ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘದ ಸದಸ್ಯರು ಬುಧವಾರ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.  
ಬೆಂಗಳೂರು

ಅರಣ್ಯಾಧಿಕಾರಿಗಳಿಗೆ ರಕ್ಷಣೆ ನೀಡಿ

ಕಿರುವಾರ ಎಸ್.ಸುದರ್ಶನ್
ಬೆಂಗಳೂರು: ಹನೂರು ವನ್ಯಜಿವಿ ವಲಯದಲ್ಲಿ ಅರಣ್ಯ ಮತ್ತು ವನ್ಯಜಿವಿ ಸಂರಕ್ಷಣೆ ಹಿತದೃಷ್ಟಿಯಿಂದ ಕಾನೂನು ಚೌಕಟ್ಟಿನಲ್ಲಿ ಕೈಗೊಂಡ ಕ್ರಮಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಗೆ ಕಾನೂನು ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ವಲಯ ಅರಣ್ಯ ಅಧಿಕಾರಿಗಳ ಸಂಘದ ಸದಸ್ಯರು ಬುಧವಾರ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಅಧ್ಯಕ್ಷ ಕೆ.ಎಂ. ಚಂದ್ರಶೇಖರ ರೆಡ್ಡಿ ಮಾತನಾಡಿ, 15ರಂದು ಮುಂಜಾನೆ ವನ್ಯಪ್ರಾಣಿ ಬೇಟೆಗಾರರನ್ನು ಪತ್ತೆ ಹಚ್ಚಿ ಹತ್ತಿಕ್ಕುವ ಸಂದರ್ಭದಲ್ಲಿ ಇಲಾಖೆ ಸಿಬ್ಬಂದಿ ಮತ್ತು ಶಂಕಿತ ಬೇಟೆಗಾರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದಾರೆ. ಉದ್ದೇಶಪೂರ್ವಕವಾಗಿ ಸಿಬ್ಬಂದಿ ಗುಂಡಿನ ದಾಳಿ ಮಾಡಿಲ್ಲ ಎಂದರು. ಮೃತರ ಸಂಬಂಧಿಕರು ಇಲಾಖೆಯ ಕಚೇರಿ, ವಸತಿ ಗೃಹ, ವಾಹನಗಳನ್ನು ಧ್ವಂಸಗೊಳಿಸಿದ್ದಾರೆ. ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಪೊಲೀಸ್​ ಠಾಣೆಗೆ ದೂರು ನೀಡಿದ್ದು, ತನಿಖೆಗೂ ಮುನ್ನವೇ ಕ್ರಮ ಕೈಗೊಳ್ಳಲು ಒತ್ತಡ ಹೇರುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ, ಮಾದ್ಯಮಗಳಲ್ಲಿ ಅಧಿಕಾರಿಗಳದ್ದೇ ತಪು$್ಪ ಎಂಬ ರೀತಿ ಬಿಂಬಿತವಾಗುತ್ತಿದೆ. ಆತ್ಮರಕ್ಷಣೆಗಾಗಿ ಗುಂಡಿನ ದಾಳಿ ನಡೆಸಿದ್ದಾರೆ ಹೊರತು ಯಾವುದೇ ಉದ್ದೇಶದಿಂದ ಅಲ್ಲ. ಕಾರ್ಯಚರಣೆಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳ ಮನೋಸ್ಥೆ$ರ್ಯ ಹೆಚ್ಚಿಸುವ ನಿಟ್ಟಿನಲ್ಲಿ ರಕ್ಷಣೆ ನೀಡಬೇಕು ಎಂದು ಕೋರಿದರು.
ಸಂಘದ ಅಧ್ಯಕ್ಷ ಪ್ರಧಾನ ಕಾರ್ಯದರ್ಶಿ ಜಿ. ಕಿರಣ್​ ಕುಮಾರ್​, ಕಾರ್ಯಕಾರಿ ಸಮಿತಿ ಸದಸ್ಯ ಎನ್​. ನಾಗಾರ್ಜುನ, ಅಜಯ್​ ಕುಮಾರ್​, ಸಂದೇಶ್​ ಇದ್ದರು.