ಏರ್ಪೋರ್ಟ್ನಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಸಂಬಂಧ ಗುರುವಾರ ಬಿಎಂಆರ್ಸಿಎಲ್ ಮತ್ತು ಬಿಐಎಎಲ್ ಸಂಸ್ಥೆಗಳ ಸಮನ್ವಯ ಸಭೆ ನಡೆಯಿತು. ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಸಿ. ಜಾಫರ್ ಹಾಗೂ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಇದ್ದರು.
- ಬಿಎಂಆರ್ಸಿಎಲ್-ಬಿಐಎಎಲ್ ಅಧಿಕಾರಿಗಳ ಸಮನ್ವಯ ಸಭೆ
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೆಟ್ರೋ ಕಾಮಗಾರಿಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್ಸಿಎಲ್) ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಅಧಿಕಾರಿಗಳು ಗುರುವಾರ ಸಮನ್ವಯ ಸಭೆ ನಡೆಸಿ, ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪಿ.ಸಿ. ಜಾಫರ್ ಹಾಗೂ ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಭಯ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ವಿಮಾನ ನಿಲ್ದಾಣ ರ್ಟಮಿನಲ್ ಮೆಟ್ರೋ ನಿಲ್ದಾಣ ಹಾಗೂ ವಿಮಾನ ನಿಲ್ದಾಣ ಪಶ್ಚಿಮ ಮೆಟ್ರೋ ನಿಲ್ದಾಣಗಳ ನಿಮಾರ್ಣಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಹಳಿ ಅಳವಡಿಕೆ, ವಿದ್ಯುತ್ ಎಳೆತ ವ್ಯವಸ್ಥೆ, ಸಿಗ್ನಲಿಂಗ್, ವಾಸ್ತುಶಿಲ್ಪದ ಅಂತಿಮ ಕಾಮಗಾರಿ ಸೇರಿ ವಿವಿಧ ವ್ಯವಸ್ಥೆಗಳ ಅನುಷ್ಠಾನ ಹಾಗೂ ಎರಡೂ ಸಂಸ್ಥೆಗಳ ತಂಡಗಳ ನಡುವಿನ ಸಮನ್ವಯದ ಕುರಿತು ಅಧಿಕಾರಿಗಳು ಪರಿಶೀಲಿಸಿದರು.
ಸಭೆ ಬಳಿಕ ಅಧಿಕಾರಿಗಳು ವಿಮಾನ ನಿಲ್ದಾಣ ರ್ಟಮಿನಲ್ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, ವಿವಿಧ ವ್ಯವಸ್ಥೆಗಳ ಅಳವಡಿಕೆ ಹಾಗೂ ಪ್ರಯಾಣಿಕರಿಗೆ ಕಲ್ಪಿಸಲಾಗುತ್ತಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದರು.
ವಿಮಾನ ನಿಲ್ದಾಣ ಟರ್ಮಿಮಿನಲ್ ಮೆಟ್ರೋ ನಿಲ್ದಾಣವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರ್ಟಮಿನಲ್&2ಕ್ಕೆ ನೇರ ಸಂಪರ್ಕ ಕಲ್ಪಿಸಲಿದೆ. ರ್ಟಮಿನಲ್&1ಕ್ಕೆ ಟ್ರಾವೆಲೇಟರ್ ಸೌಲಭ್ಯ ಹೊಂದಿರುವ ಪಾದಚಾರಿ ಮೇಲ್ಸೇತುವೆ ಮೂಲಕ ಸಂಪರ್ಕ ಒದಗಿಸಲಾಗುತ್ತದೆ. ನಿಲ್ದಾಣದಲ್ಲಿ ಬ್ಯಾಗೇಜ್ ತಪಾಸಣೆ, ಬ್ಯಾಗೇಜ್ ಡ್ರಾಪ್ ಹಾಗೂ ಚೆಕ್-ಇನ್ ಕೌಂಟರ್ಗಳಂತಹ ಪ್ರಯಾಣಿಕಸ್ನೇಹಿ ಸೌಲಭ್ಯಗಳನ್ನೂ ಕಲ್ಪಿಸಲಾಗುತ್ತಿದೆ. ಬಹುಮಾದರಿ ಸಾರಿಗೆ ಕೇಂದ್ರದಲ್ಲಿರುವ ಈ ಮೆಟ್ರೋ ನಿಲ್ದಾಣವು ಕಾರು ಪಾರ್ಕಿಂಗ್ ಹಾಗೂ ನಗರದೊಳಗಿನ ಮತ್ತು ಅಂತರನಗರ ಬಸ್ ಸೇವೆಗಳೊಂದಿಗೆ ತಡೆರಹಿತ ಸಂಪರ್ಕ ಒದಗಿಸಲಿದೆ.