ಬೆಂಗಳೂರು: ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮೀಸಲು ವಿಧೇಯಕ ಅಂಗೀಕಾರವಾಗುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಳಿಸಿದರು.
ವಿಧಾನಸೌಧದಲ್ಲಿ ಕಾಮನ್ವೆಲ್ತ್ ಸಂಸದೀಯರ ಸಮ್ಮೇಳನ ಉದ್ಘಾಟಸಿ ಮಾತನಾಡಿ, ಮೀಸಲಿನಿಂದ ಎಷ್ಟು ಜನ ಸಂಸತ್-ವಿಧಾನಸೌಧದಿಂದ ಹೊರಬರಬೇಕಾಗುವುದೋ ತಿಳಿಯದು. ಶೇ.50 ರಷ್ಟು ಹೆಚ್ಚುವರಿ ಕ್ಷೇತ್ರಗಳಿವೆ ಎಂದು ಹೇಳಲಾಗುತ್ತಿದ್ದರೂ ಯಾವ ಕ್ಷೇತ್ರಗಳಲ್ಲಿ ಮೀಸಲಾತಿ ಬರುತ್ತದೆ ಗೊತ್ತಿಲ್ಲ ಎಂದರು.
ಮಹಿಳೆಯರಿಲ್ಲದ ಪ್ರಜಾಪ್ರಭುತ್ವ ರೆಕ್ಕೆಯಿಲ್ಲದ ಹಕ್ಕಿಯಂತೆ. ಅವರ ಸಾಮಾಜಿಕ ಆರ್ಥಿಕ ಪರಿಸ್ಥಿತಿ ಜತೆಗೆ ರಾಜಕೀಯ ಸಬಲೀಕರಣವೂ ಆಗಬೇಕು ಎಂಬುದು ನಮ್ಮ ನಂಬಿಕೆ. ಮಹಿಳೆಯರಿಲ್ಲದ ಪ್ರಜಾಪ್ರಭುತ್ವ ರೆಕ್ಕೆಯಿಲ್ಲದ ಹಕ್ಕಿಯಂತೆ. ಎತ್ತರಕ್ಕೇರಲು ಸಾಧ್ಯವಿಲ್ಲ. ಈ ಸಮ್ಮೇಳನ ಹೊಸ ಬೆಳಕು ಹರಡಬೇಕು ಎಂದರು.
15 ಲಕ್ಷಕ್ಕೂ ಹೆಚ್ಚು ಮಹಿಳೆಯರು ಪಂಚಾಯಿತಿ ಮಟ್ಟದಲ್ಲಿ ಅಧಿಕಾರದಲ್ಲಿದ್ದಾರೆ. ಸುಶಿಕ್ಷಿತರಾದ ಅವರು ವ್ಯವಸ್ಥೆಯ ಬಗ್ಗೆ ಅರಿವು ಹೊಂದಿದ್ದಾರೆ. ರಸ್ತೆ , ಸೇತುವೆ, ಬಾವಿ, ಶಾಲೆ ಅಭಿವೃದ್ಧಿ, ಮತ್ತಿತರ ಅಭಿವೃದ್ಧಿ ಕಾರ್ಯಗಳಲ್ಲಿ ಕೈಜೋಡಿಸಿದ್ದಾರೆ ಎಂದು ಸ್ಮರಿಸಿದರು.
ಮಹಿಳಾ ಜನಪ್ರತಿನಿಧಿಗಳಿಗೆ ಸುರಕ್ಷಿತ ಮತ್ತು ಸಮಾನ ಅವಕಾಶಗಳಿರುವ, ಕುಟುಂಬ ಸ್ನೇಹಿ ವಿಧಾನಮಂಡಲ ವ್ಯವಸ್ಥೆ ರೂಪಿಸಬೇಕು. ಸಮ್ಮೇಳನದಲ್ಲಿ ಬಂದ ಸಲಹೆ ಮತ್ತು ಶಿಫಾರಸುಗಳನ್ನು ಕರ್ನಾಟಕ ವಿಧಾನಮಂಡಲದಲ್ಲಿ ಅಳವಡಿಸಲು ಪ್ರಾಮುಖ್ಯತೆ ನೀಡಲಾಗುವುದು ಎಂದು ವಿದಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ್ ತಿಳಿಸಿದರು.
ಪ್ರಜಾಪ್ರಭುತ್ವದ ಭವಿಷ್ಯ ರೂಪಿಸುವ ಶಕ್ತಿಯಾಗಿ ಸೀಯರು ಬೆಳೆಯಬೇಕು. ಸಂಖ್ಯಾ ದೃಷ್ಟಿಯಿಂದ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸದೆ ಆಡಳಿತ ಮತ್ತು ನೀತಿ ನಿರೂಪಣೆಯಲ್ಲಿ ಅವರ ಪ್ರಭಾವ ಹಾಗೂ ಭಾಗವಹಿಸುವಿಕೆ ಬಲಪಡಿಸುವುದು ಮುಖ್ಯ ಎಂದು ವಿಧಾನಪರಿಷತ್ ಸಭಾಪತಿ ಸಲೀಂ ಅಹ್ಮದ್ ಪ್ರತಿಪಾದಿಸಿದರು.
12 ನೇ ಶತಮಾನದಲ್ಲಿ ಬಸವಣ್ಣನವರ ಅನುಭವಮಂಟಪವು ಜಾತಿ ಮತ್ತು ಲಿಂಗಭೇದ ಮೀರಿ ಮಹಿಳೆಯರಿಗೆ ಮುಕ್ತ ವಿಚಾರ ವಿನಿಮಯ ನಡೆಸುವ ವಕಾಶ ಕಲ್ಪಿಸಿತ್ತು. ಅಕ್ಕಮಹಾದೇವಿ ಮತ್ತು ನೀಲಾಂಬಿಕೆ ಅವರಂತಹ ಮಹಿಳಾ ಚಿಂತಕಿಯರು ಈ ಪರಂಪರೆ ಶ್ರೀಮಂತಗೊಳಿಸಿದ್ದಾರೆ ಎಂದು ಸ್ಮರಿಸಿದರು.
ಮಹಿಳೆಯರು ಪ್ರಜಾಪ್ರಭುತ್ವದಲ್ಲಿ ಕೇವಲ ಭಾಗೀದಾರರು ಮಾತ್ರವಲ್ಲ. ಅದರ ಭವಿಷ್ಯ ರೂಪಿಸುವ ಶಕ್ತಿ ಧಾರಿಣಿಯರು ಎಂಬ ಸಂದೇಶ ಬೆಂಗಳೂರಿನ ಈ ಸಮಾವೇಶದ ಮೂಲಕ ಇಡೀ ದೇಶಕ್ಕೆ ರವಾನೆ ಆಗಲಿ ಎಂದರು.
ವಿಧಾನ ಪರಿಷತ್ ಉಪಸಭಾಪತಿ ಡಾ. ಉಮಾಶ್ರೀ, ಪರಿಷತ್ ಕಾರ್ಯದರ್ಶಿ ಜ್ಯೋತಿ, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಇತರರಿದ್ದರು.