- ಹನ್ನೊಂದು ತಿಂಗಳಲ್ಲಿ 15 ಬಾರಿ ವ್ಯತ್ಯಯ
- ಸಿಗ್ನಲಿಂಗ್ ವೈಫಲ್ಯ, ವಿದ್ಯುತ್ ಪೂರೈಕೆ ಕಡಿತ ಇತ್ಯಾದಿ ದೋಷ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಗರ ಸಂಚಾರದ ಜೀವನಾಡಿ ಎನಿಸಿರುವ ನಮ್ಮ ಮೆಟ್ರೋದಲ್ಲಿ ಇತ್ತೀಚೆಗೆ ಉಂಟಾಗುತ್ತಿರುವ ತಾಂತ್ರಿಕ ದೋಷಗಳ ಸರಣಿ ಸವಾಲಾಗಿ ಪರಿಣಮಿಸಿದೆ. 2025ರ ಸೆಪ್ಟೆಂಬರ್ನಿಂದ 2026ರ ಜುಲೈವರೆಗೆ 11 ತಿಂಗಳಲ್ಲಿ 15 ಬಾರಿ ತಾಂತ್ರಿಕ ಸಮಸ್ಯೆಯಿಂದ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಸಿಗ್ನಲಿಂಗ್ ವೈಫಲ್ಯ, ವಿದ್ಯುತ್ ಪೂರೈಕೆ ಕಡಿತ, ರೈಲು ನಿಯಂತ್ರಣ ವ್ಯವಸ್ಥೆ, ಬಾಗಿಲು ಮುಚ್ಚುವ ವ್ಯವಸ್ಥೆ ಹಾಗೂ ರೈಲಿನ ವಿವಿಧ ಉಪಕರಣಗಳ ದೋಷಗಳು ಇದರಲ್ಲಿ ಸೇರಿವೆ.
ರೈಲುಗಳು ಅಲ್ಲಲ್ಲಿ ನಿಲ್ಲುತ್ತಿರುವುದು ಸಮಸ್ಯೆಯಲ್ಲ, ಸತತವಾಗಿ ಒಂದಿಲ್ಲೊಂದು ಪ್ರಮುಖ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಳ್ಳುತ್ತಿರುವುದು ಮೆಟ್ರೋದ ನಿರ್ವಹಣೆ ಮತ್ತು ವಿಶ್ವಾಸಾರ್ಹತೆಯ ಮೇಲೂ ಪ್ರಶ್ನೆಗಳಿಗೆ ಕಾರಣವಾಗಿದೆ. ಅದರಲ್ಲೂ ದಟ್ಟಣೆ ಅವಧಿಯಲ್ಲಿ ಉಂಟಾಗುವ ಸಣ್ಣ ತಾಂತ್ರಿಕ ದೋಷವೂ ಸಾವಿರಾರು ಪ್ರಯಾಣಿಕರ ಸಮಯ, ಸಂಪರ್ಕ ವ್ಯವಸ್ಥೆ ಹಾಗೂ ನಗರ ಸಂಚಾರದ ಮೇಲೆ ಸರಣಿ ಪರಿಣಾಮ ಬೀರುತ್ತಿದೆ.
ನೇರಳೆ ಮಾರ್ಗವೇ ಹೆಚ್ಚು ಬಾಧಿತ:
43 ಕಿ.ಮೀ. ಉದ್ದದ ಚಲ್ಲಘಟ್ಟ& ವೈಟ್ಫೀಲ್ಡ್ ಮಾರ್ಗದಲ್ಲಿ 5 ತಾಂತ್ರಿಕ ದೋಷ ಟನೆಗಳು ದಾಖಲಾಗಿವೆ. ಪಟ್ಟಂದೂರು ಅಗ್ರಹಾರದಲ್ಲಿ ಸಿಗ್ನಲಿಂಗ್ ದೋಷದಿಂದ ಬ್ರೇಕ್ ಪದೇಪದೆ ಟಿಸಿದ್ದು, ವಿಜಯನಗರದಲ್ಲಿ ರೈಲಿನ ಟ್ರಾಕ್ಷನ್ ವಿದ್ಯುತ್ ಪೂರೈಕೆಯ ಮುಖ್ಯ ಕಾಂಟ್ಯಾಕ್ಟರ್ ವೈಫಲ್ಯಗೊಂಡಿತ್ತು. ಇಂದಿರಾನಗರದ ಇಂಟರ್ಲಾಕಿಂಗ್ ಪ್ರದೇಶದಲ್ಲಿನ ಸಿಗ್ನಲಿಂಗ್ ಪವರ್ ರಿಲೇ ದೋಷದಿಂದಲೂ ಸಂಚಾರಕ್ಕೆ ತೊಂದರೆಯಾಗಿತ್ತು.
ಸೀತಾರಾಮಪಾಳ್ಯದಲ್ಲಿ ಬಾಗಿಲು ಮುಚ್ಚಿದ ಸ್ಥಿತಿಯ ಮಾಹಿತಿ ನಿಯಂತ್ರಣ ವ್ಯವಸ್ಥೆಗೆ ಸರಿಯಾಗಿ ತಲುಪದ ಕಾರಣ ವಿದ್ಯುತ್ ಪೂರೈಕೆ ಸಕ್ರಿಯಗೊಳಿಸಲು ಸಾಧ್ಯವಾಗಿರಲಿಲ್ಲ. ಜೂ.23ರಂದು ಕಬ್ಬನ್ ಪಾರ್ಕ್& ಎಂ.ಜಿ. ರಸ್ತೆ ಭಾಗದಲ್ಲಿ 3ನೇ ಹಳಿಯ (ಥರ್ಡ್ ರೈಲ್) ಬೆಂಬಲ ಇನ್ಸುಲೇಟರ್ಗೆ ಸಂಬಂಧಿಸಿದ ದೋಷದಿಂದ ದೊಡ್ಡ ಪ್ರಮಾಣದ ವ್ಯತ್ಯಯ ಉಂಟಾಗಿತ್ತು. ಈ ಘಟನೆ ನಿಲ್ದಾಣಗಳ ನಡುವೆ ಭಾಗಶ@ ಸೇವೆ ನಡೆಸುವ ಅನಿವಾರ್ಯತೆ ಸೃಷ್ಟಿಸಿತ್ತು.
ಹಳದಿ ಮಾರ್ಗಕ್ಕೂ ಸಿಗ್ನಲ್ ಕಂಟಕ:
ಕಳೆದ ವರ್ಷ ಉದ್ಘಾಟನೆಗೊಂಡ ಆರ್.ವಿ. ರಸ್ತೆ& ಬೊಮ್ಮಸಂದ್ರ ಹಳದಿ ಮಾರ್ಗದಲ್ಲಿ 3 ತಾಂತ್ರಿಕ ವೈಫಲ್ಯ ದಾಖಲಾಗಿವೆ. ಬೊಮ್ಮಸಂದ್ರ ರ್ಟಮಿನಲ್ನಲ್ಲಿ ರೈಲು ಹಿಮ್ಮುಖ ಸಂಚಾರ ವ್ಯವಸ್ಥೆಗೆ ಸಿಗ್ನಲಿಂಗ್ ದೋಷ ಅಡ್ಡಿಪಡಿಸಿತ್ತು. ಎಚ್ಎಸ್ಆರ್ ಲೇಔಟ್&ಬೊಮ್ಮನಹಳ್ಳಿ ಬಳಿ ರೈಲಿನ ಹವಾನಿಯಂತ್ರಣ ಘಟಕದ ಕಾಂಟ್ಯಾಕ್ಟರ್ ಕಾಯಿಲ್ ಸುಟ್ಟು ರೈಲನ್ನು ಡಿಪೋಗೆ ಹಿಂತೆಗೆದುಕೊಳ್ಳಬೇಕಾಯಿತು. ಮತ್ತೊಮ್ಮೆ ಸಿಗ್ನಲಿಂಗ್ ದೋಷದಿಂದ ಬೊಮ್ಮಸಂದ್ರ& ಎಲೆಕ್ಟ್ರಾನಿಕ್ಸ್ ಸಿಟಿ ನಡುವೆ ರೈಲು ಹಿಮ್ಮುಖ ಸಂಚಾರಕ್ಕೆ ತೊಂದರೆಯಾಗಿತ್ತು.
33.46 ಕಿ.ಮೀ. ಮಾದಾವರ& ರೇಷ್ಮೆ ಸಂಸ್ಥೆ ಹಸಿರು ಮಾರ್ಗದಲ್ಲಿ ಅತಿ ಹೆಚ್ಚು 7 ತಾಂತ್ರಿಕ ಘಟನೆಗಳು ವರದಿಯಾಗಿವೆ. ಸ್ವಯಂಚಾಲಿತ ರೈಲು ಕಾರ್ಯಾಚರಣೆ, ರೈಲು ಬಾಗಿಲುಗಳ ಸ್ಥಿತಿ, ಥರ್ಡ್ ರೈಲ್ ವಿದ್ಯುತ್ ಪೂರೈಕೆ, ಕ್ಯಾಬ್ ಬಾಗಿಲಿನ ಲಾಕಿಂಗ್ ಹಾಗೂ ಆನ್ಬೋರ್ಡ್ ಸಿಗ್ನಲಿಂಗ್ ಅಥವಾ ಎಟಿಪಿ ವ್ಯವಸ್ಥೆಯಲ್ಲಿ ದೋಷಗಳು ಕಾಣಿಸಿಕೊಂಡಿವೆ.
ಜೂ.23ರ ಗಂಭೀರ ವ್ಯತ್ಯಯದ ಬಳಿಕ ಕಳೆದ 3 ವರ್ಷದ ಮೆಟ್ರೋ ವ್ಯತ್ಯಯಗಳನ್ನು ಪರಿಶೀಲಿಸಿ, ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಯ ಪರಿಣಾಮಕಾರಿತ್ವದ ಆಡಿಟ್ ನಡೆಸುವಂತೆ ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು ಬಿಎಂಆರ್ಸಿಎಲ್ಗೆ ಸೂಚಿಸಿದ್ದಾರೆ. ಪ್ರಮುಖ ದೋಷಗಳಿಗೆ ರೂಟ್ ಕಾಸ್ ಅನಾಲಿಸಿಸ್ ನಡೆಸಲಾಗುತ್ತಿದ್ದು, ದೋಷಪೂರಿತ ಬಿಡಿಭಾಗಗಳ ಬದಲಾವಣೆ, ತಡೆಗಟ್ಟುವ ನಿರ್ವಹಣೆ, ಪರಿಶೀಲನೆ ಹಾಗೂ ಪ್ರಮುಖ ಸಿಗ್ನಲಿಂಗ್ ಟ್ರಾಕ್ಷನ್ ಉಪಕರಣಗಳ ಮೇಲ್ವಿಚಾರಣೆ ಹೆಚ್ಚಿಸಲಾಗುತ್ತಿದೆ. ಮರುಕಳಿಸುವ ದೋಷಗಳ ಪ್ರಮಾಣವನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.