು-ವಿಜಯಪುರ ರೈಲು ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
  • ಎರಡು ಚತುಷ್ಪಥ ಮಾರ್ಗಗಳ ಸಮೀಕ್ಷೆ ಸದ್ಯದಲ್ಲೇ ಪೂರ್ಣ
ಬೆಂಗಳೂರು: ಕರ್ನಾಟಕದಲ್ಲಿ ಹೊಸ ರೈಲು ಮಾರ್ಗ ನಿರ್ಮಾಣ ಕಾಮಗಾರಿಗಳನ್ನು ಮತ್ತಷ್ಟು ಚುರುಕುಗೊಳಿಸಲು ಮೂಲಸವಲತ್ತು ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಸೂಚಿಸಿದ್ದಾರೆ.
ವಿಜಯಪುರ-ಬೆಂಗಳೂರು ರೈಲು ಸಂಚಾರಕ್ಕೆ ಹುಬ್ಬಳ್ಳಿ-ಗದಗ ಬೈಪಾಸ್ ಬಳಕೆಗೆ ರೈಲ್ವೆ ಅಧಿಕಾರಿಗಳು ಒಪ್ಪಿದ್ದಾರೆ. ಇದೊಂದು ಮಹತ್ವದ ಬೆಳವಣಿಗೆಯಾಗಿದೆ ಎಂದಿದ್ದಾರೆ.
ಖನಿಜ ಭವನದಲ್ಲಿ ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳ ಜತೆಗೆ ರೈಲ್ವೆ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬುಧವಾರ ನಡೆಸಿದರು. ನೈಋತ್ಯ ರೈಲ್ವೆ ಉಪಮುಖ್ಯ ಇಂಜಿನಿಯರ್ ಶಾಸಿ ವಿಡಿಯೋ ಸಂವಾದದ ಮೂಲಕ ಭಾಗಿಯಾಗಿದ್ದರು.
ಬೆಂಗಳೂರು-ವಿಜಯಪುರ ರೈಲ್ವೆ ಸಂಚಾರಕ್ಕೆ ಹುಬ್ಬಳ್ಳಿ-ಗದಗ ಬೈಪಾಸ್ ಬಳಕೆಗೆ ಅಭ್ಯಂತರವಿಲ್ಲ. ಆದರೆ ಚಾಲ್ತಿಯಲ್ಲಿರುವ ರೈಲುಗಳ ಮಾರ್ಗ ಬದಲಿಸಲು ಸಾಧ್ಯವಿಲ್ಲ.
ಇದಕ್ಕಾಗಿ ರೈಲ್ವೆ ಮಂಡಳಿಯಿಂದ ಹೊಸ ರೈಲುಗಳನ್ನು ಮಂಜೂರು ಮಾಡಿಸಿಕೊಳ್ಳಬೇಕು ಎಂದು ನೈಋತ್ಯು ವಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು-ವಿಜಯಪುರ ರೈಲು ಸಂಚಾರಕ್ಕೆ ಬೈಪಾಸ್ ಬಳಕೆ ಅವಕಾಶ ಸಿಗುತ್ತಿದೆ. ಇದರಿಂದಾಗಿ ಪ್ರಯಾಣದ ಅವಧಿ ಈಗಿನ 15 ತಾಸುಗಳಿಂದ ಗಮನಾರ್ಹವಾಗಿ ಕಡಿಮೆಯಾಗಲಿದೆ.
ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರಿಗೆ ಪತ್ರ ಬರೆದು, ಹೊಸ ರೈಲುಗಳ ಸಂಚಾರ ಸೇವೆಗಳ ಬಗ್ಗೆ ಆರಂಭಿಸಲು ಕೋರಲಾಗುವುದು ಎಂದಿದ್ದಾರೆ.

ಸಮೀಕ್ಷೆ ಸದ್ಯದಲ್ಲೇ ಪೂರ್ಣ

ಬೆಂಗಳೂರು-ತುಮಕೂರು ಹಾಗೂ ಬೆಂಗಳೂರು-ಮೈಸೂರು ಜೋಡಿ ಮಾರ್ಗಗಳನ್ನು ಚತುಷ್ಪಥ ಮಾರ್ಗಗಳಾಗಿ ಪರಿವರ್ತನೆಗೆ ಸಮೀಕ್ಷೆ ಪ್ರಗತಿಯಲ್ಲಿದೆ. ಕಾರ್ಯಸಾಧ್ಯತಾ ವರದಿ 2026ರ ಮೇ ಅಂತ್ಯದೊಳಗೆ ಕೈಸೇರಲಿದೆ ಎಂದು ತಿಳಿಸಿದ್ದಾರೆ.
ತುಮಕೂರು-ರಾಯದುರ್ಗ ಹೊಸ ರೈಲ್ವೆ ಮಾರ್ಗ ಯೋಜನೆಯಡಿ ತುಮಕೂರು-ಊರುಕೆರೆ ಮತ್ತು ದೊಡ್ಡಹಳ್ಳಿ-ಪಾವಗಡ ನಡುವೆ 22 ಕಿ.ಮೀ. ಹಳಿ ಜೋಡಣೆ ಕಾಮಗಾರಿ ಈ ವಷ ಮುಗಿಯಲಿದೆ.
ತುಮಕೂರು-ಊರುಕೆರೆ, ಪಾವಗಡ-ದೊಡ್ಡಹಳ್ಳಿ ಮಧ್ಯೆ ಶೀಘ್ರವೇ ರೈಲು ಸಂಚಾರ ಆರಂಭವಾಗಲಿದೆ. ಮಡಕಶಿರಾ-ಪಾವಗಡ ನಡುವಿನ ಕಾಮಗಾರಿ 2026ರ ಡಿಸೆಂಬರ್, ಮಧುಗಿರಿ-ಪಾವಗಡ ಹಳಿ ಜೋಡಣೆ 2028ರ ೆಬ್ರವರಿಗೆ ಪೂರ್ಣಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ವಿವರಿಸಿದ್ದಾರೆ.