ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ರೀತಿ ಮುನಿಸಿಲ್ಲ. ಕೆಲವರು ನಮ್ಮ ನಡುವೆ ಏನೋ ಆಗಿ ಹೋಗಿದೆ ಎಂಬ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಮ್ಮನಡುವೆ ಸಣ್ಣ ಅಥವಾ ದೊಡ್ಡ ಮುನಿಸು ಯಾವುದೂ ಇಲ್ಲ. ಸಿದ್ದರಾಮಯ್ಯ ಹಿರಿಯರು, ಮಾರ್ಗದರ್ಶಕರು. ಆಗಾಗ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಕೆಲ ವಿಷಗಳ ಬಗ್ಗೆ ಚರ್ಚಿಸುತ್ತೇನೆ ಎಂದು ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ರಾಜಕಾರಣದಲ್ಲಿ ನಿಂದಕರು-ವಿರೋಗಳು ಇರಬೇಕು. ಅವರೆಲ್ಲ ಇದ್ದಾಗಲೇ ನಮ್ಮಂತಹವರು ಶುದ್ಧ ರಾಜಕಾರಣ ಮಾಡಲು ಸಾಧ್ಯ. ಮಹಾಸ್ವಾಮಿಗಳೂ ಸೇರಿ ಕೆಲವರು ಮಾಧ್ಯಮಗಳಲ್ಲಿ ವಿಭಿನ್ನ ರೀತಿ ಬಿಂಬಿಸುತ್ತಿದ್ದಾರೆ. ಈ ಸಂಬಂಧ ನಾವು ಅವರಿಗೆ ತಿಳಿಸಬೇಕಾದ ವಿಷಯ ತಿಳಿಸಿದ್ದೇವೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು ಅವರ ಬಳಿ ಅನೇಕ ವಿಚಾರ ಚರ್ಚಿಸಬೇಕಾದ ಕಾರಣ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೆ. ಹಬ್ಬದ ಶುಭಾಶಯವನ್ನೂ ಕೋರಿದ್ದೇನೆ ಎಂದು ಸಿಎಂ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೋಮವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರ ಜತೆ ಒಂದೂವರೆ ಗಂಟೆಗೂ ಅಕ ಕಾಲ ಚರ್ಚೆ ನಡೆಸುವ ಜತೆಗೆ ದೀಪಾವಳಿ ಶುಭಾಶಯ ಕೋರಿದರು,
ಹಿರಿಯೂರು ಉಪ ಚುನಾವಣೆ, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ , ವಿಧಾನ ಮಂಡಲ ಅವೇಶನದ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ವಿಳಂಬ ಕುರಿತು ಉಭನಾಯಕರು ಸಮಾಲೋಚನೆ ನಡೆಸಿ ವರಿಷ್ಠರ ಮೇಲೆ ಒತ್ತಡ ಹೇರಲು ನಿರ್ಧರಿಸಿದರು.