ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ದಿ ಸ್ಕೂಲ್ಸ್ ಆಫ್ ಇಂಡಿಯಾ ಸಂಸ್ಥಾಪಕ ಅಂಕಿತ್ ಪುಷ್ಪರಾಜ್ ವರ್ಮಾ ಮಾತನಾಡಿದರು. ಪ್ರತಿನಿಧಿ ಸುಕೇಶ್, ಧ್ರುವ್ ಗ್ಲೋಬಲ್ ಸ್ಕೂನ್ಸ್ನ ನಿರ್ದೇಶಕಿ ಅನಿಶ್ಕಾ ಮಲ್ಪಾನಿ ಇದ್ದರು.
ಬೆಂಗಳೂರು: ದಿ ಸ್ಕೂಲ್ ಆಫ್ ಇಂಡಿಯಾ ಎಜುಕೇಶನ್ ಸಮಿಟ್ ವತಿಯಿಂದ ಅ.30, 31, ನ.1ರಂದು ರಾಷ್ಟ್ರೀಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಮಹಾರಾಷ್ಟ್ರದ ಖೋಪೋಲಿಯಲ್ಲಿ ಸಮಾವೇಶ ನಡೆಯಲಿದ್ದು, ಭಾಗವಹಿಸುವವರು ಹಾಗೂ ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು ಎಂದು ದಿ ಸ್ಕೂಲ್ಸ್ ಆ್ ಇಂಡಿಯಾ ಸಂಸ್ಥಾಪಕ ಅಂಕಿತ್ ಪುಷ್ಪರಾಜ್ ವರ್ಮಾ ತಿಳಿಸಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಸವಾಲುಗಳು, ಅವಕಾಶಗಳು, ಬದಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಯಲಿದೆ. ದೇಶದ ವಿವಿಧ ರಾಜ್ಯಗಳಿಂದ ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು, ಪ್ರಾಂಶುಪಾಲರು, ಸಂಶೋಧಕರು ಹಾಗೂ ಕೃತಕ ಬುದ್ಧಿಮತ್ತೆ (ಎಐ) ಮತ್ತು ಶೈಕ್ಷಣಿಕ ತಂತ್ರಜ್ಞಾನ ಪರಿಣತರು ಭಾಗವಹಿಸಲಿದ್ದಾರೆ. ಶಿಕ್ಷಣದ ಮುಂದಿನ ಭವಿಷ್ಯ ಕುರಿತು ತೀರ್ಮಾನ ತೆಗೆದುಕೊಳ್ಳುವುದು ಸಮಾವೇಶದ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.
ಧ್ರುವ್ ಗ್ಲೋಬಲ್ ಸ್ಕೂನ್ಸ್ನ ನಿರ್ದೇಶಕಿ ಅನಿಶ್ಕಾ ಮಲ್ಪಾನಿ ಮಾತನಾಡಿ, ಶಾಲಾ ಆಡಳಿತ ಹಾಗೂ ತರಗತಿ ಮಟ್ಟದಲ್ಲಿ ಅನುಷ್ಠಾನಗೊಳಿಸಬಹುದಾದ ಪ್ರಾಯೋಗಿಕ ಪರಿಹಾರಗಳು ಮತ್ತು ಕಾರ್ಯತಂತ್ರಗಳ ಕುರಿತು ಸಮಾವೇಶದಲ್ಲಿ ಚರ್ಚಿಸಲಾಗುವುದು ಎಂದು ಹೇಳಿದರು.
ಬೋಧನಾ ವಿಧಾನಗಳು, ಕಲಿಕೆಯಲ್ಲಿ ಹೊಸತನ, ಶಾಲಾ ನಾಯಕತ್ವ ಮತ್ತು ಸಂಸ್ಥೆಯ ನಿರ್ವಹಣೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸಮಗ್ರ ಬೆಳವಣಿಗೆ ಬಗ್ಗೆ ಚರ್ಚೆಯಾಗಬೇಕಿದೆ ಎಂದು ತಿಳಿಸಿದರು.
ಅವಸಾರಾ ಅಕಾಡೆಮಿಯ ಲಕ್ಷಿ$್ಮಕುಮಾರ್, ಮಲ್ಪಾನಿ ಗ್ರೂಪ್ ಆ್ ಸ್ಕೂಲ್ಸ್ನ ಸಂಜಯ್ ಮಲ್ಪಾನಿ, ಪೊದಾರ್ ಎಜುಕೇಶನ್ ನೆಟ್ವರ್ಕ್ನ ಡಾ.ಸ್ವಾತಿ ಪೊಪಟ್ ವಾಟ್ಸ್ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಲಿದ್ದಾರೆ. ಎಐನ ರಸೆಲ್ ಜಾನ್ ಕೆಲ್ಲಿ, ಅಂತರರಾಷ್ಟ್ರೀಯ ಪಠ್ಯಕ್ರಮಗಳ ಕುರಿತು ಕೆಂಬಿಜ್ಡ್ ಇಂಟರ್ ನ್ಯಾಷನಲ್ನ ಅಲ್ಕಾ ಪಾಂಡೆ, ಎಸ್ಪಿ ಜೈನ್ ಸ್ಕೂಲ್ ಆ್ ಗ್ಲೋಬಲ್ ಮ್ಯಾನೇಜ್ಮೆಂಟ್ನ ಪರಿಮಳ್ ಮರ್ಚೆಂಟ್ ಹಲವು ವಿಷಯಗಳನ್ನು ಮಂಡಿಸಲಿದ್ದಾರೆ ಎಂದರು.