ಪಿ.ಸುನೀಲ್​ ಕುಮಾರ್​, ಐಎಎಸ್​ 
ಬೆಂಗಳೂರು

ಬೀದಿನಾಯಿಗಳ ಸಂರಕ್ಷಣೆಗೆ ವ್ಯವಸ್ಥಿತ ಯೋಜನೆ | SAVE STRAY DOGS

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ಉತ್ತರ ಪಾಲಿಕೆ ಅಭಿವೃದ್ಧಿ ಕಾರ್ಯಗಳು ಚುರುಕು
  • ಪ್ರತಿ ಯೋಜನೆಯಲ್ಲೂ ಸಮನ್ವಯದ ಮಂತ್ರ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಬೀದಿನಾಯಿಗಳ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಉತ್ತರ ನಗರ ಪಾಲಿಕೆ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಸುಪ್ರೀಂ ಕೋರ್ಟ್​ ಅದೇಶವನ್ನು ಚಾಚೂ ತಪ್ಪದೆ ಪಾಲಿಸಲು ಕಾರ್ಪೊರೇಷನ್​ ಕಟಿಬದ್ಧವಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರಾಣಿಗಳ ಮೇಲೂ ಅತ್ಯಂತ ಕಾಳಜಿ ವಹಿಸಿ ಶ್ವಾನಗಳ ಸ್ಥಳಾಂತರ, ಶಾಶ್ವತ ಆಶ್ರಯ ತಾಣ ಒದಗಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಆಯುಕ್ತ ಪಿ. ಸುನೀಲ್​ ಕುಮಾರ್​ ತಿಳಿಸಿದ್ದಾರೆ.
ಮಂಗಳವಾರ "ವಿಜಯವಾಣಿ' ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಬೀದಿನಾಯಿಗಳನ್ನು ಗುರುತಿಸುವ ಸಲುವಾಗಿ 2,091 ಸಂ&ಸಂಸ್ಥೆಗಳಿಗೆ ನೋಟಿಸ್​ ನೀಡಲಾಗಿತ್ತು. ಅದರಲ್ಲಿ ಅವರ ಸುತ್ತಮುತ್ತಲಿನ ನಾಯಿಗಳ ಮಾಹಿತಿ ನೀಡಲು ಸೂಚಿಸಲಾಗಿದೆ. ಆ ಪೈಕಿ 1,273 ಸಂಸ್ಥೆಗಳು ಪ್ರತಿಕ್ರಿಯಿಸಿದ್ದು, ಅಂದಾಜು 2,339 ಶ್ವಾನಗಳನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ 2 ಎಬಿಸಿ ಕೇಂದ್ರಗಳಿದ್ದು, ತ್ವರಿತವಾಗಿ ಸಂ&ಸಂಸ್ಥೆಗಳಿಂದ ಸ್ಥಳಾಂತರಿಸುವ ನಾಯಿಗಳಿಗೆ ಅಲ್ಲಿ ಸಂರಕ್ಷಣೆ ಮಾಡಲಾಗುವುದು. ಮೇಡಿ ಅಗ್ರಹಾರದ ಕೇಂದ್ರದಲ್ಲಿ 120 ಎಬಿಸಿ ಕೆನಲ್​ಗಳಿದ್ದು, 1 ಐಸೋಲೇಶನ್​ ಕೇಂದ್ರ ಹಾಗೂ 1 ನಿಗಾ ಘಟಕವಿದೆ. ದಾಸರಹಳ್ಳಿಯ ಎಬಿಸಿ ಕೇಂದ್ರದಲ್ಲಿ 54 ಕೆನಲ್​ಗಳಿದ್ದು, 1 ನಿಗಾ ಘಟಕವಿದೆ. ತಾತ್ಕಾಲಿಕವವಾಗಿ 2&3 ವಾರದಲ್ಲಿ ಮಾವಳ್ಳಿಪುರ ಸಮೀಪ ತಾಣವನ್ನು ನಿರ್ಮಿಸಲಾಗುವುದು. ಎನ್​ಜಿಒಗಳಿಗೆ ಅದನ್ನು ಸಂರಸುವ ಜವಾಬ್ದಾರಿ ನೀಡಲಾಗುತ್ತದೆ ಎಂದು ತಿಳಿಸಿದರು.
ಆಹಾರಕ್ಕೂ ಅಧಿಕೃತ ತಾಣ ನಿಗದಿ:
ಅಧಿಕೃತವಾಗಿ ಸೂಚಿಸಿದ ಜಾಗದಲ್ಲಿ ಮಾತ್ರ ಬೀದಿನಾಯಿಗಳಿಗೆ ಆಹಾರ ನೀಡಲು ಅವಕಾಶವಿದೆ. ಅದಕ್ಕಾಗಿ ಪಾಲಿಕೆ 63 ಆಹಾರ ನೀಡುವ ಸ್ಥಳಗಳನ್ನು ಗುರುತಿಸಿದೆ. ಸೂಚನಾ ಲಕಗಳನ್ನು ಅಳವಡಿಸುವ ಮೂಲಕ ಅಲ್ಲಿ ಸಾರ್ವಜನಿಕರ ಗಮನವನ್ನು ಸೆಳೆಯಲಿದ್ದೇವೆ. ಅಧಿಕೃತ ತಾಣವನ್ನು ಹೊರತುಪಡಿಸಿ ಬೇರೆ ಜಾಗದಲ್ಲಿ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಸುಮಾರು 3 ಸಾವಿರ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಎರಡೂ ಕೇಂದ್ರಗಳಲ್ಲಿ ಕನಿಷ್ಠ 10 ನಾಯಿಗಳಿಗೆ ಪ್ರತಿದಿನ ಶಸ್ತ್ರಚಿಕಿತ್ಸೆಗೆ ಒಳಪಡುತ್ತಿದೆ ಎಂದರು.

ಕೆರೆ, ಪಾರ್ಕ್​ ಪುನರುಜ್ಜೀವನಕ್ಕೆ ಬದ್ಧ

ಈ ಹಿಂದೆ ಬಿಬಿಎಂಪಿ ಅವಧಿಯಲ್ಲಿ ಕೆರೆ ನಿರ್ವಹಣೆ ಹೇಗಿತ್ತೋ ಅದನ್ನೇ ನಾವೂ ಮುಂದುವರಿಸುತ್ತಿದ್ದೇವೆ. ಅಲ್ಲಿ ಮಹತ್ವದ ಬದಲಾವಣೆ ಸದ್ಯಕ್ಕಿಲ್ಲ. ಕೆಲವು ಕಡೆಗಳಲ್ಲಿ ಮಾತ್ರ ನಿರ್ವಹಣೆ ಮಾಡಲಾಗುತ್ತಿದೆ. ಇತ್ತೀಚೆಗೆ ಜಕ್ಕೂರು ಕೆರೆಯಲ್ಲಿ ಒಳಚರಂಡಿ ಸಂಸ್ಕರಣಾ ಟಕ ಸಾಮರ್ಥ್ಯವನ್ನು 7 ಎಂಎಲ್​ಡಿ ಏರಿಸಲಾಗಿತ್ತು. ಈ ವ್ಯವಸ್ಥೆ ಇಲ್ಲದ ಕಡೆ ತ್ಯಾಜ್ಯ ನೀರು ಕೆರೆಗೆ ಸೇರದಂತೆ ತಿರುಗಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಉತ್ತರ ಕಾಪೋರ್ರೇಷನ್​ ವ್ಯಾಪ್ತಿಯಲ್ಲಿ ಒಟ್ಟು 36 ಕೆರೆಗಳಿದ್ದು, ಭವಿಷ್ಯದಲ್ಲಿ ಪುನರುಜ್ಜೀವನ ಮಾಡಲಾಗುವುದು. ಪಾರ್ಕ್​ಗಳಲ್ಲೂ ಸಾಮಾನ್ಯವಾಗಿ ಜನರ ಅಪೇೆ ಸರಳವಾಗಿದ್ದು, ಬೀದಿದೀಪ ಅಳವಡಿಕೆ ಮತ್ತು ಜಿಮ್​ ಪರಿಕರಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಪಾರ್ಕ್​ಗಳಲ್ಲಿ ಹಿರಿಯ ನಾಗರಿಕರಿಗೆ ಆದ್ಯತೆಯ ಮೇಲೆ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆಯುಕ್ತರು ವಿವರಿಸಿದರು.

ಸಮನ್ವಯ ಸಾಧನೆ ಮುಖ್ಯ

ಬೆಸ್ಕಾಂ, ಜಲಮಂಡಳಿ, ಬಿಎಂಆರ್​ಸಿಎಲ್​ (ಮೆಟ್ರೋ) ಬಿ&ಸ್ಮೆ$ಲ್​, ನತ್ಯಾಜ್ಯ ನಿರ್ವಹಣಾ ಮಂಡಳಿಯಂತಹ ಸಂಸ್ಥೆಗಳ ಜತೆ ಸಮನ್ವಯ ಸಾಧಿಸುವ ಕೆಲಸವನ್ನು ಜಿಬಿಎ ಮುಖ್ಯ ಕಚೇರಿ, ಮುಖ್ಯ ಆಯುಕ್ತರು ನಿರ್ವಹಿಸುತ್ತಾರೆ. ಮೂರು ತಿಂಗಳಿಗೊಮ್ಮೆಆಗುವ ಸಭೆಯಲ್ಲಿಯೂ ಸಮನ್ವಯದ ಚರ್ಚೆಗಳು ಹೆಚ್ಚಿರುತ್ತದೆ. ಅದಾಗ್ಯೂ ಅಭಿವೃದ್ಧಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ, ಉತ್ತಮ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಮತ್ತೆ ಡಿಸಿಎಂ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಆದರೆ, ಸ್ಥಳಿಯ ಮಟ್ಟದಲ್ಲಿ ಸಮಸ್ಯೆಗಳನ್ನು ಅರಿತು, ಹೊಂದಾಣಿಕೆಯಲ್ಲಿ ಪರಿಹಾರ ಕಂಡುಕೊಳ್ಳಬೇಕೆಂದರೆ ಆಯಾ ಪಾಲಿಕೆಯ ಆಯುಕ್ತರ ನೇತೃತ್ವದಲ್ಲಿ ಸಮನ್ವಯ ಸಾಧಿಸುವ ಅಧಿಕಾರ ಸಿಕ್ಕಲ್ಲಿ ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಬಹುದು ಎಂಬುದಾಗಿ ಸರ್ಕಾರದ ಗಮನಕ್ಕೆ ತರಲಾಗಿದೆ.

ಸಿಬ್ಬಂದಿ ಕೊರತೆ ಸದ್ಯಕ್ಕಿಲ್ಲ!

ಸದ್ಯದ ಪರಿಸ್ಥಿತಿಯಲ್ಲಿ ದೈನಂದಿನ ಕೆಲಸ ಕಾರ್ಯಗಳನ್ನು ನಿಭಾಯಿಸುವಷ್ಟು ಸಿಬ್ಬಂದಿ ಪಾಲಿಕೆಯಲ್ಲಿದ್ದ್ದಾರೆ. ಚುನಾವಣೆ ಬಳಿಕವೋ ಮುಂದಿನ ದಿನಗಳಲ್ಲಿ ಈ ಚಿತ್ರಣ ಬದಲಾಗಬಹುದು. ಉದಾಹರಣೆಗೆ 2018ರಲ್ಲಿ ಪ್ರತಿ 750 ಮನೆಗೊಂದು ಕಸದ ಗಾಡಿ ಎಂದು ನಿಗದಿಯಾಗಿತ್ತು. ಈಗ ರಾಜಧಾನಿಯಲ್ಲಿ ಜನಸಂಖ್ಯೆ ಅಧಿಕವಾಗಿದೆ. ಆದ್ದರಿಂದಲೇ ಕೆಲವು ಕಡೆ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಪರಿಶೀಲನೆ ವೇಳೆ ಸಿಬ್ಬಂದಿ ಗೈರಾಗಿರುವುದು ಹಲವು ಕಡೆ ಗಮನಿಸಿದ್ದೇನೆ. ವಾಸ್ತವ ತಿಳಿಯಲೆಂದೇ ಹಲವು ಬಾರಿ ಅನಿರೀತ ಭೇಟಿಗಳನ್ನು ಕೈಗೊಂಡಿದ್ದೇನೆ. ಒಂದು ಕಡೆ 36 ಸಿಬ್ಬಂದಿಯಲ್ಲಿ 15 ಮಂದಿ ರಜೆಯಲ್ಲಿದ್ದುದು ಕಂಡುಬಂದಿದೆ. 3&4 ಮಂದಿ ಗೈರಾಗುವುದು ಸಾಮಾನ್ಯವಾಗಿದೆ.

ಫೋನ್​-ಇನ್​ ವರ

ಪ್ರತಿ ಶುಕ್ರವಾರ ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಫೋನ್​-ಇನ್​ ಕಾರ್ಯಕ್ರಮ ನಡೆಸುತ್ತಿದ್ದು, ಇದರಿಂದ ನಮಗೆ ಸಾರ್ವಜನಿಕರ ನಾಡಿಮಿಡಿತ ಏನೆಂಬುದು ತಿಳಿಯುತ್ತಿದೆ. ಮುಖ್ಯವಾಗಿ ರಸ್ತೆಗುಂಡಿ, ಕಸ ಸಮಸ್ಯೆ ಮಾಮೂಲಿಯಾಗಿದೆ. ರಸ್ತೆಗೆ ಸಂಬಂಧಪಟ್ಟು 207 ಅಹವಾಲುಗಳು ಬಂದಿದ್ದು, ಅದರಲ್ಲಿ 61 ಪರಿಹರಿಸಲು ಬಾಕಿ ಇದೆ. ಕಸದ ಸಮಸ್ಯೆ 127 ಬಂದಿದ್ದು, 9 ಪ್ರಕರಣಗಳು ಬಾಕಿ ಉಳಿದುಕೊಂಡಿವೆ. ಅಲ್ಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಸಂಪರ್ಕಿಸಿ "ಆನ್​ ದಿ ಸ್ಪಾಟ್​' ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡುತ್ತೇವೆ. ತ್ವರಿತ ಗತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಗಮನ ಹರಿಸುತ್ತೇವೆ. ಒಂದು ಕಾರ್ಯಕ್ರಮದಲ್ಲಿ ಸುಮಾರು 40&50 ಕರೆಗಳು ಬರುತ್ತವೆ. ನಮ್ಮ ವ್ಯಾಪ್ತಿಗೆ ಬಾರದ ಸಮಸ್ಯೆಗಳನ್ನು ಸಂಬಂಧಪಟ್ಟ ವಲಯಕ್ಕೆ ವರ್ಗಾಯಿಸಿ ಜನರಿಗೆ ಪರಿಹಾರ ಕೊಡಿಸಲು ಕಾರ್ಯಪ್ರವೃತ್ತರಾಗಿದ್ದೇವೆ ಎಂದು ಸುನೀಲ್​ಕುಮಾರ್​ ವಿವರಿಸಿದರು.

ಮುಖ್ಯಾಂಶಗಳು

* ಪಾದಚಾರಿ ಮಾರ್ಗವನ್ನು ಸಂಚಾರ ಯೋಗ್ಯ ಮಾಡುವುದು
* ಕಸ ವಿಲೇವಾರಿಯಲ್ಲಿ ಕಠಿಣ ಕ್ರಮ, ದಂಡ ಇತ್ಯಾದಿ
* ಅನಧಿಕೃತ ಕಟ್ಟಡ ತೆರವಿಗೆ ಚಿಂತನೆ
* ಸ್ಥಳಿಯ ಜನಪ್ರತಿನಿಧಿಗಳಿಂದ ಸಹಕಾರ
* ಕೊಳೆಗೇರಿ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ
* ನಗರ ಸೌಂದರ್ಯ ವೃದ್ಧಿಗೂ ಒತ್ತು

ಉತ್ತರ ಪಾಲಿಕೆಯ ಕೆಲವು ಸ್ಥಳಗಳಲ್ಲಿ ವಿಲೇ ಆಗದೆ ಬಿದ್ದಿದ್ದ ತ್ಯಾಜ್ಯ ತೆರವು ಮಾಡಲು ಅಸಾಧ್ಯವಾಗಿತ್ತು. ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಸ್ವಚ್ಛತಾ ಕಾರ್ಯಕ್ಕೆ ಸಾರ್ವಜನಿಕರು, ಸಂ&ಸಂಸ್ಥೆಗಳು ಕೈ ಜೋಡಿಸುವಂತೆ ವಿವಿಧ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಯಿತು. ಎನ್​ಜಿಒಗಳ ಸಮನ್ವಯದಿಂದ ಲಾಂತರ ರೂಪಾಯಿ ನಗದು ಬಹುಮಾನ ನೀಡಿ ಸ್ಪರ್ಧಾತ್ಮಕವಾಗಿಯೂ ಸ್ವಚ್ಛತಾ ಕಾರ್ಯ ನಡೆಸಿ ಯಸಸ್ವಿಯಾಗಿದ್ದೇವೆ.