ಎಸ್.ಕೆ. ಎಫ್. ಫೌಂಡೇಶನ್ ಸಂಸ್ಥಾಪಕ ಕಲ್ಕೆರೆ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ನಡೆದ ಡ್ರಗ್ಸ್ ಮುಕ್ತ ರಾಮಮೂರ್ತಿನಗರ ಮ್ಯಾರಥಾನ್‌ನಲ್ಲಿ ನಟಿ ಸಪ್ತಮಿಗೌಡ, ಪರ್ವತ ರೋಹಣಿ ಭಾಗ್ಯಶ್ರೀ ಸಾವಂತ್ , ಡಿಸಿಪಿ ಹರಿಬಾಬು, ಇನ್ಸ್ ಪೆಕ್ಟರ್ ಸತೀಶ, ಕೆಪಿಎಲ್ ಲಕ್ಷ್ಮಣ್, ಪೃಥ್ವಿ ಕೃಷ್ಣಮೂರ್ತಿ, ಸಂಪತ್ ಮತ್ತಿತರರು ಭಾಗಿ.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಮಾದಕ ವ್ಯಸನದಿಂದ ಯುವಕರನ್ನು ಕಾಪಾಡುವ ಕಾರ್ಯವಾಗಬೇಕು ಎಂದು ನಟಿ ಸಪ್ತಮಿಗೌಡ ಹೇಳಿದರು.
ಕೆ.ಆರ್.ಪುರ ಸಮೀಪದ ಎನ್.ಆರ್.ಐ ಬಡಾವಣೆಯಲ್ಲಿ ಎಸ್.ಕೆ.ಎಫ್. ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ರಾಮಮೂರ್ತಿನಗರ ಮ್ಯಾರಥಾನ್ ಗೆ ಚಾಲನೆ ನೀಡಿ ಮಾತನಾಡಿದರು.
ಹದಿನೆಂಟು ವಯಸ್ಸಿನ ಒಳಗಿನವರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಇದನ್ನು ತಳಮಟ್ಟದಿಂದ ತೊಡೆದುಹಾಕಲು ಜಾಗೃತಿಯ ಅವಶ್ಯಕತೆಯಿದೆ. ಯುವಕರನ್ನು ಮಾದಕ ವ್ಯಸನದಿಂದ ಕಾಪಾಡುವ ಉದ್ದೇಶದಿಂದ ಎಸ್.ಕೆ.ಎಫ್ ಫೌಂಡೇಶನ್ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಎಸ್.ಕೆ.ಎಫ್ ಫೌಂಡೇಶನ್ ಅಧ್ಯಕ್ಷೆ ಶಾಂತಾಕೃಷ್ಣಮೂರ್ತಿ ಮಾತನಾಡಿ, ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ನಮ್ಮ ಗುರಿಯಾಗಿದ್ದು, ನಮ್ಮ ದೇಶದ ಯುವ ಶಕ್ತಿಯನ್ನು ಮಾದಕ ವಸ್ತುಗಳಿಂದ ರಕ್ಷಣೆ ಮಾಡಲು ಈ ಅಭಿಯಾನ ಕೈಗೊಳ್ಳಲಾಗಿದೆ.ಮುಂಬರುವ ದಿನಗಳಲ್ಲಿ ಮತ್ತಷ್ಟು ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೇವೆ ಎಂದರು.
ಆರೋಹಣ ಫೌಂಡೇಶನ್ ಹಾಗೂ ಬೆಂಗಳೂರು ನಗರ ಪೊಲೀಸ್ ಇಲಾಖೆ ಮ್ಯಾರಥಾನ್‌ಗೆ ಸಹಕಾರ ನೀಡಿತ್ತು. ಈ ವೇಳೆ ಎಸ್.ಕೆ. ಎಫ್. ಫೌಂಡೇಶನ್ ಸಂಸ್ಥಾಪಕ ಕಲ್ಕೆರೆ ಕೃಷ್ಣಮೂರ್ತಿ, ಪರ್ವತ ರೋಹಣಿ ಭಾಗ್ಯಶ್ರೀ ಸಾವಂತ್ , ಡಿಸಿಪಿ ಹರಿಬಾಬು, ಇನ್ಸ್ ಪೆಕ್ಟರ್ ಸತೀಶ, ಕೆಪಿಎಲ್ ಲಕ್ಷ್ಮಣ್, ಪೃಥ್ವಿ ಕೃಷ್ಣಮೂರ್ತಿ, ಸಂಪತ್ ಇದ್ದರು.