Reels addiction Bengaluru 
ಬೆಂಗಳೂರು

'ಧೂಮಪಾನಕ್ಕಿಂತ ರೀಲ್ಸ್ ನೋಡೋದು​​ ಡೇಂಜರ್!'​; ಬೆಂಗಳೂರಿನಲ್ಲಿ ಕಂಡ ಮೊಬೈಲ್​ ಗೀಳಿನ ಬಗ್ಗೆ ಮಲ್ಟಿಬ್ಯಾಗ್ AI ಸಂಸ್ಥಾಪಕ ಹೇಳಿದ್ದಿಷ್ಟು..Reels Addiction

ಪ್ರಮುಖ ಮುಖ್ಯಾಂಶಗಳು

  • ರೀಲ್ಸ್​ಗಳು ಮೌನವಾಗಿ ಪ್ರಪಂಚವನ್ನು ಆವರಿಸಿಕೊಂಡು ನಿಯಂತ್ರಣದಲ್ಲಿಡುತ್ತಿವೆ.
  • ರೀಲ್ಸ್​, ಮೊಬೈಲ್​ ಗೀಳು ಮೆದುಳನ್ನು ನಿಧಾನವಾಗಿ ಕೊಲ್ಲುತ್ತಿದೆ ಎಂದ ಮಲ್ಟಿಬ್ಯಾಗ್ AI ನ ಸಂಸ್ಥಾಪಕ.
  • ಆಟೋ ಡ್ರೈವರ್​​, ಮಕ್ಕಳು ಹಾಗೂ ಹಿರಿಯರವರೆಗೂ ರೀಲ್ಸ್​ ನೋಡುವುದರಲ್ಲಿ ತಲ್ಲೀನರಾಗಿದ್ದಾರೆ ಎಂದ ಆದಿತ್ಯ ಆನಂದ್​.
Reels addiction Bengaluru: ಮೊಬೈಲ್​ ನಮ್ಮ ಜೀವನದ ಒಂದು ಭಾಗವಾಗುತ್ತಿದೆ. ಅದರಲ್ಲಿಯೂ ರೀಲ್ಸ್​ಗಳು  ಬದುಕನ್ನು ಆವರಿಸಿಕೊಂಡಿದೆ. ಊಟ ಮಾಡುವಾಗ, ನಡೆದಾಡುವಾಗ,  ಒಬ್ಬಂಟಿಯಾಗಿದ್ದಾಗ, ಗೆಳತಿಯರ ಜೊತೆ ಇದ್ದಾಗ ಹೀಗೆ ಕೊಂಚವು ಮೆದುಳಿಗೆ ರೆಸ್ಟ್ ಕೊಡದಂತೆ ಅಡಿಕ್ಟ್​ ಆಗಿಬಿಟ್ಟಿದ್ದೇವೆ. ಮನುಷ್ಯರೊಂದಿಗೆ ಹೊಂದಿಕೊಳ್ಳುವ ಪ್ರಮೇಯವೇ ಈಗಿಲ್ಲ. ಎಲ್ಲವೂ ಮೊಬೈಲ್​​ ಮಯ.  ಇನ್ನೂ ಈ ಬಗ್ಗೆ ಎಕ್ಸ್​ನಲ್ಲಿ  ಮಲ್ಟಿಬ್ಯಾಗ್ AI ನ ಸಂಸ್ಥಾಪಕ ಮತ್ತು ಸಿಇಒ ಆದಿತ್ಯ ಆನಂದ್ ಮಹತ್ವದ ವಿಚಾರವೊಂದು ಹಂಚಿಕೊಂಡಿದ್ದಾರೆ.
Multibagg AI ಸಂಸ್ಥೆಯ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ಆದಿತ್ಯ ಆನಂದ್ ಅವರು ಮುಂಜಾನೆ 6:40ಕ್ಕೆ ಬ್ಯಾಡ್ಮಿಂಟನ್​ ಕೋರ್ಟ್​​ಗೆ ತೆರಳುತ್ತಿದ್ದ ವೇಳೆ ಅವರ ಸುತ್ತಮುತ್ತಲಿನ ಜನರು ಹೇಗೆ  ಮೊಬೈಲ್​ ಬಳಕೆ ಮಾಡುತ್ತಾ, ರೀಲ್ಸ್​​ ನೋಡುತ್ತಾ ತಮ್ಮನ್ನು ತಾವು ರೂಪಿಸಿಕೊಳ್ಳುತ್ತಿದ್ದಾರೆ. ರೀಲ್ಸ್​ ಹೇಗೆ ಇಡೀ ಪ್ರಪಂಚವನ್ನು ಮೌನವಾಗಿ ಕಸಿದುಕೊಂಡಿದೆ ಎನ್ನುವ ಬಗ್ಗೆ ಎಕ್ಸ್​ನಲ್ಲಿ ಬರೆದುಕೊಂಡಿರುವುದು ವೈರಲ್ ಆಗಿದೆ. ಅವರ ಈ ಪೋಸ್ಟ್​ಗೆ ಸಾವಿರಾರು ನೆಟ್ಟಿಗರು ಹೌದೆಂದು ತಲೆಯಾಡಿಸಿದ್ದಾರೆ. 

ಆಟೋ ಡ್ರೈವರ್ ನಡೆ ಹೀಗಿತ್ತು.

'ನಾನು ನಿತ್ಯ ಬ್ಯಾಡ್ಮಿಂಟನ್​ ಆಡುತ್ತೇನೆ. ಹೀಗಾಗಿ  ಕೋಟ್​ಗೆ ತೆರಳಲು ಗಾಡಿ ಬಳಕೆ ಮಾಡುತ್ತೇನೆ. ಎಂದಿನಂತೆ ಬೈಕ್‌ನಲ್ಲಿ ತೆರಳುವ ಬದಲು ಇಂದು ಆಟೋ ಬುಕ್ ಮಾಡಿದ್ದೆ.  ಆಟೋ ನಿಗದಿತ ಸಮಯಕ್ಕಿಂತ  ಬೇಗನೆ ಬಂದಿತ್ತು. ನಾನು ಕೆಳಗೆ ಇಳಿದು ಬರುವಷ್ಟರಲ್ಲಿ ಆಟೋ ಡ್ರೈವರ್  ನನ್ನನ್ನು ನಿಂದಿಸಿಲ್ಲ. ನನ್ನ ಮೇಲೆ ಕೋಪಗೊಂಡಿಲ್ಲ.  ಆರಾಮವಾಗಿ ಮೊಬೈಲ್ ತೆಗೆದುಕೊಂಡು ರೀಲ್ಸ್ ಸ್ಕ್ರೋಲ್ ಮಾಡುವುದರಲ್ಲಿ ಬ್ಯುಸಿಯಾಗಿದ್ದರು' ಎಂದು ಬರೆದುಕೊಂಡಿದ್ದಾರೆ. 

ಸಿಗ್ನಲ್​ನಲ್ಲೂ  ರೀಲ್ಸ್​ ಹವಾ

 'ಆಟೋದಲ್ಲಿ ಕುಳಿತು   ಬ್ಯಾಡ್ಮಿಂಟನ್​ ಕೋರ್ಟ್​​ನತ್ತ ಸಾಗುವ ದಾರಿಯಲ್ಲಿ ಸಿಗ್ನಲ್​ ಇತ್ತು. ನಾಲ್ಕು ಸೆಕೆಂಡ್ ಇದ್ದ ಕಾರಣ, ಬೇಗ ಹೋಗಲು ಆತ ಯತ್ನಿಸಿದ. ಅದು ಸಾಧ್ಯವಾಗಲಿಲ್ಲ. ಹೀಗಾಗಿ 90 ಸೆಕೆಂಡ್‌ಗಳ ಕಾಲ ನಾವು ಅಲ್ಲೇ ನಿಲ್ಲಬೇಕಾಯಿತು.  ಆ ಸಂದರ್ಭದಲ್ಲಿ ನಮ್ಮ ಎಡಭಾಗದಲ್ಲಿ ನಿಂತಿದ್ದ ಟಾಟಾ ನೆಕ್ಸಾನ್ ಕಾರಿನಲ್ಲಿದ್ದ ಸುಮಾರು 30 ವರ್ಷ ವಯಸ್ಸಿನ ಮಹಿಳೆ, ಕಾರಿನ ಇಂಜಿನ್ ಆಫ್ ಮಾಡಿ, ಫೋನ್ ತೆಗೆದು ತಕ್ಷಣವೇ ರೀಲ್ಸ್ ಸ್ಕ್ರೋಲ್ ಮಾಡಲು ಶುರು ಮಾಡಿದರು.'
ಮುಂದುವರೆದು, 'ನಿಗದಿತ ಸಮಯಕ್ಕೆ ಕೋರ್ಟ್​ ತಲುಪಿದೆ. ಆದರೆ ನನ್ನ ಸ್ನೇಹಿತ ಬಂದಿರಲಿಲ್ಲ. ಕೋರ್ಟ್​ನ ನಂಬರ್​ ಪಡೆದುಕೊಳ್ಳಲು ರಿಸೆಪ್ಷನಿಸ್ಟ್​ ಬಳಿ ತೆರಳಿದೆ. ಆಗ ಅಲ್ಲಿ ಕುಳಿತಿದ್ದ ವ್ಯಕ್ತಿ ಗಮನಿಸಿದೆ. ಅವರಿಗೆ ನನ್ನ ತಂದೆಯಷ್ಟು ವಯಸ್ಸಿರಬಹುದು. ಅವರು ಸಹ ನಾನು ಮೊದಲು ಮಾತನಾಡಿಸಿದಾಗ ಯಾವುದೇ  ಉತ್ತರ ಕೊಟ್ಟಿಲ್ಲ. ಆಗ ಅವರು ರೀಲ್ಸ್​​ ಸ್ಕ್ರಾಲ್ ಮಾಡುತ್ತಿದ್ದರು' ಎಂದು ಹೇಳಿಕೊಂಡಿದ್ದಾರೆ. 
'ನನಗೆ  ನಿಗದಿಯಾಗಿದ್ದ ಕೋರ್ಟ್​ ಬಳಿ ಆಟ ನೋಡಲು  5 ಜನರು  ಬೆಳಿಗ್ಗೆ 6 ರಿಂದ 7 ರವರೆಗೆ ಬುಕ್ ಮಾಡಿದ್ದರು. ಆದರೆ ಅವರು ಆಟವನ್ನು ನೋಡುತ್ತಿರಲೇ ಇಲ್ಲ. ಅವನು ರೀಲ್‌ಗಳನ್ನು ಸ್ಕ್ರೋಲ್ ಮಾಡುವುದರಲ್ಲಿ ನಿರತನಾಗಿದ್ದನು. ರೀಲ್‌ಗಳು ಸದ್ದಿಲ್ಲದೆ ಜಗತ್ತನ್ನು ಆಕ್ರಮಿಸಿಕೊಂಡಿವೆ' ಎಂದು ಬೇಸರ ವ್ಯಕ್ತಪಡಿಸಿದರು.

ನೆಟ್ಟಿಗರು ಏನಂದ್ರು?

ಮೊಬೈಲ್​ಗಳ ಬಳಕೆ ನಿಯಂತ್ರಣದಲ್ಲಿ ಇಲ್ಲ. ದಿನಕ್ಕೆ ಒಂದೆರಡು ಬಾರಿ ಅವುಗಳಿಲ್ಲದೆ ಬದುಕಬೇಕು. ನಡೆಯುವಾಗ, ಊಟ ಮಾಡುವಾಗ,  ವ್ಯಾಯಾಮ ಮಾಡುವಾಗ ಎಂದು ಸಚಿನ್​ ಎನ್ನುವವರು ಬರೆದುಕೊಂಡಿದ್ದಾರೆ. ಇದಕ್ಕೆ  ಆದಿತ್ಯ ಆನಂದ್​ ಅವರು  ಉತ್ತರಿಸಿದ್ದು, ನಾನು ಕಳೆದ ವಾರ 36 ಗಂಟೆ ಸ್ಕ್ರೀನ್​ ಡಿಟಾಕಕ್ಸ್​ ಮಾಡಿಸಿಕೊಂಡೆ. ನಿಮಗೆ ನಂಬಲಾಗದು ನನ್ನ  ಮೆದುಳು ಸಾಕಷ್ಟು ಚುರುಕಾಗಿ ಕೆಲಸ ಮಾಡುತ್ತಿತ್ತು. ಇದನ್ನು ಹೆಚ್ಚು ಶಿಫಾರಸು ಮಾಡಿ ಎಂದಿದ್ದಾರೆ. 
ಯಶಿ ಎನ್ನುವರು ಟ್ವೀಟ್ ಮಾಡಿದ್ದು, ನಾನು ಮಲಗುವಾಗ ನನ್ನ ಮೊಬೈಲ್​ ಅನ್ನು ಒಂದು ಮೀಟರ್​ ದೂರದಲ್ಲಿಡುತ್ತೇನೆ. ವೈಫೈ ಆಫ್​ ಮಾಡುತ್ತೇನೆ. ಇದು ಸುಖನಿದ್ರೆ ಅತ್ಯಂತ ದೊಡ್ಡ ಮದ್ದು ಎಂದಿದ್ದಾರೆ. ಧೂಮಪಾನಕ್ಕಿಂತ  ಮೊಬೈಲ್​ ನೋಡುವುದು ಡೇಂಜರ್​.  ಧೂಮಪಾನ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ಆದರೆ, ಮೊಬೈಲ್​ ನಿತ್ಯ ನಿಮ್ಮ ಮೆದುಳನ್ನು ಕೊಲ್ಲುತ್ತದೆ ಎಂದು ಹೇಳಿದ್ದಾರೆ, (ಏಜೆನ್ಸೀಸ್).