High court 
ಬೆಂಗಳೂರು

ರಾಜ್ಯದಲ್ಲಿ ಪೋಲೀಸ್​ರಾಜ್​ ಜಾರಿಯಲ್ಲಿದೆ| High court

ಪ್ರಮುಖ ಮುಖ್ಯಾಂಶಗಳು

  • ಕಾನೂನುಬಾಹಿರ ಬಂಧನ ಹೆಚ್ಚಳ ಎಂದ ಹೈಕೋರ್ಟ್​
  • ವೈಟ್​ಫೀಲ್ಡ್​ ಡಿಸಿಪಿ, ಎಸಿಪಿ, ಪಿಎಸ್​ಐಗೆ 3 ಲಕ್ಷ ರೂ. ದಂಡ

ಬೆಂಗಳೂರು: 

ರಾಜ್ಯದಲ್ಲಿ ನಿಯಮ ಮೀರಿ ನಾಗರಿಕರನ್ನು ಬಂಧಿಸುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ನ್ಯಾಯಾಲಯದ ಆದೇಶಗಳು ಮತ್ತು ಸಂವಿಧಾನಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಪೊಲೀಸ್​ ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಹೈಕೋರ್ಟ್​ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ನಕಲಿ ವಿಲ್​ ಆರೋಪಕ್ಕೆ ಸಂಬಂಧಿಸಿ ದಾಖಲಾಗಿರುವ ಪ್ರಕರಣದಲ್ಲಿ ವಿಲ್​ಗೆ ಸಾ ಸಹಿ ಹಾಕಿರುವ ಕೆ.ಎಮ್​. ಮೋಹನ್​ ರೆಡ್ಡಿ ಎಂಬುವರನ್ನು ವೈಟ್​ಫೀಲ್ಡ್​ ಪೋಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ  ಅವರಿದ್ದ ಏಕಸದಸ್ಯ ನ್ಯಾಯಪೀಠ ಘೋಷಿಸಿದೆ. ಈ ಬಗ್ಗೆ ಮಂಗಳವಾರವೇ ಆದೇಶಿಸಿದ್ದ ನ್ಯಾಯಪೀಠ, ಅರ್ಜಿದಾರರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಿತ್ತು. ಈ ಪ್ರಕರಣದ ತನಿಖಾಧಿಕಾರಿಯನ್ನು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು.
ವಿಚಾರಣೆಯನ್ನು ಗುರುವಾರ ಮುಂದುವರಿಸಿದ ನ್ಯಾಯಪೀಠ, ಪೊಲೀಸರ ವರ್ತನೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿದೆ. ಅರ್ಜಿದಾರರಿಗೆ ಆ.27ರೊಳಗೆ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿ ನೋಟಿಸ್​ ನೀಡಿದ್ದರು. ಆದರೆ, ಅವರನ್ನು ಆ.25ರಂದೇ ಬಂಧಿಸಲಾಗಿತ್ತು. ಇದು ಪೊಲೀಸ್​ರಾಜ್​ ಆಗಿದೆ. ಎಷ್ಟು ಬಾರಿ ಹೇಳಿದರೂ ಕಾನೂನು ಪಾಲನೆಯಾಗುತ್ತಿಲ್ಲ. ಈ ಪ್ರಕರಣದ ಮೆರಿಟ್​ ಬಗ್ಗೆ ಹೇಳುತ್ತಿಲ್ಲ. ಆದರೆ, ಬಂಧನ ಮಾಡುವಾಗ ಕಾನೂನು ಪಾಲಿಸಿಲ್ಲ ಎಂದಿತು. ಪ್ರಕರಣದ ಮೊದಲ ಆರೋಪಿ ಸಿಕ್ಕಿಲ್ಲ ಎಂದು ಎರಡನೇ ಆರೋಪಿಯಾಗಿರುವ ಅರ್ಜಿದಾರರನ್ನು ಬಂಧಿಸಲಾಗಿದೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಅವಲೋಕನ ಮಾಡಿದೆ.

ದಂಡದ ಮೊತ್ತ ಸ್ವತಃ ಪಾವತಿಸಿ:

ಪೊಲೀಸರಿಗೆ ಎಚ್ಚರಿಕೆ ನೀಡಿದರೆ ಸಾಕಾಗುವುದಿಲ್ಲ. ಇಂತಹ ಟನೆಗಳು ಮುಂದುವರಿಯಬಾರದಾದರೆ ದಂಡ ವಿಧಿಸಬೇಕು ಎಂದ ನ್ಯಾಯಪೀಠ, 3 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ಪಿಎಸ್​ಐ ಸುನೀಲ್​ ಕುಮಾರ್​, ಡಿಸಿಪಿ ಸೈದುಲ್​ ಅದಾವತ್​ ಮತ್ತು ಎಸಿಪಿ ರೀನಾ ಸುವರ್ಣ ಅವರು ಈ ದಂಡದ ಮೊತ್ತವನ್ನು ತಮ್ಮ ವೈಯಕ್ತಿಕ ಹಣದಿಂದ ಪಾವತಿಸಬೇಕು ಎಂದು ಹೇಳಿದೆ. 
ವಿಚಾರಣೆ ವೇಳೆ ಹಾಜರಿದ್ದ ತನಿಖಾಧಿಕಾರಿ ಸುನೀಲ್​ ಕುಮಾರ್​ ಅವರನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಸರ್ಕಾರಿ ವಕೀಲರನ್ನು ಉದ್ದೇಶಿಸಿದ ನ್ಯಾಯಪೀಠ, ಇಂತಹ ಟನೆಗಳಿಗೆ ತನಿಖಾಧಿಕಾರಿ ಮಾತ್ರ ಕಾರಣವಲ್ಲ. ಮೇಲಾಧಿಕಾರಿಗಳ ಆದೇಶದಂತೆ ಇವರು ವರ್ತಿಸುತ್ತಾರೆ. ಕೊನೆಗೆ ಹರಕೆಯ ಕುರಿಯಾಗುತ್ತಾರೆ. ಆದ್ದರಿಂದ ತನಿಖಾಧಿಕಾರಿ ಮಾತ್ರವಲ್ಲ, ಇಡೀ ಪೊಲೀಸ್​ ಠಾಣೆ ಮತ್ತು ಮೇಲಾಧಿಕಾರಿಗಳು ದಂಡ ಪಾವತಿಸಲು ಸಮಾನ ಹೊಣೆಗಾರರಾಗುತ್ತಾರೆ ಎಂದಿತು. 

⚠️

ಸಿವಿಲ್​ ಕೇಸ್​ನಲ್ಲಿ ನಿಮಗೇನು ಕೆಲಸ? 

ಸಿವಿಲ್​ ವ್ಯಾಜ್ಯದಲ್ಲಿ ಪೊಲೀಸರ ಹಸ್ತಕ್ಷೇಪ ಇರಬಾರದು ಎಂದು ಸುಪ್ರೀಂ ಕೋರ್ಟ್​, ಹೈಕೋರ್ಟ್​ಗಳು ಹಲವು ಬಾರಿ ಹೇಳಿದೆ. ಆದರೆ, ಪ್ರತಿ ಬಾರಿಯೂ ನಿಯಮ ಉಲ್ಲಂನೆಯಾಗುತ್ತಿದೆ. ಕೊಲೆ ಪ್ರಕರಣಗಳ ಆರೋಪಿಗಳನ್ನು ಹುಡುಕುವ ಬದಲು ಸಿವಿಲ್​ ಪ್ರಕರಣದಲ್ಲಿ ತಕ್ಷಣ ಹಾಜರಾಗುತ್ತಾರೆ. ಮದುವೆ ಭರವಸೆ ನೀಡಿ ಅತ್ಯಾಚಾರ ಪ್ರಕರಣದಲ್ಲಂತೂ ಕೇಳುವುದೇ ಬೇಡ, ಹುಡುಗಿ ದೂರು ನೀಡಿದ ತಕ್ಷಣವೇ ಹುಡುಗನನ್ನು ಬಂಧಿಸುತ್ತಾರೆ. ನ್ಯಾಯಾಲಯ ಇಲ್ಲವಾಗಿದ್ದರೆ ಪೊಲೀಸರ ಅಕ್ರಮ ಎಲ್ಲೆ ಮೀರುತ್ತಿತ್ತು ಎಂದು ಖಟುವಾಗಿ ನುಡಿಯಿತು.

ಮ್ಯಾಜಿಸ್ಟ್ರೆಟ್​ ಮೇಲೂ ಅಸಮಾಧಾನ:


ಪೊಲೀಸರು ಬಂಧಿಸಿದ ತಕ್ಷಣವೇ ವಿವೇಚನೆ ಬಳಸದೆ ಒಪ್ಪಿಗೆ ನೀಡುವ ಮ್ಯಾಜಿಸ್ಟ್ರೆಟ್​ ನ್ಯಾಯಾಲಯಗಳ ಬಗ್ಗೆಯೂ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಪೊಲೀಸರು ಡಿಮಾಂಡ್​ ಮಾಡಿದ ತಕ್ಷಣ ರಿಮಾಂಡ್​ ನೀಡಲಾಗುತ್ತಿದೆ. ಇದು ಸರಿಯಲ್ಲ. ಬಂಧನದ ಅವಶ್ಯಕತೆಯಿದ್ದರೆ ಮಾತ್ರ ಒಪ್ಪಿಗೆ ನೀಡಬೇಕು. ಆದರೆ, ಮ್ಯಾಜಿಸ್ಟ್ರೆಟ್​ ನ್ಯಾಯಾಲಯಗಳು ಈ ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಅವಲೋಕನ ಮಾಡಿತು.