ಪಶ್ಚಮ ಘಟ್ಟದಲ್ಲಿರುವ ಚಾರಣ ಸ್ಥಳ. 
ಬೆಂಗಳೂರು

ಅರಣ್ಯ ಇಲಾಖೆಯಿಂದ ಎಸ್​ಒಪಿ ಜಾರಿ

ಪ್ರಮುಖ ಮುಖ್ಯಾಂಶಗಳು

  • ಅನಾಹುತ ಸಂಭವಿಸಿದ್ದ ಬೆನ್ನಲೇ ಕ್ರಮ
  • ಚಾರಣಿಗರ, ಪರಿಸರ ಸಂರಕ್ಷಣೆಗೆ ಒತ್ತು
ಬೆಂಗಳೂರು: ರಾಜ್ಯದ ವಿವಿಧ ಚಾರಣ ಸ್ಥಳಗಳಲ್ಲಿ ಅನಾಹುತಗಳು ಸಂಭವಿಸಿದ್ದ ಬೆನ್ನಲೇ ಚಾರಣಿಗರ ಸುರಕ್ಷತೆ ಮತ್ತು ಪರಿಸರ ರಕ್ಷಿಸುವ ಉದ್ದೇಶದಿಂದ, ಕರ್ನಾಟಕ ಅರಣ್ಯ ಇಲಾಖೆಯು ಚಾರಣ ಚಟುವಟಿಕೆಗಳನ್ನು ನಿಯಂತ್ರಿಸಲು ಸಮಗ್ರ ಮಾದರಿ ಕಾರ್ಯಾಚರಣೆ ವಿಧಾನ (ಎಸ್​ಒಪಿ) ಜಾರಿಗೊಳಿಸಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಶ್ಚಿಮ ಟ್ಟಗಳು, ಅರಣ್ಯ ಪ್ರದೇಶ ಸೇರಿ ಇತರೆ ಜಾಗಗಳಲ್ಲಿ 39 ಚಾರಣ ಸ್ಥಳಗಳನ್ನು ಗುರುತಿಸಿದೆ. ಜನವರಿಯಿಂದ ಈಚೆಗೆ ಕೊಡಗಿನ ತಡಿಯಾಂಡ ಮೋಳ್​, ಚಿಕ್ಕಮಗಳೂರಿನ ಮಾಣಿಕ್ಯಧಾರ ಜಲಪಾತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆ ಬೆಟ್ಟದಲ್ಲಿ ಚಾರಣಿಕ್ಕೆ ಹೋದವರು ಕಾಣೆಯಾಗಿದ್ದ, ಮೃತಪಟ್ಟಿದ್ದ ಪ್ರಕರಣಗಳು ಸಂಭವಿಸಿದ್ದವು. ಇದರಿಂದಾಗಿ ಚಾರಣಿಗರ ಸುರಕ್ಷತೆಗೆ ಕ್ರಮವಹಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
ಅನಾಹುತಕ್ಕೆ ಕಾರಣ, ಪರಿಸರ ರಕ್ಷಣೆಗೆ ಏನು ಕ್ರಮವಹಿಸಬೇಕು ಎಂಬುದನ್ನು ಎತ್ತಿ ಹಿಡಿದಿರುವ ಇಲಾಖೆಯೂ ನೂತನ ಎಸ್​ಒಪಿ ಜಾರಿಗೆ ತಂದು ಮಾರ್ಗಸೂಚಿಗಳನ್ನು ಹೊರಡಿಸಿದೆ. ಹುಲಿ, ಚಿರತೆ, ಆನೆ, ಕರಡಿ ಸೇರಿ ಇತರೆ ವನ್ಯ ಜೀವಿಧಾಮ ಪ್ರದೇಶದಲ್ಲಿ ಸಕ್ರಿಯವಾಗಿರುವ ಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಇಲಾಖೆಯು ಉದ್ದೇಶಿಸಿದೆ.
ರಕ್ಷಣಾ ಕಾರ್ಯಾಚರಣೆಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡಗಳು, ಸ್ಥಳಿಯ ಸಮುದಾಯಗಳು ಮತ್ತು ಡ್ರೋನ್​ ಕಣ್ಗಾವಲು ಚಾರಣ ಸ್ಥಳಗಳಲ್ಲಿ ನಿರಂತರವಾಗಿ ನಡೆಯಲಿದೆ.
ಪ್ರವೇಶ ನಿಯಮಗಳನ್ನು ಉಲ್ಲಂಘಿಸುವ, ಗುರುತಿಸಿರುವ ಹಾದಿಗಳನ್ನು ಬಿಟ್ಟು ಬೇರೆ ಮಾರ್ಗಗಳಲ್ಲಿ ಸಾಗುವ ಚಾರಣಿಗರ, ಮಾರ್ಗದರ್ಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಕಪು$್ಪಪಟ್ಟಿಗೆ ಸೇರಿಸಲು ಕ್ರಮವಹಿಸಲಿದೆ.
ಸಂದರ್ಶಕರ ಭೇಟಿ ಮಿತಿ
ಚಾರಣ ರ್ಮಾಗಳನ್ನು ತೆರೆಯುವ ಮೊದಲು ಮಾರ್ಗ ರ್ನಿದಿಷ್ಟ ಸುರಕ್ಷತಾ ಮೌಲ್ಯಮಾಪನ ತಡೆಗಟ್ಟಲು ಮತ್ತು ಅರಣ್ಯ ಸಿಬ್ಬಂದಿ ಮೇಲ್ವಿಚಾರಣೆಯನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಭೇಟಿ ನೀಡುವ ಒಂದು ದಿನಕ್ಕೆ 150 ಸಂದರ್ಶಕರ ಸಂಖ್ಯೆಗೆ ಮಿತಿಗೊಳಿಸಲಾಗಿದೆ. ತರಬೇತಿ ಪಡೆದ ಸ್ಥಳಿಯ ಯುವಕರು ಚಾರಣ ಗುಂಪುಗಳೊಂದಿಗೆ ಹೋಗುತ್ತಾರೆ. ಸಂಚರಣೆ, ಮುಖ್ಯಸ್ಥರ ಸಂಖ್ಯೆ, ಜೀವ ವೈವಿಧ್ಯ ಜಾಗೃತಿ ಮತ್ತು ತುರ್ತು ಪ್ರತಿಕ್ರಿಯೆಗೆ ಸಹಾಯ ಮಾಡಲಿದ್ದಾರೆ. ಮೊಬೈಲ್​ ಸಂಪರ್ಕ ಹೊಂದಿರದ ದೂರದ ಪ್ರದೇಶಗಳಿಗೆ ಹೋಗದಂತೆ ಸೂಚಿಸಿದೆ. ಇದರ ಜತೆಗೆ ಮೊಬೈಲ್​ ಟ್ರಾ$್ಯಕಿಂಗ್​ ವ್ಯವಸ್ಥೆ ಹಾಗೂ ಜಿಪಿಎಸ್​ ಆಧಾರಿತ ಸಾಧನಗಳ ಅಳವಡಿಕೆಗೂ ಮುಂದಾಗಿದೆ. ಈ ಮೂಲಕ ಎಸ್​ಒಪಿ ಸಕ್ರಿಯಗೊಳಿಸಲು ಕ್ರಮವಹಿಸಿದೆ.
ಮೂಲಸೌಕರ್ಯಕ್ಕೆ ಆದ್ಯತೆ
ಚಾರಣ ಪ್ರದೇಶಕ್ಕೆ ಹೋಗಲು ಗುರುತಿಸಲಾದ ಹಾದಿಗಳು, ದಿಕ್ಕಿನ ಸೈನ್​ ಬೋರ್ಡ್​ಗಳು, ವಿಶ್ರಾಂತಿ ಪ್ರದೇಶಗಳು ಮತ್ತು ಬೇಸ್​ ಕ್ಯಾಂಪ್​ಗಳಲ್ಲಿ ಕುಡಿಯುವ ನೀರು, ಶೌಚಗೃಹ ಸೇರಿ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲು ಕ್ರಮ ವಹಿಸಿದ್ದು, ಎರಡು ತಿಂಗಳಲ್ಲಿ ಸೌಲಭ್ಯದ ವ್ಯವಸ್ಥೆ ಮಾಡಿ ಚಾರಣಿಕರ ಭೇಟಿಗೆ ಅವಕಾಶ ಕಲ್ಪಿಸಲು ಇಲಾಖೆಯು ಮುಂದಾಗಿದೆ.
ಬೆಳಕು ಚೆಲ್ಲಿದ್ದ "ವಿಜಯವಾಣಿ'
ಚಾರಣ ಸ್ಥಳಗಳಲ್ಲಿ ಕಾಣೆ ಆಗಿರುವುದು, ಸ್ಥಳಗಳಲ್ಲಿ ಸುರಕ್ಷತೆ ಇಲ್ಲದೆ ಇರುವ ಕುರಿತು ನಂ 1 ದಿನಪತ್ರಿಕೆ ವಿಜಯವಾಣಿಯಲ್ಲಿ "ಸುರಕ್ಷಿತ ಚಾರಣಕ್ಕಿಲ್ಲ ನಿಯಮಗಳು' ಶೀರ್ಷಿಕೆಯಡಿ ಅ.24ರಂದು ವರದಿ ಮೂಲಕ ಬೆಳಕು ಚೆಲ್ಲಲಾಗಿತ್ತು. ಇದರ ಬೆನ್ನಲೇ ಅರಣ್ಯ ಇಲಾಖೆಯು ಎಸ್​ಒಪಿ ಜಾರಿ ಮಾಡಿ ಚಾರಣಿಗರ ರಕ್ಷಣೆ, ಪರಿಸರ, ವಜ್ಯಜಿವಿ ಸಂರಕ್ಷಣೆಗೆ ಕಾಳಜಿ ತೋರಿದೆ.