ದೇನಹಳ್ಳಿ ಸಮೀಪದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಂಪಲ್ ಎನರ್ಜಿ ಕಂಪನಿಯು ಹೊರತಂದಿರುವ "ಸಿಂಪಲ್ ವೇವ್' ಮಾದರಿಯ ಎಲೆಕ್ಟ್ರಿಕಲ್ (ಇವಿ) ದ್ವಿಚಕ್ರ ವಾಹನ ಬಿಡುಗಡೆಗೊಂಡಿತು.
ಬೆಂಗಳೂರು: ಸಿಂಪಲ್ ಎನರ್ಜಿ ಕಂಪನಿಯು ಹೊರತಂದಿರುವ "ಸಿಂಪಲ್ ವೇವ್' ಮಾದರಿಯ ಎಲೆಕ್ಟ್ರಿಕಲ್ (ಇವಿ) ದ್ವಿಚಕ್ರ ವಾಹನ ಬಿಡುಗಡೆಗೊಂಡಿತು.
ದೇವನಹಳ್ಳಿ ಸಮೀಪ ಖಾಸಗಿ ಹೋಟೆಲ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ರಾಜಕುಮಾರ್, ಸಹ ಸಂಸ್ಥಾಪಕ ಶ್ರೇಷ್ಠ ಮಿಶ್ರಾ, ಸಿಎಫ್ಒ ಅಂಕಿತ್ ಗುಪ್ತಾ, ಉದ್ಯಮಿ ಡಾ.ಆರೋಕ್ಯಸ್ವಾಮಿ ವೇಲುಮಣಿ ದ್ವಿಚಕ್ರ ವಾಹನ ಬಿಡುಗಡೆಗೊಳಿಸಿದರು.
ಸಿಂಪಲ್ ವೇವ್ ಮಾದರಿಯ ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ತಯಾರಕರು ಸೆಪ್ಟೆಂಬರ್ ಕೊನೆಯ ವಾರದಿಂದ ವಿತರಣೆ ಪ್ರಾರಂಭಿಸಲಿದ್ದು, ಡೀಲರ್ಶಿಪ್ಗಳ ಬಳಿ ಬುಕ್ಕಿಂಗ್ ಮಾಡಿಕೊಳ್ಳಬಹುದು.
ಕುಟುಂಬ ಕೇಂದ್ರಿತ ಸ್ಕೂಟರ್ ಆಗಿ ತಯಾರಾಗಿರುವ ಎಲೆಕ್ಟ್ರಿಕ್ ಸ್ಕೂಟರ್ ಇದೇ ತಿಂಗಳ ಅಂತ್ಯಕ್ಕೆ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಮಳಿಗೆಗಳಲ್ಲಿ 1.10 ಲಕ್ಷ ರೂ.ಗೆ ಲಭ್ಯವಾಗಲಿದೆ.
ವಿವಿಧ ಮಾದರಿಗಳಲ್ಲಿ ರೂಪುಗೊಂಡಿರುವ ಈ ದ್ವಿಚಕ್ರ ವಾಹನದಲ್ಲಿ 5 ಕೆಡಬ್ಲುಎಚ್ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 240 ಕಿಮೀ ಕ್ರಮಿಸಬಹುದು. ಇನ್ನುಳಿದ ಕಡಿಮೆ 2.7 ಕೆಡಬ್ಲುಎಚ್ ಸಾಮರ್ಥ್ಯದ ಬ್ಯಾಟರಿ 171 ಕಿ.ಮೀ ಹಾಗೂ 2.2 ಕೆಡಬ್ಲುಎಚ್ ಸಾಮರ್ಥ್ಯದ ಬ್ಯಾಟರಿ 132 ಕಿ.ಮೀ ವರೆಗೆ ಮೈಲೈಜ್ ನೀಡುತ್ತದೆ. ಕಿಮೀ ವೇಗ ಹೆಚ್ಚಿಸಿಕೊಳ್ಳಲು ಇಕೋ, ಸ್ಪೋರ್ಟ್ ಆಯ್ಕೆಯ ಅವಕಾಶಗಳನ್ನು ಕಲ್ಪಿಸಿದ್ದು, ಜತೆಗೆ ಸುರಕ್ಷತೆಗೆ ಒತ್ತು ನೀಡಿದೆ.
ನಂಬಿಕೆ ಉಳಿಸಿಕೊಳ್ಳುವ ಮಾದರಿ
ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಸುಹಾಸ್ ರಾಜ್ಕುಮಾರ್ ಮಾತನಾಡಿ, ಸಿಂಪಲ್ ವೇವ್ ಮಾದರಿ ಬಿಡುಗಡೆ ಕಾರ್ಯವೂ ಮೈಲ್ಲುಗಲ್ಲಾಗಿದೆ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವ ಮಾದರಿಯಲ್ಲಿ ವಿನ್ಯಾಸಗೊಳಿಸಿ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು.
ಸಿಂಪಲ್ ಎನರ್ಜಿ ಸಂಸ್ಥೆಯು ಕುಟುಂಬಕ್ಕೆ ತಕ್ಕಂತೆ ಸಿಂಪಲ್ ವೇವ್ ಮಾದರಿಯ ದ್ವಿಚಕ್ರ ವಾಹನ ತಯಾರು ಮಾಡಿದ್ದು, ಸೆಪ್ಟೆಂಬರ್ ಅಂತ್ಯಕ್ಕೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಘೋಷಿಸಿದರು.
ಆಟೋಮೋಟಿವ್ ಕಂಪನಿಯಾದ ಸಿಂಪಲ್ ಎನರ್ಜಿ, ತನ್ನ ಮೊದಲ ಫ್ಯಾಮಿಲಿ ಸ್ಕೂಟರ್ ಸಿಂಪಲ್ ವೇವ್ ಅನ್ನು ಬಿಡುಗಡೆ ಮಾಡಿದೆ. ಕುಟುಂಬ ಪ್ರತಿದಿನ ಸ್ಕೂಟರ್ಗಳನ್ನು ಬಳಸುವ ರೀತಿಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಂಡಿರುವ ವಾಹನವಾಗಿದೆ. ಪ್ರಾಯೋಗಿಕತೆ, ತಂತ್ರಜ್ಞಾನ ಮತ್ತು ಆರಾಮವನ್ನು ಒಟ್ಟುಗೂಡಿಸುವ ಅನುಭವ ನೀಡಲಿದೆ, ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಖರೀದಿ ಮಾಡುವ ಮೂಲಕ ಬೆಂಬಲ ನೀಡಬೇಕು ಎಂದು ತಿಳಿಸಿದರು.