ಬೆಂಗಳೂರಿನಲ್ಲಿ ಬಾಡಿಗೆ ಮನೆ ಸಿಗದಿದ್ದಕ್ಕೆ ಕೆಲಸವನ್ನೇ ಬಿಟ್ಟ: 3 ತಿಂಗಳ ನೋವು ಬಿಚ್ಚಿಟ್ಟ ಟೆಕ್ಕಿ! Rent House 
ಬೆಂಗಳೂರು

ಬೆಂಗಳೂರಿನಲ್ಲಿ ಬಾಡಿಗೆ ಮನೆ ಸಿಗದಿದ್ದಕ್ಕೆ ಕೆಲಸವನ್ನೇ ಬಿಟ್ಟ: 3 ತಿಂಗಳ ನೋವು ಬಿಚ್ಚಿಟ್ಟ ಟೆಕ್ಕಿ! Bengaluru House Hunt

ಪ್ರಮುಖ ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಹುಡುಕಾಟ ಭಾರಿ ಕಷ್ಟದ ಕೆಲಸ ಎಂದ ನೆಟ್ಟಿಗ
  • 25 ಸಾವಿರ ರೂ.ಗೂ ಸಿಗದ ಮನೆ ಕೆಲಸವನ್ನೇ ಬಿಟ್ಟೆ ಎಂದು ರೆಡ್ಡಿಟ್​ನಲ್ಲೇ ಪೋಸ್ಟ್
  • ಎಂಜಿ ರಸ್ತೆ ಸುತ್ತಮುತ್ತ ಬಾಡಿಗೆ ಮನೆ ಹುಡುಕಾಟ ಕಷ್ಟ ಎಂದ ನೆಟ್ಟಿಗ
ಬೆಂಗಳೂರು: ಸಿಲಿಕಾನ್​ ಸಿಟಿಗೆ ನೆರೆ ರಾಜ್ಯಗಳಿಂದ ಜನರು ಉದ್ಯೋಗ ಅರಸಿ ಬಂದ ನಂತರ ಇಲ್ಲಿನ ಬಾಡಿಗೆ ಮನೆಗಳು (Rent House) ದುಬಾರಿಯಾಗಿ ಬಿಟ್ಟಿವೆ. ಸಣ್ಣ ಹಾಲ್, ಕಿಚನ್​ಗೂ ಆರು ಸಾವಿರ ಕೇಳುವ ಪರಿಸ್ಥಿತಿ ಎದುರಾಗಿದೆ. ಇಷ್ಟೇ ಅಲ್ಲದೇ ಮನೆ ಹುಡುಕಿಕೊಡುವ ಬ್ರೋಕರ್​ಗಳಿಗೆ ದುಬಾರಿ ಹಣ ನೀಡುವುದು ಇಕ್ಕಟ್ಟಿಗೆ ಸಿಲುಕುವಂತೆ ಮಾಡುತ್ತದೆ. ಸದ್ಯ ಇದೇ ನೋವಲ್ಲಿ ರೆಡ್ಡಿಟ್ ಬಳಕೆದಾರರೊಬ್ಬರು ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ. ಹಲವರು ಇದಕ್ಕೆ ಹೌದೆಂದು ಕಾಮೆಂಟ್ ಮಾಡಿದ್ದಾರೆ.
ಬೆಂಗಳೂರು ಹೌಸ್ ರೆಂಟಲ್​ ಎಂಬ ಖಾತೆಯಿಂದ ರೆಡ್ಡಿಟ್​ನಲ್ಲಿ ಪೋಸ್ಟ್​ ಹಂಚಿಕೊಳ್ಳಲಾಗಿದೆ. ಅವರು ಎಂಜಿ ರಸ್ತೆ ಸುತ್ತಮುತ್ತಲೂ ಮನೆ ಹುಡುಕಾಟದ ಬಗ್ಗೆ ಬರೆದುಕೊಂಡಿರುವುದು ಹೀಗೆ, ಮೂರು ವರ್ಷದ ನಂತರ ಎಲೆಕ್ಟ್ರಾನಿಕ್​ ಸಿಟಿ ಬಳಿ ಕೆಲಸ ಮಾಡುತ್ತಿದ್ದ ಕಂಪನಿಯನ್ನು ತೊರೆದು, ಎಂಜಿ ರಸ್ತೆಯ ಬಳಿ ಒಂದು ಕಂಪನಿಗೆ ಸೇರಿದೆ. ಜನವರಿ 1 ನನ್ನ ಜಾಯ್ನಿಂಗ್ ದಿನ. ಜನವರಿ ಪೂರ್ತಿ ಎಲೆಕ್ಟ್ರಾನಿಕ್​ ಸಿಟಿಯಿಂದ ಓಡಾಡಿ, ಫೆಬ್ರವರಿ ಒಳಗೆ ಒಂದು ಫ್ಲ್ಯಾಟ್ ಹುಡುಕಬೇಕೆಂದುಕೊಂಡೆ.
ಮುಂದುವರೆದು, ಒಂದು ತಿಂಗಳು ಆರಾಮಾದಯಕವಾಗಿತ್ತು. ಬೆಂಗಳೂರಿನ ತಂಪು ತಾಪಮಾನದಲ್ಲಿ ಮನೆಗಾಗಿ ಹುಡುಕಾಟ ಕೂಲ್ ಆಗಿತ್ತು. ನಾನು ಹೊಸ ಆಫೀಸಿಗೆ ನಿತ್ಯ 52 ಕಿ.ಮೀ ಓಡಾಡುತ್ತಿದ್ದೆ. ವಾರಾಂತ್ಯದಲ್ಲಿ ಇಂದಿರಾನಗರ, ದೊಮ್ಮಲೂರು, ವಿಕ್ಟೋರಿಯಾ ಲೇಔಟ್, ಫ್ರೇಜರ್ ಟೌನ್, ರಿಚ್ಮಂಡ್ ಟೌನ್​ ಸುತ್ತಾಡಿದೆ. ಟು ಲೆಟ್​ ಬೋರ್ಡ್​ ಕಂಡ ಮನೆ ಮಾಲೀಕರಿಗೆ (Bengaluru House Hunt struggle) ಕರೆ ಮಾಡುವುದು, ಫೇಸ್​ಬುಕ್​, ಇನ್​ಸ್ಟಾಗ್ರಾಮ್, ರೆಡ್ಡಿಟ್​ ಹೀಗೆ ಹಲವು ಕಡೆ ಹುಡುಕಾಡಿದೆ. 25 ಸಾವಿರ ರೂಪಾಯಿಗೆ ಹಾಲ್, ಕಿಚನ್​, ಇರುವ ಮನೆ ಸಿಗಲೇ ಇಲ್ಲ. ಫೆಬ್ರವರಿ 1ನೇ ತಾರೀಕಾದರೂ ನನ್ನ ಪರಿಸ್ಥಿತಿ ಬದಲಾಗಲಿಲ್ಲ. ಕೊನೆಗೆ ವಿಧಿಯಿಲ್ಲದೆ 8000 ಕೊಟ್ಟು ಹೌಸಿಂಗ್ ಪ್ರೀಮಿಯಂ ಮತ್ತು ನೋಬ್ರೋಕರ್ ಮನಿ ಬ್ಯಾಕ್ ಪ್ಲಾನ್ ಖರೀದಿ ಮಾಡಿಕೊಂಡೆ.

ಕೆಲಸವನ್ನೇ ಬಿಟ್ಟೆ

ಬ್ರೋಕರ್​ಗಳು ಪ್ರತಿ ಮನೆ ನೋಡಲು ಕರೆದುಕೊಂಡಾಗಲು, ಮನೆ ಬೇಕಿದ್ರೆ ತಗೊಳಿ ಇಲ್ಲ ಬೇರೆಯವರಿಗೆ ಕೊಡುತ್ತೇವೆ ಎನ್ನುತ್ತಿದ್ದರು. ಕೆಲವರು ಮನೆ ತೋರಿಸಲು ಹಣ ಪಡೆದರು. ಕೆಲವು ಸಣ್ಣ ಮನೆಯಾದರೆ, ಇನ್ನೂ ಕೆಲವು ಮನೆಗಳ ವಾತಾವರಣವೇ ಸರಿಯಿರಲಿಲ್ಲ. ಫೆಬ್ರವರಿ ಕಳೆದು ಮಾರ್ಚ್​ ಶುರುವಾದರೂ ನನಗೆ ಮನೆ ಸಿಗಲಿಲ್ಲ. ಒಮ್ಮೆ ಒಬ್ಬ ಬ್ರೋಕರ್​ ದೊಮ್ಮಲೂರಿನಲ್ಲಿ 26 ಸಾವಿರದ ಮನೆಯನ್ನು ತೋರಿಸಿದ. ತುರ್ತಾಗಿ ಬೇಕಾಗಿದ್ದ ಕಾರಣ ನಾನದನ್ನು ಒಪ್ಪಿಕೊಂಡೆ. ಅಡ್ವಾನ್ಸ್ ಪಾವತಿ ಮಾಡ್ತೇನೆ ಎಂದಾಗ ರಾತ್ರಿ ಬೇರೆ ನಂಬರ್​ ನೀಡುತ್ತೇನೆ ಎಂದ. ಭಾನುವಾರ ಆತನಿಗೆ ಕರೆ ಮಾಡಲು ಯತ್ನಿಸಿದೆ. ಆದರೆ, ನನ್ನ ಕರೆ ನಿರಾಕರಿಸಿದನು. ನೇರ ಆ ಸ್ಥಳಕ್ಕೆ ಹೋದಾಗ ಈಗಾಗಲೇ ಫ್ಲ್ಯಾಟ್​ನ್ನು ಈಗಾಗಲೇ ಬೇರೆ ಯಾರೋ ಖರೀದಿಸಿದ್ದಾಗಿ ಅಲ್ಲಿನ ಜನರು ಹೇಳಿದರು. ನನ್ನ ತಾಳ್ಮೆಯ ಕಟ್ಟೆ ಹೊಡೆದಿತ್ತು. ನನ್ನ ಸಮಯ, ಹಣ ಎಲ್ಲವೂ ವ್ಯರ್ಥ ಎಂದು ನಾನು ಆ ಕೆಲಸವನ್ನು ಹಾಗೂ ಮನೆ ಹುಡುಕುವುದನ್ನೇ ಬಿಡಬೇಕೆಂದು ಯೋಚಿಸಿದೆ ಎಂದು ಅವರು ಬರೆದುಕೊಂಡಿದ್ದಾರೆ.
ನೆಟ್ಟಿಗರು ಏನಂತಾರೆ?
ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ, ಮಲ್ಲೇಶ್ವರಂ, ರಾಜಾಜಿನಗರ, ಶೇಷಾದ್ರಿಪುರಂ ಭಾಗದಲ್ಲಿ ಮನೆ ಹುಡುಕಿ ಎಂದು ಒಬ್ಬರು ಸಲಹೆ ನೀಡಿದ್ದಾರೆ. ಮತ್ತೊಬ್ಬರು ಜನವರಿಯಿಂದ ನಾನು ಸಹ ಮನೆಯನ್ನು ಹುಡುಕಾಡುತ್ತಿದ್ದೇನೆ. ಇಲ್ಲಿಯವರೆಗೂ ಸಿಕ್ಕಿಲ್ಲ ಎಂದು ಹೇಳಿಕೊಂಡಿದ್ದಾರೆ, (ಏಜನ್ಸೀಸ್).