ಮೆಟ್ರೋ 
ಬೆಂಗಳೂರು

21ರಂದು ದಿನಪೂರ್ತಿ ಸಂಗೀತೋತ್ಸವ | metro

ಪವನ್ ಆಚಾರ್ಯ ನೀರ್ಚಾಲು

ಪ್ರಮುಖ ಮುಖ್ಯಾಂಶಗಳು

  • ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ ಆಯೋಜನೆ
ಬೆಂಗಳೂರು: ವಿಶ್ವ ಸಂಗೀತ ದಿನಾಚರಣೆ (ಜೂ.21) ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದ ಸಮೀಪದ ರಂಗೋಲಿ ಮೆಟ್ರೋ ಕಲಾ ಕೇಂದ್ರದಲ್ಲಿ ದಿನಪೂರ್ತಿ ವಿಶೇಷ ಸಂಗೀತೋತ್ಸವ ಆಯೋಜಿಸಲಾಗಿದೆ. ಎಲ್ಲ ವಯೋಮಾನದ ಹಾಗೂ ವಿವಿಧ ಸಂಗೀತ ಪ್ರಕಾರಗಳ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ನೇರವಾಗಿ ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ಮುಕ್ತ ವೇದಿಕೆಯನ್ನು ಈ ಕಾರ್ಯಕ್ರಮ ಒದಗಿಸಲಿದೆ. ಭಾರತೀಯ ಶಾಸ್ತ್ರೀಯ ಸಂಗೀತ, ಕರ್ಣಾಟಕ ಹಾಗೂ ಹಿಂದೂಸ್ತಾನಿ ಶೈಲಿಗಳಿಂದ ಹಿಡಿದು ಜಾಝ್​, ಪಾಪ್​, ರಾಕ್​, ಜಾನಪದ ಮತ್ತು ಸಮಕಾಲೀನ ಸಂಗೀತ ಸೇರಿ ಎಲ್ಲ ವಿಧದ ಸಂಗೀತ ಕಲಾವಿದರನ್ನು ಭಾಗವಹಿಸಲು ಆಹ್ವಾನಿಸಲಾಗಿದೆ. ಕಲಾ ಕೇಂದ್ರದ ವಿವಿಧ ಮುಕ್ತ ವೇದಿಕೆಗಳಲ್ಲಿ ಹಾಗೂ 120 ಆಸನ ಸಾಮರ್ಥ್ಯದ ಸಭಾಂಗಣದಲ್ಲಿ ದಿನಪೂರ್ತಿ ನೇರ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಆಕರ್ಷಣೆಯಾಗಿ ನಟಿ, ಗಾಯಕಿ ವಸುಂಧರಾ ದಾಸ್​ ಹಾಗೂ ರಾಬರ್ಟೊ ನಾರೇನ್​ ನೇತೃತ್ವದಲ್ಲಿ ಬೆಂಗಳೂರಿನ ಜನಪ್ರಿಯ 'ಕಮ್ಯೂನಿಟಿ ಡ್ರಮ್​ ಜಾಮ್​' ಆಯೋಜಿಸಲಾಗಿದೆ. ಆಸಕ್ತ ಸಂಗೀತಗಾರರು ಜೂ.19ರೊಳಗೆ ನೋಂದಣಿ ಮಾಡಿಸಬೇಕು.