ಬೆಂಗಳೂರು: ಆಶಾ ಕಾರ್ಯಕರ್ತೆಯರಿಲ್ಲದಿದ್ದರೂ ಆರೋಗ್ಯ ಇಲಾಖೆ ಕಾರ್ಯನಿರ್ವಹಿಸುತ್ತದೆ ಎಂಬ ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿಕೆ ರಾಜ್ಯ ಸರ್ಕಾರದ ಸಂವೇದನಾರಹಿತ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುವಾರ್ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುನ್ನಡೆಸುವ ಆರೋಗ್ಯ ಸಚಿವರಿಗೆ ತಾಯಿಯ ಮಮತೆಯಂತಹ ಹೃದಯವಿರಬೇಕು ಆದರೆ ಕಠೋರ ಹಾಗೂ ನಿರ್ದಯ ಮನೋಭಾವದ ವ್ಯಕ್ತಿಯನ್ನು ಕಾಣುತ್ತಿದ್ದೇವೆ ಎಂದು ಟೀಕಿಸಿದ್ದಾರೆ.
ತಮ್ಮ ಅರ್ಥಹೀನ ಹಾಗೂ ಸಂವೇದನಾರಹಿತ ಹೇಳಿಕೆಯನ್ನು ಕೂಡಲೇ ಹಿಂಪಡೆಯಬೇಕು. ಜೊತೆಗೆ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಕ್ಷಮೆಯಾಚಿಸಬೇಕು ಎಂದು ರವಿಕುವಾರ್ ಅವರು ಆಗ್ರಹಿಸಿದ್ದಾರೆ.