ಮಾಸ್ಟರ್ಸ್ ಅಥ್ಲೆಟಿಕ್ಸ್ನಲ್ಲಿ ಬೆಂಗಳೂರಿನ ಪುಷ್ಪಲತಾಗೆ ಮೂರು ಪದಕ
ಬೆಂಗಳೂರು: ಗೋವಾದ ಬಂಬೋಲಿಮ್ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ 3ನೇ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ (Masters Athletics) ಚಾಂಪಿಯನ್ನಲ್ಲಿ ಬೆಂಗಳೂರಿನ ಪುಷ್ಪಲತಾ ಮಹಾಳಂಕ ಕರ್ನಾಟಕವನ್ನು ಪ್ರತಿನಿಧಿಸಿ 3 ಪದಕಗಳನ್ನು ಗೆದ್ದುಕೊಂಡಿದ್ದಾರೆ.
ಅವರು 5 ಕಿಮೀ ನಡಿಗೆಯಲ್ಲಿ ಚಿನ್ನ, 4/400 ಮೀ. ರಿಲೇಯಲ್ಲಿ ಬೆಳ್ಳಿ ಮತ್ತು 4/100 ಮೀ. ರಿಲೇಯಲ್ಲಿ ಕಂಚಿನ ಪದಕ ಜಯಿಸಿದರು. ಪುಷ್ಪಲತಾ ವೃತ್ತಿಯಲ್ಲಿ ಗಣಿತ ಸಂಶೋಧಕಿಯಾಗಿದ್ದಾರೆ.