- 500 ಲಿಫ್ಟ್ ಮತ್ತು ಸಾವಿರ ಎಸ್ಕಲೇಟರ್ಗಳ ಅಳವಡಿಕೆ ಯೋಜನೆ
- ಬಿಎಂಆರ್ಸಿಎಲ್ ಅಧಿಕಾರಿ ಸುಮಿತ್ ಭಟ್ನಾಗರ್ ಮಾಹಿತಿ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋ ಜಾಲವು ನಗರದಲ್ಲಿ ವೇಗವಾಗಿ ವಿಸ್ತರಣೆಯಾಗುತ್ತಿದ್ದು, ಪ್ರಯಾಣಿಕರ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಹೆಚ್ಚಿನ ಒತ್ತು ನೀಡುತ್ತಿದೆ. ನಿಮಾರ್ಣ ಹಂತದಲ್ಲಿರುವ 78 ಕಿ.ಮೀ ಮಾರ್ಗಗಳಲ್ಲಿ ಬರೋಬ್ಬರಿ 500 ಲ್ಟ್ಿಗಳು ಮತ್ತು ಸಾವಿರ ಎಸ್ಕಲೇಟರ್ಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿ ಸುಮಿತ್ ಭಟ್ನಾಗರ್ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ನಡೆದ 2ನೇ ಸ್ಮಾರ್ಟ್ ಲಿಫ್ಟ್ ಮತ್ತು ಮೊಬಿಲಿಟಿ ವರ್ಲ್ಡ್ 2026' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ 83 ನಿಲ್ದಾಣಗಳೊಂದಿಗೆ 96 ಕಿ.ಮೀ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೆಟ್ರೋ ಜಾಲವು, ಮುಂದಿನ ಎರಡು ವರ್ಷಗಳಲ್ಲಿ 127 ನಿಲ್ದಾಣಗಳೊಂದಿಗೆ ಸುಮಾರು 175 ಕಿ.ಮೀ.ಗೆ ವಿಸ್ತರಣೆಯಾಗಲಿದೆ ಎಂದರು.
ದಿನನಿತ್ಯದ ಪ್ರಯಾಣಿಕರ ಸಂಖ್ಯೆ 10 ಲಕ್ಷವನ್ನು ತಲುಪುತ್ತಿರುವುದರಿಂದ, ನಿಲ್ದಾಣದೊಳಗೆ ಪ್ರಯಾಣಿಕರ ಚಲನೆಯನ್ನು ರೈಲು ಕಾರ್ಯಾಚರಣೆಯಷ್ಟೇ ಸಮರ್ಥವಾಗಿ ನಿರ್ವಹಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಅವರು ವಿವರಿಸಿದರು.
ವಿಗೋರ್ ಕಮ್ಯುನಿಕೇಶನ್ಸ್ ಆ್ಯಂಡ್ ಎಕ್ಸಿಬಿಷನ್ನ ಸಹ-ಸಂಸ್ಥಾಪಕಿ ಅನಿತಾ ರಘುನಾಥ್, ಕರ್ನಾಟಕ ರೇರಾ ಕಾರ್ಯದರ್ಶಿ ಡಾ.ಎಚ್.ಆರ್.ಶಿವಕುಮಾರ್ ಮತ್ತಿತರರು ಇದ್ದರು.