ನಮ್ಮ ಮೆಟ್ರೋ ಗುಲಾಬಿ ಮಾರ್ಗದ ಸಿದ್ಧತೆಗಳನ್ನು ಸಚಿವ ಕೃಷ್ಣ ಬೈರೇಗೌಡ ಪರಿಶೀಲಿಸಿದರು. ಸಂಸದ ತೇಜಸ್ವಿ ಸೂರ್ಯ ಇದ್ದರು.
- ಸಚಿವ ಕೃಷ್ಣ ಬೈರೇಗೌಡ ಮಾಹಿತಿ
- ಪಿಂಕ್ ಲೈನ್ ಮೆಟ್ರೋ ಪರಿಶೀಲನೆ
ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನಮ್ಮ ಮೆಟ್ರೋದ ಬಹುನಿರೀತ ಗುಲಾಬಿ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದ್ದು, ಶ್ರೀದಲ್ಲೇ ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಲಿದೆ. ಸೆಪ್ಟೆಂಬರ್ ಒಳಗಾಗಿ ಉದ್ಘಾಟನೆಗೆ ಸೂಕ್ತ ದಿನಾಂಕ ಸಿಗುವ ಭರವಸೆ ಇದೆ. ಕೇಂದ್ರ ಸರ್ಕಾರದಿಂದ ನಿಗದಿಯಾಗುತ್ತಿದ್ದಂತೆಯೇ, ಕಾಳೇನ ಅಗ್ರಹಾರ (ಬನ್ನೇರುಟ್ಟ ರಸ್ತೆ) ದಿಂದ ತಾವರೆಕೆರೆಯವರೆಗಿನ ಮಾರ್ಗದಲ್ಲಿ ರೈಲು ಸಂಚಾರ ಶುರು ಆಗಲಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬುಧವಾರ ಗುಲಾಬಿ ಮಾರ್ಗದ ಸಿದ್ಧತೆಗಳನ್ನು ಪರಿಶೀಲಿಸಿದ ಅವರಿಗೆ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಅಧಿಕಾರಿಗಳು ಬಿಇಎಂಎಲ್ ಸಂಸ್ಥೆ ತಯಾರಿಸಿರುವ ಅತ್ಯಾಧುನಿಕ ಮೆಟ್ರೋ ರೈಲುಗಳ ಕುರಿತು ಮಾಹಿತಿ ನೀಡಿದರು. ರೈಲುಗಳು ಸುಮಾರು ಶೇ.70 ಸ್ವದೇಶೀಯವಾಗಿದ್ದು, ಸ್ವಯಂಚಾಲಿತ ರೈಲು ಕಾರ್ಯಾಚರಣೆ ಹಾಗೂ ಅತ್ಯಾಧುನಿಕ ಚಾಲಕರಹಿತ ರೈಲು ಕಾರ್ಯಾಚರಣೆ ವ್ಯವಸ್ಥೆಗಳನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣದಲ್ಲಿ ಅತ್ಯಾಧುನಿಕ ಕಮ್ಯುನಿಕೇಷನ್ ಬೇಸ್ಢ್ ಟೆನ್ ಕಂಟ್ರೋಲ್ ಸಿಗ್ನಲಿಂಗ್ ವ್ಯವಸ್ಥೆ, ಸ್ಟೇಷನ್ ಕಂಟ್ರೋಲ್ ರೂಮ್ ಹಾಗೂ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಜತೆಗೆ ಸಂಯೋಜಿತವಾಗಿರುವ ಆಟೋಮ್ಯಾಟಿಕ್ ಫೇರ್ ಕಲೆನ್ ವ್ಯವಸ್ಥೆಯ ಮಾಡಲಾಗಿದೆ. ಹೊಸ ರೋಲಿಂಗ್ ಸ್ಟಾಕ್ಗೆ ರೈಲ್ವೆ ಮಂಡಳಿಯ ಅನುಮೋದನೆ ಶ್ರೀದಲ್ಲೆ ದೊರೆಯುವ ನಿರೀೆಯಿದೆ. ಮೆಟ್ರೋ ರೈಲ್ವೆ ಸುರತಾ ಆಯುಕ್ತರು ಸುರತಾ ಪರಿಶೀಲನೆ ನಡೆಸಿ, ಅನುಮೋದನೆಯ ಮೇರೆಗೆ ಸಾರ್ವಜನಿಕ ಪ್ರಯಾಣಿಕರ ಸಂಚಾರಕ್ಕೆ ತೆರೆಯಲಾಗುವುದು ಎಂದು ಮೆಟ್ರೊ ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ತೆರಳಿ ನಿಲ್ದಾಣದ ಕಾಮಗಾರಿ, ಭದ್ರತೆ ಮತ್ತು ಸಂಚಾರ ವ್ಯವಸ್ಥೆಯ ಬಗ್ಗೆ ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದರು. ಆ ನಂತರ ತೇಜಸ್ವಿ ಸೂರ್ಯ ಅವರ ಜತೆಗೆ ಮೆಟ್ರೋ ಲೋಕೋ ಪೈಲಟ್ ಕ್ಯಾಬಿನ್ನಲ್ಲಿ ಕುಳಿತು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೂ ಸಂಚರಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪರಿಶೀಲನೆ ವೇಳೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಎ. ಕೃಷ್ಣಪ್ಪ, ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಸಿ. ಜಾಫರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಗುಲಾಬಿ ಮಾರ್ಗವನ್ನು ಸಾರ್ವಜನಿಕ ಸೇವೆಗೆ ತೆರೆಯಲು ಅಗತ್ಯವಿರುವ ರೈಲುಗಳು ಲಭ್ಯವಿದೆ. ರೈಲುಗಳು ನಿಗದಿತ ಪರೀೆ ಮತ್ತು ಪ್ರಯೋಗಗಳ ಹಂತದಲ್ಲಿದ್ದು, ಪ್ರಯಾಣಿಕರ ಸೇವೆಗೆ ನಿಯೋಜಿಸುವ ಮೊದಲು ಕಡ್ಡಾಯವಾಗಿ 750 ಕಿ.ಮೀ. ಸಂಚರಿಸುವ ಪರೀೆಯನ್ನು ಪೂರ್ಣಗೊಳಿಸಬೇಕಾಗಿದೆ. ರೈಲು ಚಾಲಕರನ್ನು ಗುರುತಿಸಲಾಗಿದ್ದು, ಅವರಿಗೆ ಅಗತ್ಯವಿರುವ ಕಡ್ಡಾಯ ತರಬೇತಿಯನ್ನು ಈ ವಾರದೊಳಗೆ ಪೂರ್ಣಗೊಳಿಸುವ ನಿರೀೆಯಿದೆ ಎಂದು ಅಧಿಕಾರಿಗಳು ತಿಳಿಸಿದರು.
ಬಿಎಂಆರ್ಸಿಎಲ್ ಗುಲಾಬಿ ಮಾರ್ಗವನ್ನು ಈ ತಿಂಗಳ ಅಂತ್ಯದೊಳಗೆ ಉದ್ಘಾಟಿಸುವ ಗುರಿ ಹೊಂದಿದ್ದು, ನಿಗದಿತ ಗಡುವಿನೊಳಗೆ ಕಾಮಗಾರಿ ಪೂರ್ಣಗೊಳಿಸಿ, ಉದ್ಘಾಟನೆಗೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ 15 ದಿನಗಳಲ್ಲಿ ರೋಲಿಂಗ್ ಸ್ಟಾಕ್ ಅನುಮತಿ ದೊರೆಯುವ ನಿರೀಕ್ಷೆಯಿದ್ದು, ನಂತರ ಇಡೀ ಮಾರ್ಗಕ್ಕೆ ಅಗತ್ಯವಿರುವ ಅನುಮತಿ ದೊರೆಯಲಿದೆ. ಬೆಂಗಳೂರಿಗೆ ಇನ್ನಷ್ಟು ಸಾರ್ವಜನಿಕ ಸಾರಿಗೆ ಬೇಕೇ ಹೊರತು, ಟನಲ್ ರಸ್ತೆಗಳಂತಹ ಅವೈಜ್ಞಾನಿಕ ಯೋಜನೆಗಳಲ್ಲ.
ಮೊದಲ ಹಂತದ ನಿಲ್ದಾಣಗಳು ಯಾವೆಲ್ಲ?
* ಕಾಳೇನ ಅಗ್ರಹಾರ * ಹುಳಿಮಾವು * ಐಐಎಂ-ಬಿ * ಜೆ.ಪಿ. ನಗರ 4ನೇ ಹಂತ * ಜಯದೇವ ಆಸ್ಪತ್ರೆ (ಹಳದಿ ಮಾರ್ಗದ ಜತೆ ಇಂಟರ್ಚೇಂಜ್) *ತಾವರೆಕೆರೆ