roadwidening 
ಬೆಂಗಳೂರು

ರಸ್ತೆ ಅಗಲೀಕರಣಕ್ಕೆ ಮೀಸಲಿಟ್ಟಿದ್ದ ಆರ್.ಡಿ.ಸ್ವತ್ತು ವಶ

ಆರ್.ತುಳಸಿಕುಮಾರ್

ಪ್ರಮುಖ ಮುಖ್ಯಾಂಶಗಳು

  • ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಮಾಹಿತಿ
ಬೆಂಗಳೂರು: ನಗರದ ಐಟಿಪಿಎಲ್ ಮುಖ್ಯರಸ್ತೆಯನ್ನು ಪರಿಷ್ಕೃತ ಮಹಾಯೋಜನೆ -2015 ರಂತೆ 150 ಅಡಿ ಅಗಲದ ರಸ್ತೆ ಅಗಲೀಕರಣಕ್ಕಾಗಿ ಮೀಸಲಿರಿಸಿದ್ದ ಆರ್.ಡಿ ಸ್ವತ್ತುಗಳನ್ನು (ಪರಿತ್ಯಾಜನಾ ಪತ್ರ) ಕಾರ್ಪೋರೇಷನ್ ವಶಕ್ಕೆ ಪಡೆಯಲಾಗಿದೆ ಎಂದು ಪೂರ್ವ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದ್ದಾರೆ.
ರಸ್ತೆ ಅಗಲೀಕರಣ ಕಾರ್ಯಕ್ಕಾಗಿ ಕಾಯ್ದಿರಿಸುವ ಪರಿತ್ಯಾಜನ ಪತ್ರ ಆಗಿರುವ ಸ್ವತ್ತುಗಳನ್ನು ಪಾಲಿಕೆ ವಶಕ್ಕೆ ಪಡೆಯುವಂತೆ ಸಂಬಂಧಪಟ್ಟ ವಿಭಾಗಗಳ ಕಾರ್ಯಪಾಲಕ ಅಭಿಯಂತರು, ಸಹಾಯಕ ನಿರ್ದೇಶಕರು ನಗರ ಯೋಜನೆ, ಸಹಾಯಕ ಕಾರ್ಯಪಾಲಕ ಅಭಿಯಂತರು ಭೂಸ್ವಾಧೀನ ಮತ್ತು ಟಿಡಿಆರ್ ಹಾಗೂ ಸರ್ವೇಯರ್‌ಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಅದರಂತೆ ಬುಧವಾರ ಐಟಿಪಿಎಲ್ ಮುಖ್ಯರಸ್ತೆಯಲ್ಲಿರುವ ಆರ್.ಡಿ.ಸ್ವತ್ತುಗಳನ್ನು (1,707.51 ಚ. ಮೀ.) ವಶಕ್ಕೆ ಪಡೆಯಲಾಯಿತು ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ವಶಕ್ಕೆ ಪಡೆದ ಆರ್.ಡಿ. ಸ್ವತ್ತುಗಳು ಪೂರ್ವ ಪಾಲಿಕೆಗೆ ಸೇರಿದ್ದು, ರಸ್ತೆ ಅಗಲೀಕರಣಕ್ಕೆ ಕಾಯ್ದಿರಿಸಲಾಗಿದೆ. ಈ ಸ್ವತ್ತುಗಳು ಅತಿಕ್ರಮಣವಾಗದಂತೆ ತಡೆಯಲು ಸೂಚನಾ ಫಲಕ ಅಳವಡಿಸಿದ್ದು, ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳುವರೆಗೂ ನಗರ ಸಂಚಾರ ದಟ್ಟಣೆ ತಗ್ಗಿಸುವ ದೃಷ್ಟಿಯಿಂದ ಪೇ-ಪಾರ್ಕಿಂಗ್ ಸೌಲಭ್ಯಕ್ಕಾಗಿ ಬಳಸಲು ಇರುವ ಕಾರ್ಯಸಾಧ್ಯತೆ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ವಶಕ್ಕೆ ಪಡೆಯಲಾದ ಆರ್.ಡಿ. ಸ್ವತ್ತು ವಿವರ:
* ರೆಗುಲಾಸ್ ಡೆವೆಲಪರ್, ಐಟಿಪಿಎಲ್ ಮುಖ್ಯರಸ್ತೆ, 500.28 ಚ. ಮೀ.
* ಎಲೆಗೆಂಟ್ ಪ್ರಾಪರ್ಟೀಸ್, ಐಟಿಪಿಎಲ್ ಮುಖ್ಯರಸ್ತೆ, 606.23 ಚ. ಮೀ.
* ಟ್ರಿಫೆಕ್ಟ್ ಡೆವೆಲಪರ್, ಐಟಿಪಿಎಲ್ ಮುಖ್ಯರಸ್ತೆ, 601 ಚದರ ಮೀಟರ್.