ಅಪರಾಧ ಸುದ್ದಿ  
ಬೆಂಗಳೂರು

ಭಾವಿ ಪತಿ ಕೊಲೆ, ಕ್ಷಮಾದಾನ ತಿರಸ್ಕಾರ

ಭಾವಿ ಪತಿ ಕೊಲೆಗೈದ ಪ್ರಕರಣದಲ್ಲಿ ಶುಭಾ ಶಂಕರ್​ ಮತ್ತು ಡಿ ಅರುಣ್​ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಲು ರಾಜ್ಯಪಾಲರಿಗೆ ಶಿಪಾರಸು ಮಾಡಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಕ್ಷಮಾದಾನ ತಿರಸ್ಕರಿಸಲು ಶಿಫಾರಸು

ಭಾವಿ ಪತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಿ ಶುಭಾ ಶಂಕರ್ ಮತ್ತು ಮತ್ತು ಡಿ. ಅರುಣ್ ವರ್ಮಾ ಅವರು ಸಲ್ಲಿಸಿದ್ದ ಕ್ಷಮಾದಾನದ ಮನವಿ ತಿರಸ್ಕರಿಸಲು ರಾಜ್ಯಪಾಲರಿಗೆಶಿಫಾರಸು ಮಾಡಲು ಸಂಪುಟ ಸಭೆ ತೀರ್ಮಾನಿಸಿದೆ.

ಬೆಂಗಳೂರಿನ 17ನೇ ತ್ವರಿತ ವಿಚಾರಣಾ ನ್ಯಾಯಾಲಯದಲ್ಲಿ ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.

ಸುಪ್ರೀಂ ಕೋರ್ಟ್ 2025ರ ಜುಲೈ 14ರಂದು ನೀಡಿದ ಆದೇಶದಲ್ಲಿ, ಅರ್ಜಿದಾರರಿಗೆ ಭಾರತದ ಸಂವಿಧಾನದ 161ನೇ ವಿಧಿಯಡಿ ರಾಜ್ಯಪಾಲರ ಮುಂದೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಲು ಎಂಟು ವಾರಗಳ ಕಾಲಾವಕಾಶ ನೀಡಿತ್ತು.

ಅರ್ಜಿಗಳನ್ನು ಪರಿಗಣಿಸಿ ನಿರ್ಧಾರ ಕೈಗೊಳ್ಳುವವರೆಗೆ ಅವರನ್ನು ಬಂಧಿಸದಂತೆ ಹಾಗೂ ಶಿಕ್ಷೆಯನ್ನು ಅಮಾನತಿನಲ್ಲಿಡಲು ನ್ಯಾಯಾಲಯ ನಿರ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಕ್ಷಮಾದಾನ ಮನವಿ ತಿರಸ್ಕರಿಸಲು ಶಿಫಾರಸು ಮಾಡಲಾಗಿದೆ.