ಕೆ.ಆರ್.ಪುರಂನ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಎಂಬಿಎ, ಎಂಸಿಎ ಮತ್ತು ಎಂಟೆಕ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ 
ಬೆಂಗಳೂರು

ಪದವಿ ಪಡೆದವರಲ್ಲಿ ಶೇ.30ರಷ್ಟು ಮಾತ್ರ ಉದ್ಯೋಗಕ್ಕೆ ಅರ್ಹ: ಎಚ್.ಎನ್.ನಾಗಮೋಹನ್ ದಾಸ್

ಕೆ.ಆರ್. ಪುರ: ದೇಶದಲ್ಲಿ ಪ್ರತಿವರ್ಷ ಸುಮಾರು 50 ಲಕ್ಷ ಪದವೀದರರು ಹೊರಬರುತ್ತಿದ್ದು,ಅದರಲ್ಲಿ ಕೇವಲ ಶೇ.30ರಷ್ಟು ಪದವೀದರರು ಮಾತ್ರ ಉದ್ಯೋಗಕ್ಕೆ ಅರ್ಹರಾಗುತ್ತಿದ್ದಾರೆ. ಉಳಿದವರು ನಿರುದ್ಯೋಗಿಗಳಾಗಿದ್ದಾರೆ. ಇದಕ್ಕೆಲ್ಲ ಕಾರಣ ಇಂದಿನ ಔದ್ಯೋಗಿಕ ಪ್ರಪಂಚಕ್ಕೆ ಬೇಕಾದ ತಾಂತ್ರಿಕ ಕೌಶಲ್ಯಗಳು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇಲ್ಲದಿರುವುದು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ತಿಳಿಸಿದ್ದಾರೆ.
ಕೆ.ಆರ್.ಪುರಂನ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ಎಂಬಿಎ, ಎಂಸಿಎ ಮತ್ತು ಎಂಟೆಕ್ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಅಸಂಖ್ಯಾತ ಉದ್ಯೋಗಗಳು ಲಭ್ಯವಿವೆ ಆದರೆ, ಅದಕ್ಕೆ ಬೇಕಾದ ಕೌಶಲ್ಯಗಳು ಇಂದಿನ ಪದವೀಧರರಲ್ಲಿ ಇಲ್ಲವಾಗಿದೆ ಆದ್ದರಿಂದ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ ಹಾಗೆ ವಿದ್ಯಾರ್ಥಿಗಳು ಸಹ ತಮ್ಮ ಶಿಕ್ಷಣದೊಂದಿಗೆ ಅಗತ್ಯ ಕೌಶಲ್ಯಗಳನ್ನು ಕಲಿಯಬೇಕೆಂದು ಕೆರೆ ನೀಡಿದರು.
ಕೇಂಬ್ರಿಡ್ಜ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಿ.ಕೆ ಮೋಹನ್ ಮಾತನಾಡಿ, ನಮ್ಮ ಸಂಸ್ಥೆಯು ಅಂತರರಾಷ್ಟ್ರೀಯ ಮಟ್ಟದ ಸೌಲಭ್ಯಗಳನ್ನು ಹೊಂದಿದ್ದು,ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂಬ ಮಹದಾಸೆಯನ್ನು ಹೊಂದಿದೆ. ಇದರ ಸದುಪಯೋಗವನ್ನು ಎಲ್ಲ ವಿದ್ಯಾರ್ಥಿಗಳು ಪಡೆದು ಸಮಾಜದಲ್ಲಿ ಉತ್ತಮ ನಾಗರಿಕರಾಗುವುದರ ಜತಗೆ ವಿದ್ಯಾರ್ಥಿಗಳು ಕೇವಲ ಉದ್ಯೋಗಸ್ಥರಾಗದೆ ಉದ್ಯೋಗದಾತರಾಗಿ ನೂರಾರು ಜನರಿಗೆ ಉದ್ಯೋಗ ಕಲ್ಪಿಸುವಂತಾಗಬೇಕು ಎಂದು ಹೇಳಿದರು.
ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಬಿ.ವಿ ರವಿಶಂಕರ್ ಮಾತನಾಡಿ, ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯವು ಶಿಕ್ಷಣವನ್ನಷ್ಟೆ ಅಲ್ಲದೆ ವಿದ್ಯಾರ್ಥಿಗಳಿಗೆ ಮುಂದೆ ತಮ್ಮದೆ ಸಂಸ್ಥೆಗಳನ್ನು ಸ್ಥಾಪಿಸಲು ಬೇಕಾದ ಸಲಹೆ, ಸಹಕಾರ ಮತ್ತು ನೆರವನ್ನು ನೀಡುವುದು. ಸಂಸ್ಥೆಯ ಆವರಣದಲ್ಲಿ ಹತ್ತಾರು ಸ್ಟಾರ್ಟ್-ಅಪ್ ಗಳು ಕಾರ್ಯನಿರ್ವಹಿಸುತ್ತಿದ್ದು ವಿದ್ಯಾರ್ಥಿಗಳಿಗೆ ಅಗತ್ಯವಾದ ತರಬೇತಿ ನೀಡಲಾಗುವುದು ಎಂದರು.
ಈ ವೇಳೆ 250ಕ್ಕೂ ಹೆಚ್ಚು ಎಂ.ಬಿ.ಎ, ಎಂ.ಸಿ.ಎ ಮತ್ತು ಎಂ.ಟೆಕ್ ಸ್ನಾತಕೋತ್ತರ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸಲಹೆಗಾರ ಡಾ. ಕೆ.ಎನ್. ಬಾಲಸುಬ್ರಹ್ಮಣ್ಯ ಮೂರ್ತಿ, ಸಹಾಯಕ ನಿರ್ದೇಶಕ ಡಾ. ಇಂದುಮತಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತಿನ್ ಮೋಹನ್, ಉಪ ಪ್ರಾಂಶುಪಾಲ ಡಾ. ನಾಗೇಶ್, ಡೀನ್ ಡಾ. ಸುಬ್ರಮಣ್ಯ ಕಟ್ಟೆ, ಡಾ. ಶಿವಪಂಚಾಕ್ಷರಿ, ಪರೀಕ್ಷಾ ನಿಯಂತ್ರಕ ಡಾ. ಮಂಜುನಾಥರೆಡ್ಡಿ ಮತ್ತಿತರರಿದ್ದರು.