- ನಗರದ ಉಪನಗರ ರೈಲು ಸೇವೆಗಳ ಕಾರ್ಯಾಚರಣೆಗೆ ವೇಗ
ಬೆಂಗಳೂರು: ನಗರದ ಉಪನಗರ ರೈಲು ಸೇವೆಗಳ ಕಾರ್ಯಾಚರಣೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಲಿರುವ ಸೋಲದೇವನಹಳ್ಳಿ ರೈಲು ನಿರ್ವಹಣಾ ಘಟಕದ ನಿಮಾರ್ಣಕ್ಕಾಗಿ ಬೆಂಗಳೂರು ಇಂಟಿಗ್ರೇಟೆಡ್ ರೈಲ್ ಇನ್್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಎಂಟರ್ಪ್ರೈಸಸ್ (ಬಿ&ರೈಡ್) ಟೆಂಡರ್ ಆಹ್ವಾನಿಸಿದೆ.
ಬೆಂಗಳೂರು ಉಪನಗರ ರೈಲು ಯೋಜನೆಯ (ಬಿಎಸ್ಟಿಪಿ) ನಿರ್ವಹಣಾ ಘಟಕದ ಟೆಂಡರ್ಗೆ ಜಿಎಸ್ಟಿ ಹೊರತುಪಡಿಸಿ 200.03 ಕೋಟಿ ರೂ.ನಿಗದಿಪಡಿಸಲಾಗಿದೆ. ಹಾಗೆಯೇ, ಈ ಟೆಂಡರ್ ಕಾಮಗಾರಿಗೆ ಬಿಡ್ ಸಲ್ಲಿಸಲು ಆ.12 ಕೊನೆಯ ದಿನವಾಗಿದೆ.
ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ (ಐಸಿಎ್) 153 ಬೋಗಿಗಳ ಪೂರೈಕೆಗಾಗಿ 2026ರ ಮೇ 6 ರಂದು ಕಾರ್ಯಾದೇಶ ನೀಡಿದ ಬೆನ್ನಲ್ಲೇ, ನೂತನ ರೈಲುಗಳ ನಿರ್ವಹಣೆಗೆ ಡಿಪೋ ನಿರ್ಮಿಸಲಾಗುತ್ತಿದೆ. ಚಿಕ್ಕಬಾಣಾವರ ಉಪನಗರ ರೈಲು ನಿಲ್ದಾಣದ ಸಮೀಪ ನಿಮಾರ್ಣವಾಗಲಿರುವ ಈ ಘಟಕವು ಕಾರಿಡಾರ್ 2 ಮತ್ತು ಕಾರಿಡಾರ್ 4 ರ ರೈಲುಗಳ ಕಾರ್ಯಾಚರಣೆ ಹಾಗೂ ನಿರ್ವಹಣೆಯ ಹೊಣೆ ಹೊರಲಿದೆ. ಈ ಬೃಹತ್ ಯೋಜನೆಗಾಗಿ ಈಗಾಗಲೇ 26 ಎಕರೆ ಖಾಸಗಿ ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ.
ಇತ್ತೀಚೆಗಷ್ಟೇ 153 ಅತ್ಯಾಧುನಿಕ ಬೋಗಿಗಳಿಗೆ ಆರ್ಡರ್ ನೀಡಲಾಗಿದ್ದು, ಅವುಗಳ ನಿರ್ವಹಣೆ ಮತ್ತು ಸುರಕ್ಷತಾ ತಪಾಸಣೆಗೆ ಅಗತ್ಯವಿರುವ ವಿಶ್ವದರ್ಜೆಯ ಕಾರ್ಯಾಗಾರವನ್ನು ಸೋಲದೇವನಹಳ್ಳಿ ಡಿಪೋ ಒದಗಿಸಲಿದೆ. ಬೆಂಗಳೂರಿನ ಜನತೆಗೆ ಉತ್ತಮ ಹಾಗೂ ಹೈ ಪ್ರೀಕ್ವೆನ್ಸಿ, ವಿಶ್ವಾಸಾರ್ಹ ಮತ್ತು ಸುರಕ್ಷಿತ ಉಪನಗರ ಸಾರಿಗೆಯನ್ನು ಒದಗಿಸುವ ಕಾರ್ಯತಂತ್ರದ ಭಾಗವಾಗಿದೆ ಎಂದು ಬಿ&ರೈಡ್ ವ್ಯವಸ್ಥಾಪಕ ನಿರ್ದೇಶಕ ಲಕ್ಷ್ಮಣ್ ಸಿಂಗ್ ತಿಳಿಸಿದ್ದಾರೆ.