ರೈಲು  foledr
ಬೆಂಗಳೂರು

ವಿವಿಧ ರೈಲುಗಳ ಸಂಖ್ಯೆ ಪರಿಷ್ಕರಣೆ

ದಕ್ಷಿಣ ರೈಲ್ವೆ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ 6 ರೈಲು ಸಂಖ್ಯೆಯನ್ನು ಪರಿಸ್ಕರಿಸಿದ್ದು, 2027ರ ಜನವರಿ 1ರಿಂದ ಹೊಸ ಸಂಖ್ಯೆ ರೈಲುಗಳು ಸಂಚರಿಸಲಿವೆ.

ಬೆಂಗಳೂರು: ದಕ್ಷಿಣ ರೈಲ್ವೆ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ 6 ರೈಲು ಸಂಖ್ಯೆಯನ್ನು ಪರಿಸ್ಕರಿಸಿದ್ದು, 2027ರ ಜನವರಿ 1ರಿಂದ ಹೊಸ ಸಂಖ್ಯೆ ರೈಲುಗಳು ಸಂಚರಿಸಲಿವೆ.

ಅಶೋಕಪುರಂ-ಕೆಎಸ್‌ಆರ್ ಬೆಂಗಳೂರು ಮಾಲ್ಗುಡಿ ಡೈಲಿ ಎಕ್ಸ್‌ಪ್ರೆಸ್‌ನ ಪ್ರಸ್ತುತ ಸಂಖ್ಯೆ 20623 ಅನ್ನು 16123ಕ್ಕೆ, ಬೆಂಗಳೂರು-ಅಶೋಕಪುರಂ ಮಾಲ್ಗುಡಿ ಡೈಲಿ ಎಕ್ಸ್‌ಪ್ರೆಸ್ ಪ್ರಸ್ತುತ ಸಂಖ್ಯೆ 20624 ಅನ್ನು 16124ಕ್ಕೆ, ತಿರುಪತಿ, ಎಸ್‌ಎಂವಿಟಿ ಬೆಂಗಳೂರು-ತ್ರಿಸಾಪ್ತಾಹಿಕ ಎಕ್ಸ್‌ಪ್ರೆಸ್ ಪ್ರಸ್ತುತ ಸಂಖ್ಯೆ 22617 ಅನ್ನು 16627ಕ್ಕೆ ಬದಲಾಯಿಸಲಾಗಿದೆ.

ಎಸ್‌ಎಂವಿಟಿ ಬೆಂಗಳೂರು-ತಿರುಪತಿ ತ್ರಿ ಸಾಪ್ತಾಹಿತ ಎಕ್ಸ್‌ಪ್ರೆಸ್ ರೈಲು ಪ್ರಸ್ತುತ ಸಂಖ್ಯೆ 22618 ಅನ್ನು 16628ಕ್ಕೆ, ಲೋಕಮಾನ್ಯ ತಿಲಕ್ ಟರ್ಮಿನಸ್- ತಿರುವನಂತಪುರಂ ನಾರ್ತ್ ದ್ವಿಸಾಪ್ತಾಹಿಕ ಗರೀಬ್ ರಥ್ ಎಕ್ಸ್‌ಪ್ರೆಸ್ ಪ್ರಸ್ತುತ ಸಂಖ್ಯೆ 12201 ಅನ್ನು 16371ಕ್ಕೆ, ತಿರುವನಂತಪುರ ನಾರ್ತ್-ಲೋಕಮಾನ್ಯ ತಿಲಕ್ ಟರ್ಮಿನಸ್ ದ್ವಿಸಾಪ್ತಾಹಿಕ ಗರೀಬ್ ರಥ್ ಎಕ್ಸ್‌ಪ್ರೆಸ್ ಪ್ರಸ್ತುತ 12202 ಅನ್ನು 16372ಕ್ಕೆ ಪರಿಷ್ಕರಿಸಿದ್ದು, ಜ.1ರಿಂದ ನಿಗದಿತ ಮಾರ್ಗಗಳಲ್ಲಿ ಸಂಚರಿಸಲಿವೆ.