- ಐಐಎಸ್‌ಸಿ ನೀಡುವ ಶ್ರೇಷ್ಠ ಬೋಧನಾ ಪ್ರಶಸ್ತಿ
- ‘ ಭಾಗವತ ಓದು’ ಆ್ಯಪ್‌ನ ರೂವಾರಿ
ಮೈಸೂರು: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನೀಡುವ ಪ್ರತಿಷ್ಠಿತ ಅವಾರ್ಡ್ ಫಾರ್ ಎಕ್ಸಲೆನ್ಸ್ ಇನ್ ಟೀಚಿಂಗ್ 2026 ( ಶ್ರೇಷ್ಠ ಬೋಧನಾ ಪ್ರಶಸ್ತಿ)ಗೆ ಡಾ. ಎ.ಪಿ. ಪ್ರತೋಷ್ ಆಚಾರ್ಯ ಭಾಜನರಾಗಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಎಲೆಕ್ಟಿಕಲ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ನಗರದ ಹರಿಣಿ ಪ್ರಸಾದ್ ಮತ್ತು ಎ.ಎನ್. ಪ್ರಸಾದ್ ಅವರ ಪುತ್ರರು.
ಮೈಸೂರಿನ ಜೆಸಿಇ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು 2015 ರಲ್ಲೇ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಎ.ಐ. ವಿಷಯದ ಮೇಲೆ ಪಿಎಚ್ ಡಿ ಪಡೆದಿದ್ದಾರೆ. ತಾಂತ್ರಿಕ ವಿಷಯದೊಂದಿಗೆ ವೇದ-ವೇದಾಂತ, ವ್ಯಾಕರಣ ಮತ್ತು ಮೀಮಾಂಸಾ ಶಾಸ್ತ್ರಗಳಲ್ಲಿಯೂ ಆಳವಾದ ಸಾಂಪ್ರದಾಯಿಕ ಅಧ್ಯಯನ ಮಾಡಿದ್ದಾರೆ.
‘ ಭಾಗವತ ಓದು’ ಆ್ಯಪ್‌ನ ರೂವಾರಿ:
‘ ಭಾಗವತ ಓದು’ ಆ್ಯಪ್‌ನ ರೂವಾರಿಯಾಗಿರುವ ಪ್ರತೋಷ್ ಅವರು , ಈ ವರೆಗೆ ಹಲವಾರು ಸರಣಿಗಳನ್ನು ಪ್ರಸ್ತುತ ಪಡಿಸಿರುವುದು ವಿಶೇಷವಾಗಿದೆ. ಪ್ರತೋಷ್ ಅವರು ಅಧ್ಯಾತ್ಮ ಪ್ರವಚನಕಾರರಾಗಿಯೂ ಸೇವೆ ಸಲ್ಲಿಸುತ್ತಿರುವುದು ವಿಶೇಷವಾಗಿದೆ.